(ನ್ಯೂಸ್ ಕಡಬ) newskadaba.com ದೆಹಲಿ,ಮೇ.8. ಕಥುವಾದ 8 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ಜಮ್ಮು ಮತ್ತು ಕಾಶ್ಮೀರದ ಹೊರಗೆ ಪಂಜಾಬ್ ನ ಪಠಾನ್ ಕೋಟ್ ಗೆ ವರ್ಗಾಯಿಸುವಂತೆ ಸೋಮವಾರದಂದು ಸುರ್ಪಿಂಕೋರ್ಟ್ ಆದೇಶ ಹೊರಡಿಸಿದೆ.
ಈ ಪ್ರಕರಣದಲ್ಲಿ ಆರೋಪಿಗಳನ್ನು ಬೆಂಬಲಿಸುವ ಸಂಗತಿಗಳು ಅಧಿಕಗೊಂಡಿದೆ ಎಂದು ಕತುವಾದಿಂದ ಪ್ರಕರಣವನ್ನು ವರ್ಗಾವಣೆ ಮಾಡಬೇಕೆಂದು ಆಸಿಫಾಳ ಕುಟುಂಬವು ಮನವಿ ಮಾಡಿತ್ತು. ಸುಪ್ರೀಂ ಕೋರ್ಟ್ ದಿನನಿತ್ಯದ ಕ್ಯಾಮರಾ ವಿಚಾರಣೆಗೆ ಆದೇಶಿಸಿದೆ ಮತ್ತು ಪ್ರಕರಣದ ಪ್ರಗತಿಗೆ ಈ ಮೇಲ್ವಿಚಾರಣೆ ಸಹಕರಿಸಲಿದೆ ಎಂದು ತಿಳಿಸಿದೆ. ನ್ಯಾಯಾಲಯವು ಜಮ್ಮು ಕಾಶ್ಮೀರ ಸರಕಾರವನ್ನು ವಿಶೇಷ ಸಾರ್ವಜನಿಕ ಅಭಿಯೋಜಕನನ್ನು ನೇಮಕ ಮಾಡಲು ಸಹ ಅನುಮತಿಸಿದೆ. ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಸುರ್ಪಿಂಕೋರ್ಟ್ ನಿರಾಕರಿಸಿದೆ.