ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಬದುಕು ಮುಗಿಸಿದ ತಾಯಿ-ಮಗಳು ಸ್ಥಳೀಯರ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣು – News Kadaba

ಬದುಕು ಮುಗಿಸಿದ ತಾಯಿ-ಮಗಳು ಸ್ಥಳೀಯರ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣು

(ನ್ಯೂಸ್‌ ಕಡಬ) newskadaba.com,  ಫೆ.09 : ಪಕ್ಕದ ಮನೆಯವರ ಕಿರುಕುಳ ಮತ್ತು ಬೆದರಿಕೆಗೆ ಬೇಸತ್ತು ತಾಯಿ-ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಮಂಡ್ಯ ಜಿಲ್ಲೆಯಲ್ಲಿ ಕೇಳಿ ಬಂದಿದೆ. ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ನಡೆದ ಈ ದಾರುಣ ಘಟನೆಯಿಂದ ಇಡೀ ಗ್ರಾಮವೇ ಶೋಕದಲ್ಲಿದೆ.

ಮೃತರನ್ನು ಪ್ರಿಯಾಂಕಾ (19) ಮತ್ತು ಅವರ ತಾಯಿ ಶಕುಂತಲಾದೇವಿ (46) ಎಂದು ಗುರುತಿಸಲಾಗಿದೆ. ಇಬ್ಬರೂ ತಮ್ಮ ಮನೆಯಲ್ಲೇ ಒಟ್ಟಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಘಟನೆಗೆ ಪಕ್ಕದ ಮನೆಯವರ ನಿರಂತರ ಕಿರುಕುಳ ಮತ್ತು ಬೆದರಿಕೆಯೇ ಕಾರಣ ಎನ್ನುವ ಆರೋಪ ಕುಟುಂಬಸ್ಥರಿಂದ ಕೇಳಿಬಂದಿದೆ.

ಶಕುಂತಲಾದೇವಿ ತಮ್ಮ ಮಗಳ ಮದುವೆಗೆ ಸಿದ್ಧತೆ ನಡೆಸುತ್ತಿದ್ದರು. ಪ್ರಿಯಾಂಕಾ ಕೂಡ ಹೊಸ ಜೀವನ ಆರಂಭಿಸುವ ಕನಸಿನಲ್ಲಿದ್ದಳು..ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪಕ್ಕದ ಮನೆಯವರು ನಿಜಕ್ಕೂ ಬೆದರಿಕೆ ಹಾಕಿದ್ದರೇ? ಯಾವ ಕಾರಣಕ್ಕೆ ಕಿರುಕುಳ ನೀಡಲಾಗುತ್ತಿತ್ತು? ಎಂಬ ಎಲ್ಲಾ ಅಂಶಗಳನ್ನು ಪೊಲೀಸರು ತನಿಖೆ ಮೂಲಕ ಪತ್ತೆ ಹಚ್ಚಲಿದ್ದಾರೆ. ಈ ಘಟನೆ ಊರು-ಕೇರಿಗಳಲ್ಲಿ ನಡೆಯುವ ಸಣ್ಣ ಜಗಳಗಳು ಎಷ್ಟು ಭೀಕರ ಪರಿಣಾಮಕ್ಕೆ ಕಾರಣವಾಗಬಹುದು ಎಂಬುದಕ್ಕೆ ಮತ್ತೊಂದು ಕಳವಳಕಾರಿ ಉದಾಹರಣೆಯಾಗಿದೆ.

Scroll to Top