(ನ್ಯೂಸ್ ಕಡಬ) newskadaba.com ಫೆ. 16. 2026ನೇ ವರ್ಷದ ಮೊದಲ ಸೂರ್ಯಗ್ರಹಣ ನಾಳೆ (ಫೆ.17) ಗೋಚರವಾಗಲಿದೆ. ರಿಂಗ್ ಆಫ್ ಫೈರ್ ಎಂದು ಕರೆಯಲಾಗುವ ಈ ಗ್ರಹಣವನ್ನು ಭಾರತದಲ್ಲಿ ಕಂಕಣ ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ.
ಮಂಗಳವಾರ ಮಧ್ಯಾಹ್ನ 3:26ರ ವೇಳೆಗೆ ಪ್ರಾರಂಭವಾಗಲಿರುವ ಗ್ರಹಣ ಸಂಜೆ 7:57ಕ್ಕೆ ಕೊನೆಗೊಳ್ಳಲಿದೆ. ಈ ಕಂಕಣ ಸೂರ್ಯಗ್ರಹಣ 2 ನಿಮಿಷ 20 ಸೆಕೆಂಡ್ ಗಳ ಕಾಲ ಇರಲಿದ್ದು, ಸಂಪೂರ್ಣ ಸೂರ್ಯಗ್ರಹಣದ ವೇಳೆ ಸೂರ್ಯನ ಕೇಂದ್ರದ 96%ರಷ್ಟನ್ನು ಚಂದ್ರ ಆವರಿಸಲಿದ್ದಾನೆ. ಆದರೆ ಇದು ಭಾರತದಲ್ಲಿ ಗೋಚರವಾಗುವುದಿಲ್ಲ.
ಬದಲಾಗಿ ಅಂಟಾರ್ಟಿಕಾ, ದಕ್ಷಿಣ ಆಫ್ರಿಕಾ ಪ್ರದೇಶದಲ್ಲಿ, ಟಾಂಜಾನಿಯಾ, ಜಾಂಬಿಯಾ ಮತ್ತು ಜಿಂಬಾಬ್ವೆಯಂತಹ ದೇಶಗಳಲ್ಲಿ ಗೋಚರವಾಗಲಿದೆ. ಆಕಾಶವೀಕ್ಷಕರು ವಿಶೇಷ ವೀಕ್ಷಣಾ ಸಾಧನಗಳನ್ನು ಬಳಸಿಕೊಂಡು ಗ್ರಹಣ ವೀಕ್ಷಿಸಲಿದ್ದಾರೆ ಎನ್ನಲಾಗಿದೆ.













