ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
‘ಹರಿಯಾಣದಲ್ಲಿ 25 ಲಕ್ಷ ಮತಗಳು ಕಳ್ಳತನವಾಗಿದೆ’- ರಾಹುಲ್ ಗಾಂಧಿ ಆರೋಪ – News Kadaba

‘ಹರಿಯಾಣದಲ್ಲಿ 25 ಲಕ್ಷ ಮತಗಳು ಕಳ್ಳತನವಾಗಿದೆ’- ರಾಹುಲ್ ಗಾಂಧಿ ಆರೋಪ

(ನ್ಯೂಸ್‌ ಕಡಬ) newskadaba.com,  ನ.05:  2024ರ ವಿಧಾನಸಭಾ ಚುನಾವಣೆ ವೇಳೆ ಹರಿಯಾಣದಲ್ಲಿ ಬರೋಬ್ಬರಿ 25 ಲಕ್ಷ ಮತಗಳು ಕಳ್ಳತನ ಆಗಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ನವದೆಹಲಿಯ ಎಐಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾತನಾಡಿದ ಅವರು, “2024ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಪ್ರಮಾಣದ ಅಕ್ರಮ ನಡೆದಿದೆ. ಬಿಜೆಪಿ ಗೆದ್ದಿರೋದು ನಕಲಿ ಮತಗಳಿಂದ ಅನ್ನೋದು ಖಚಿತವಾಗಿದೆ. ಮಹಾದೇವಪುರ, ಆಳಂದ ಆದ್ಮೇಲೆ ಇದು ಕೆಲವು ಕ್ಷೇತ್ರಗಳಿಗಷ್ಟೇ ಸೀಮಿತವಾಗಿಲ್ಲ, ಇಡೀ ರಾಜ್ಯ, ದೇಶವನ್ನೇ ಆವರಿಸಿಕೊಂಡಿದೆ ಅನಿಸಿತು. ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಛತ್ತೀಸ್‌ಗಢದಲ್ಲೂ ಇದೇ ರೀತಿಯ ದೂರು ಬಂದಿದ್ದವು. ಈಗ ನಾವು ಹರಿಯಾಣವನ್ನ ಕೇಂದ್ರೀಕರಿಸಿದ್ದೇವೆ” ಎಂದು ಹೇಳಿದರು.

“ಹರಿಯಾಣ ಚುನಾವಣೆ ವೇಳೆ ಎಲ್ಲಾ ಸಮೀಕ್ಷೆಗಳಲ್ಲೂ ಕಾಂಗ್ರೆಸ್ 52 ರಿಂದ 62 ಸ್ಥಾನಗಳಷ್ಟು ಮುಂದಿತ್ತು. ಅದರಂತೆ ಹರಿಯಾಣ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಸ್ವೀಪ್ ಮಾಡಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದ್ರೆ ಫಲಿತಾಂಶ ಸಂಪೂರ್ಣ ವಿಭಿನ್ನವಾಗಿತ್ತು. ಹರಿಯಾಣದಲ್ಲಿ ಫಸ್ಟ್ ಟೈಮ್ ಅಂಚೆ ಮತಗಳು ಮತ್ತು ಸಾಮಾನ್ಯ ಮತಗಳಲ್ಲಿ ವ್ಯತ್ಯಾಸ ಆಗಿರುವುದು ಕಂಡುಬಂದಿತು” ಎಂದು ತಿಳಿಸಿದರು.

ಕಾಂಗ್ರೆಸ್ ಕೇವಲ 22,779 ಮತಗಳಿಂದ ಸೋತಿದೆ. ಆದ್ರೆ ಒಟ್ಟು 1.18 ಲಕ್ಷ ಮತಗಳು ವ್ಯತ್ಯಾಸ ಇದೆ. ಅಷ್ಟೇ ಅಲ್ಲ ಹರಿಯಾಣದಲ್ಲಿ 25 ಲಕ್ಷ ಮತಗಳ ಕಳ್ಳತನ ನಡೆದಿದೆ. ಶೇ.12.5 ರಷ್ಟು ನಕಲಿ ಮತಗಳು, 93,000 ವಿಳಾಸಗಳು ಅಮಾನ್ಯವಾದವುಗಳು ಎಂದು ದಾಖಲೆ ಸಮೇತ ವಿವರಿಸಿದ್ದಾರೆ.

Scroll to Top