ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ನಾಳೆ (ಫೆ.17) 2026ರ ಮೊದಲ ‘ಕಂಕಣ ಸೂರ್ಯಗ್ರಹಣ’ – News Kadaba

ನಾಳೆ (ಫೆ.17) 2026ರ ಮೊದಲ ‘ಕಂಕಣ ಸೂರ್ಯಗ್ರಹಣ’

(ನ್ಯೂಸ್ ಕಡಬ) newskadaba.com ಫೆ. 16. 2026ನೇ ವರ್ಷದ ಮೊದಲ ಸೂರ್ಯಗ್ರಹಣ ನಾಳೆ (ಫೆ.17) ಗೋಚರವಾಗಲಿದೆ. ರಿಂಗ್ ಆಫ್ ಫೈರ್ ಎಂದು ಕರೆಯಲಾಗುವ ಈ ಗ್ರಹಣವನ್ನು ಭಾರತದಲ್ಲಿ ಕಂಕಣ ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ.

ಮಂಗಳವಾರ ಮಧ್ಯಾಹ್ನ 3:26ರ ವೇಳೆಗೆ ಪ್ರಾರಂಭವಾಗಲಿರುವ ಗ್ರಹಣ ಸಂಜೆ 7:57ಕ್ಕೆ ಕೊನೆಗೊಳ್ಳಲಿದೆ. ಈ ಕಂಕಣ ಸೂರ್ಯಗ್ರಹಣ 2  ನಿಮಿಷ 20 ಸೆಕೆಂಡ್ ಗಳ ಕಾಲ ಇರಲಿದ್ದು, ಸಂಪೂರ್ಣ ಸೂರ್ಯಗ್ರಹಣದ ವೇಳೆ ಸೂರ್ಯನ ಕೇಂದ್ರದ 96%ರಷ್ಟನ್ನು ಚಂದ್ರ ಆವರಿಸಲಿದ್ದಾನೆ. ಆದರೆ ಇದು ಭಾರತದಲ್ಲಿ ಗೋಚರವಾಗುವುದಿಲ್ಲ.

ಬದಲಾಗಿ ಅಂಟಾರ್ಟಿಕಾ, ದಕ್ಷಿಣ ಆಫ್ರಿಕಾ ಪ್ರದೇಶದಲ್ಲಿ, ಟಾಂಜಾನಿಯಾ, ಜಾಂಬಿಯಾ ಮತ್ತು ಜಿಂಬಾಬ್ವೆಯಂತಹ ದೇಶಗಳಲ್ಲಿ ಗೋಚರವಾಗಲಿದೆ. ಆಕಾಶವೀಕ್ಷಕರು ವಿಶೇಷ ವೀಕ್ಷಣಾ ಸಾಧನಗಳನ್ನು ಬಳಸಿಕೊಂಡು ಗ್ರಹಣ ವೀಕ್ಷಿಸಲಿದ್ದಾರೆ ಎನ್ನಲಾಗಿದೆ.

Scroll to Top