ಏಪ್ರಿಲ್ 1 ರಿಂದ ನಗದು ಟೋಲ್ ಪಾವತಿ ಬಂದ್: ಸಂಪೂರ್ಣ ಡಿಜಿಟಲ್ ವ್ಯವಸ್ಥೆಗೆ NHAI ಮುಂದು!

(ನ್ಯೂಸ್‌ ಕಡಬ) newskadaba.com,  ಫೆ.21 :   ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಏಪ್ರಿಲ್ 1ರಿಂದ ದೇಶಾದ್ಯಂತ ಟೋಲ್ ಪ್ಲಾಜಾಗಳಲ್ಲಿ ನಗದು ವಹಿವಾಟನ್ನು ಸ್ಥಗಿತಗೊಳಿಸಲು ಯೋಜನೆ ರೂಪಿಸಿದೆ. ಸಂಪೂರ್ಣ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಹೊಸ ನಿಯಮ ಜಾರಿಗೆ ಬಂದರೆ, ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಮಾತ್ರ ಟೋಲ್ ಪಾವತಿ ಸಾಧ್ಯವಾಗುತ್ತದೆ. ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳು ಯುಪಿಐ ಮೂಲಕ ಪಾವತಿಸಿದರೆ 1.25% ಹೆಚ್ಚುವರಿ ಶುಲ್ಕವನ್ನು ಕಟ್ಟಬೇಕಾಗುತ್ತದೆ.

ಈ ನಿರ್ಧಾರದಿಂದ ಟೋಲ್ ಪ್ಲಾಜಾಗಳಲ್ಲಿ ದಟ್ಟಣೆ ಕಡಿಮೆ ಆಗುವುದರ ಜೊತೆಗೆ ವಹಿವಾಟಿನಲ್ಲಿ ಹೆಚ್ಚಿನ ಸ್ಥಿರತೆ, ಪಾರದರ್ಶಕತೆ ಹಾಗೂ ಸುಗಮ ಪ್ರಯಾಣ ಸಾಧ್ಯವಾಗಲಿದೆ ಎಂದು ಎನ್‌ಹೆಚ್‌ಎಐ ತಿಳಿಸಿದೆ.

Scroll to Top