ರೈಲಿನಲ್ಲಿ ಟೀ, ಕಾಫಿ ಕುಡಿಯುವ ಮುನ್ನ ಎಚ್ಚರ!

(ನ್ಯೂಸ್ ಕಡಬ) newskadaba.com ನವದೆಹಲಿ, ಮೇ.3. ರೈಲಿನ ಶೌಚಾಲಯದ ನೀರನ್ನು ರೈಲು ಪ್ರಯಾಣಿಕರಿಗೆ ಒದಗಿಸುವ ಕಾಫಿ, ಟೀ ಗೆ ಬಳಸಿರುವ ವಿಷಯವು ಬೆಳಕಿಗೆ ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಟೀ ಗುತ್ತಿಗೆದಾರನಿಗೆ 1 ಲಕ್ಷ ರೂಪಾಯಿ ದಂಡ ವಿಧಿಸುವಂತೆ ಸೌಥ್ ಸೆಂಟ್ರಲ್ ರೈಲ್ವೆಯ ಪಿಆರ್ ಒ  ಪ್ರಕಟನೆ ಹೊರಡಿಸಿದ್ದಾರೆ.

ಟೀ ವ್ಯಾಪಾರಿಯೊಬ್ಬ ರೈಲಿನ ಶೌಚಾಲಯದ ನೀರನ್ನು ತುಂಬಿಕೊಂಡು ಬಂದು ಇನ್ನೊಬ್ಬ ವ್ಯಕ್ತಿಗೆ ಕಾಫಿ, ಟೀ ಬಳಕೆಗೋಸ್ಕರ ನೀಡುತ್ತಿರುವ ದೃಶ್ಯಗಳನ್ನು ರೈಲು ಯಾತ್ರಿಯೊಬ್ಬ ತನ್ನ ಮೊಬೈಲಿನಲ್ಲಿ ವೀಡಿಯೋ ಮಾಡಿದ್ದ. ಈ ಘಟನೆಯು ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದಿದ್ದು, ಈ ವೀಡೀಯೋ ಸಕತ್ ವೈರಲ್ ಆಗಿತ್ತು. ವೀಡೀಯೋ ನೋಡಿ ನಂತರ ಎಚ್ಚೆತ್ತುಕೊಂಡ ರೈಲ್ವೆ ಇಲಾಖೆ ಈ ಬಗ್ಗೆ ತನಿಖೆ ನಡೆಸುವಂತೆ ಆದೇಶ ಹೊರಡಿಸಿತ್ತು.

Also Read  ಕಾರ್ಮಿಕರ ಮೇಲೆ ಹರಿದ ಗೂಡ್ಸ್ ರೈಲು ➤6 ಮಂದಿ ಮೃತ್ಯು

ಸಿಕಿಂದರಾಬಾದ್ ರೈಲ್ವೆ ನಿಲ್ದಾಣದಲ್ಲಿ ಹೈದರಾಬಾದ್ ಚಾರ್ಮಿನರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಈ ಘಟನೆಯು ಸಂಭವಿಸಿದೆ. ಟೀ ವ್ಯಾಪಾರಿಯನ್ನು ಶಿವಪ್ರಸಾದ್ ಎಂದು ಗುರುತಿಸಲಾಗಿದೆ ಹಾಗು ಈತನಿಗೆ ರೈಲ್ವೆ ಇಲಾಖೆಯು 1 ಲಕ್ಷ ರೂಪಾಯಿ ದಂಡವಿಧಿಸಿದೆ.

error: Content is protected !!
Scroll to Top