ಅತ್ಯಾಚಾರ ಪ್ರಕರಣ: ಗರ್ಭಿಣಿಯಾಗಿದ್ದ ಬಾಲಕಿಗೆ ಗರ್ಭಪಾತ ಮಾಡಿಸಲು ಹೈಕೋರ್ಟ್‌ ಅನುಮತಿ

(ನ್ಯೂಸ್ ಕಡಬ) newskadaba.com ಚೆನೈ, ಮೇ.5. 14 ವರ್ಷದ ಬಾಲಕಿಯನ್ನು 5 ತಿಂಗಳ ಹಿಂದೆ ಪರಿಚಯಸ್ಥನೇ ಅತ್ಯಾಚಾರವೆಸಗಿರುವ ಪ್ರಕರಣದಲ್ಲಿ ಬಾಲಕಿಯು ಗರ್ಭಿಣಿಯಾಗಿದ್ದು, ಆಕೆಗೆ ಸುರಕ್ಷಿತವಾಗಿ ಗರ್ಭಪಾತ ಮಾಡಲು ಮದ್ರಾಸ್‌ ಹೈಕೋರ್ಟ್‌ ಅನುಮತಿ ನೀಡಿದೆ.

ಬಾಲಕಿಯ ಪೋಷಕರು ಜಿಲ್ಲಾ ಕಲೆಕ್ಟರ್‌ ರನ್ನು ಭೇಟಿ ಮಾಡಿ, 5 ತಿಂಗಳ ಹಿಂದೆ ಪರಿಚಯಸ್ಥನೊಬ್ಬ ತನ್ನ ಮಗಳ ಮೇಲೆ ಅತ್ಯಾಚಾರವೆಸಗಿದ್ದು ಆಕೆ ಗರ್ಭವತಿಯಾಗಿರುವ ವಿಚಾರವನ್ನು ತಿಳಿಸಿದ್ದರು. ಬಾಲಕಿಯ ಪರವಾಗಿ ಚೆಂಗಲ್‌ಪೇಟೆಯ ಮಕ್ಕಳ ಕಲ್ಯಾಣ ಸಮಿತಿಯು ಹೈಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ಘಟನೆಯ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯಕ್ಕೆ ಇದೀಗ ಬಾಲಕಿಯು 18 ವಾರಗಳ ಗರ್ಭ ಹೊಂದಿರುವುದು ಸಾಬೀತಾಗಿದೆ ಹಾಗು ಆಕೆಯ ಸುರಕ್ಷಿತ ಗರ್ಭಪಾತ ಮಾಡುವಂತೆ ಚೆಂಗಲ್‌ಪೆಟ್‌ ಮೆಡಿಕಲ್‌ ಕಾಲೇಜ್‌ ಆಸ್ಪತ್ರೆಗೆ ಆದೇಶಿಸಿದ್ದಾರೆ.

Also Read  ಗಂಡ ಹೆಂಡತಿಯ ನಡುವೆ ಕಲಹ ಮನಸ್ತಾಪಗಳು ಇದ್ದರೆ ಅದನ್ನು ಈ ರೀತಿಯಾಗಿ ಬಗೆಹರಿಸಿಕೊಳ್ಳಬಹುದು.

error: Content is protected !!
Scroll to Top