ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಕೆಎಸ್‌ಆರ್‌ಟಿಸಿ ಚಾಲಕರಿಗೆ ಭರ್ಜರಿ ಸಿಹಿ ಸುದ್ದಿ! – News Kadaba

ಕೆಎಸ್‌ಆರ್‌ಟಿಸಿ ಚಾಲಕರಿಗೆ ಭರ್ಜರಿ ಸಿಹಿ ಸುದ್ದಿ!

(ನ್ಯೂಸ್‌ ಕಡಬ) newskadaba.com,ಡಿ.16 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಅಪಘಾತ ರಹಿತ ಸೇವೆ ಸಲ್ಲಿಸುವ ಚಾಲಕರಿಗೆ ನೀಡುವ ಪ್ರೋತ್ಸಾಹ ಧನವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ.ಕೆಎಸ್‌ಆರ್‌ಟಿಸಿ ಎಂಡಿ ಅಕ್ರಂ ಪಾಷಾ ಅವರು ಈ ಕುರಿತು ಮಾಹಿತಿ ನೀಡಿದ್ದು, ಪರಿಷ್ಕೃತ ವಿವರಗಳು ಹೀಗಿವೆ:

ಚಿನ್ನದ ಪದಕ ವಿಜೇತ ಚಾಲಕರಿಗೆ: ನಗದು ಪುರಸ್ಕಾರವನ್ನು ₹5,000 ರಿಂದ ₹10,000 ಕ್ಕೆ ಹೆಚ್ಚಿಸಲಾಗಿದೆ. ಮಾಸಿಕ ಭತ್ಯೆಯನ್ನು ₹500 ರಿಂದ ₹1,000 ಕ್ಕೆ ಏರಿಕೆ ಮಾಡಲಾಗಿದೆ.

ಬೆಳ್ಳಿ ಪದಕ ವಿಜೇತ ಚಾಲಕರಿಗೆ: ನಗದು ಪುರಸ್ಕಾರವನ್ನು ₹2,500 ರಿಂದ ₹5,000 ಕ್ಕೆ ಹೆಚ್ಚಿಸಲಾಗಿದೆ. ಮಾಸಿಕ ಭತ್ಯೆಯನ್ನು ₹250 ರಿಂದ ₹500 ಕ್ಕೆ ಏರಿಕೆ ಮಾಡಲಾಗಿದೆ.ಈ ಪರಿಷ್ಕೃತ ನಗದು ಪುರಸ್ಕಾರವು ಜನವರಿ 1, 2026 ರಿಂದ ಜಾರಿಗೆ ಬರಲಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ. ಈ ಮೂಲಕ ಸುರಕ್ಷಿತ ಚಾಲನೆಗೆ ನಿಗಮವು ಮತ್ತಷ್ಟು ಉತ್ತೇಜನ ನೀಡಿದೆ.

Scroll to Top