(ನ್ಯೂಸ್ ಕಡಬ) newskadaba.com,ಜ.19 : ಭಾರತ ಮತ್ತೊಮ್ಮೆ ವಿಶ್ವದ ಗಮನ ಸೆಳೆದಿದೆ. ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹರಿಯ ಕೈಟ್ವಾಲಿಯಾ ಗ್ರಾಮದಲ್ಲಿ ವಿಶ್ವದ ಅತಿದೊಡ್ಡ ಏಕ ಶಿವಲಿಂಗವನ್ನು ಅಧಿಕೃತವಾಗಿ ಪ್ರತಿಷ್ಠಾಪಿಸುವ ಮೂಲಕ ದೇಶವು ಐತಿಹಾಸಿಕ ದಾಖಲೆಗೆ ನಾಂದಿ ಹಾಡಿದೆ.
ವಿರಾಟ್ ರಾಮಾಯಣ ದೇವಾಲಯ ಆವರಣದಲ್ಲಿ ನಡೆದ ಈ ಭವ್ಯ ಶಿವಲಿಂಗ ಪ್ರತಿಷ್ಠಾಪನಾ ಸಮಾರಂಭವು ಅಪಾರ ಧಾರ್ಮಿಕ ವೈಭವಕ್ಕೆ ಸಾಕ್ಷಿಯಾಯಿತು. ವಾರಣಾಸಿ ಹಾಗೂ ಅಯೋಧ್ಯೆಯಿಂದ ಆಗಮಿಸಿದ ಪಂಡಿತರು ವೇದಮಂತ್ರಗಳ ಪಠಣದೊಂದಿಗೆ ಶಿವಲಿಂಗದ ಪ್ರಾಣ ಪ್ರತಿಷ್ಠೆ ನೆರವೇರಿಸಿದರು. ವಿಶೇಷ ಪೂಜೆಗಳು ನಡೆಯಿದ್ದು, ಸಮಾರಂಭದ ಭಾಗವಾಗಿ ಹೆಲಿಕಾಪ್ಟರ್ ಮೂಲಕ ಹೂವಿನ ಮಳೆಯನ್ನೂ ಸುರಿಸಲಾಯಿತು…
210 ಮೆಟ್ರಿಕ್ ಟನ್ ಶಿವಲಿಂಗ
ಈ ಶಿವಲಿಂಗವು ಸಂಪೂರ್ಣವಾಗಿ ಗ್ರಾನೈಟ್ ಕಲ್ಲಿನಿಂದ ನಿರ್ಮಿಸಲ್ಪಟ್ಟಿದ್ದು, ಇದರ ಎತ್ತರ 33 ಅಡಿ ಮತ್ತು ತೂಕ ಸುಮಾರು 210 ಮೆಟ್ರಿಕ್ ಟನ್ ಆಗಿದೆ. ಇದು ಜಗತ್ತಿನಲ್ಲೇ ಅತಿದೊಡ್ಡ ಏಕ ಶಿವಲಿಂಗ ಎಂದು ಹೇಳಲಾಗುತ್ತಿದೆ. ಈ ಬೃಹತ್ ಶಿವಲಿಂಗವನ್ನು ಸ್ಥಾಪಿಸಲು ಎರಡು ದೊಡ್ಡ ಕ್ರೇನ್‌ಗಳ ಸಹಾಯವನ್ನು ಪಡೆದುಕೊಳ್ಳಲಾಗಿತ್ತು.






