ಕಾಫ್ ಸಿರಪ್ ಕಳ್ಳಸಾಗಣೆ: ಉತ್ತರ ಪ್ರದೇಶದಲ್ಲಿ 12 ಫಾರ್ಮಾ ಕಂಪನಿಗಳ ವಿರುದ್ಧ ಪ್ರಕರಣ ದಾಖಲು

(ನ್ಯೂಸ್‌ ಕಡಬ) newskadaba.com,  ನ.29: ವಾರಣಾಸಿಯಲ್ಲಿ ಕೋಡೀನ್ ಹೊಂದಿರುವ ಕಾಫ್ ಸಿರಪ್ (ಕೆಮ್ಮಿನ ಸಿರಪ್) ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರದ ಆಹಾರ ಮತ್ತು ಔಷಧ ಇಲಾಖೆ 12 ಫಾರ್ಮಾ ಕಂಪನಿಗಳ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಕಳೆದ ನವೆಂಬರ್ 15ರಂದು ಕಾರ್ಯಾಚರಣೆ ವೇಳೆ 26 ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು. ಅದರ ಭಾಗವಾಗಿ ಕಾರ್ಯಾಚರಣೆ ಮುಂದುವರಿಸಿದ್ದು, 12 ಅನುಮಾನಾಸ್ಪದ ಕಂಪನಿಗಳು ಕಂಡುಬಂದಿದ್ದವು ಎಂದು ಇಲಾಖೆಯ ಇನ್ಸ್‌ಪೆಕ್ಟರ್ ಜನಬ್ ಅಲಿ ತಿಳಿಸಿದ್ದಾರೆ.

“ಈ 12 ಅನುಮಾನಾಸ್ಪದ ಕಂಪನಿಗಳ ಕುರಿತು ತನಿಖೆ ಮಾಡಲು ತಂಡ ಹೋದಾಗ, ಕೆಲವು ಮುಚ್ಚಿರುವುದು, ಇನ್ನೂ ಕೆಲ ಕಂಪನಿಗಳ ವಿಳಾಸದಲ್ಲಿ ಬೇರೆ ಮಳಿಗೆಗಳಿರುವುದು ಕಂಡುಬಂದಿವೆ. ಹೀಗಾಗಿ ಈ ಔಷಧ ಕಂಪನಿಗಳ ನಿರ್ವಾಹಕರಿಗೆ ಸ್ಪಷ್ಟೀಕರಣ ಕೋರಿ ನೋಟಿಸ್ ನೀಡಲಾಗಿತ್ತು. ಈ ಕಂಪನಿಗಳ ಮಾಲೀಕರು ತಮ್ಮ ಪ್ರತಿಕ್ರಿಯೆ ಸಲ್ಲಿಸದ ಹಿನ್ನೆಲೆ ಪ್ರಕರಣ ದಾಖಲಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.

Scroll to Top