ಕಿಲ್ಲರ್ ಕೆಮ್ಮು ಸಿರಪ್ ಪ್ರಕರಣದಲ್ಲಿ ಮತ್ತೊಬ್ಬನ ಬಂಧನ

(ನ್ಯೂಸ್‌ ಕಡಬ) newskadaba.com,  ನ.03:  ಮಧ್ಯಪ್ರದೇಶದಲ್ಲಿ 24 ಮಕ್ಕಳ ಪ್ರಾಣವನ್ನು ಬಲಿ ಪಡೆದ ಕೆಮ್ಮಿನ ಸಿರಪ್‌ ದುರಂತದ ತನಿಖೆ ನಡೆಸುತ್ತಿರುವ ಎಸ್‌‍ಐಟಿ ಅಧಿಕಾರಿಗಳು ಪ್ರಕರಣದ ಪ್ರಮುಖ ಆರೋಪಿ ಡಾ. ಪ್ರವೀಣ್‌ ಸೋನಿ ಅವರ ಪತ್ನಿಯನ್ನು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೆಚ್ಚಿನ ಅಸ್ವಸ್ಥ ಮಕ್ಕಳಿಗೆ ಕಲುಷಿತ ಕೆಮ್ಮಿನ ಸಿರಪ್‌ ಕೋಲ್ಡ್ರಿಫ್‌ ಅನ್ನು ಶಿಫಾರಸು ಮಾಡಿದ್ದ ಚಿಂದ್ವಾರ ಮೂಲದ ಡಾ. ಸೋನಿ ಅವರನ್ನು ಮೂತ್ರಪಿಂಡ ವೈಫಲ್ಯದಿಂದಾಗಿ ಮಕ್ಕಳ ಸಾವುಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ಆರೋಪದ ಮೇಲೆ ಕಳೆದ ತಿಂಗಳು ಬಂಧಿಸಲಾಗಿತ್ತು.

ಪ್ರಕರಣದ ಮತ್ತೊಬ್ಬ ಆರೋಪಿ ಅವರ ಪತ್ನಿ ಜ್ಯೋತಿ ಸೋನಿ ಅವರನ್ನು ತಡರಾತ್ರಿ ಚಿಂದ್ವಾರ ಜಿಲ್ಲೆಯ ಪರಾಸಿಯಾ ಪಟ್ಟಣದಲ್ಲಿರುವ ಅವರ ನಿವಾಸದಿಂದ ಬಂಧಿಸಲಾಗಿದೆ ಎಂದು ಪೊಲೀಸ್‌‍ ಉಪ ವಿಭಾಗೀಯ ಕಚೇರಿ ಮತ್ತು ವಿಶೇಷ ತನಿಖಾ ತಂಡದ (ಎಸ್‌‍ಐಟಿ) ಉಸ್ತುವಾರಿ ಜಿತೇಂದ್ರ ಜಾಟ್‌ ತಿಳಿಸಿದ್ದಾರೆ.

ಅವರು ಹಲವಾರು ಬಲಿಪಶುಗಳಿಗೆ ಕೆಮ್ಮಿನ ಸಿರಪ್‌ ಮಾರಾಟ ಮಾಡಿದ ವೈದ್ಯಕೀಯ ಅಂಗಡಿಯ ಮಾಲೀಕರಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.ಕೆಮ್ಮು ಸಿರಪ್‌ ದುರಂತಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಏಳು ಜನರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.

 

Scroll to Top