ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ದೋಷಾರೋಪಪಟ್ಟಿ ಸಲ್ಲಿಸಿದ ಎನ್ಐಎ

(ನ್ಯೂಸ್‌ ಕಡಬ) newskadaba.com,  ಅ..31: ಬರ್ಬರವಾಗಿ ಕೊಲೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಜರಂಗದಳದ ಕಾರ್ಯಕರ್ತ ಸುಹಾಸ್‌‍ ಶೆಟ್ಟಿ ಹತ್ಯೆಯು ಪೂರ್ವ ನಿಯೋಜಿತ ಕೃತ್ಯ ಎಂದು ರಾಷ್ಟ್ರೀಯ ತನಿಖಾ ದಳ( ಎನ್‌ ಐಎ) ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ (ಚಾರ್ಚ್‌ಶೀಟ್‌) ಸಲ್ಲಿಸಿದೆ.

ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ 1967, ಭಾರತೀಯ ನ್ಯಾಯಸಂಹಿತಾ 2023 ಮತ್ತು ಶಸಾ್ತ್ರಸ್ತ್ರ ಕಾಯಿದೆ, 1959ರ ವಿವಿಧ ವಿಭಾಗಗಳಡಿ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ. 2025ರ ಮೇ ತಿಂಗಳಿನಲ್ಲಿ ಸುಹಾಸ್‌‍ ಶೆಟ್ಟಿಯನ್ನು ಮಾರಕಾಯುಧಗಳಿಂದ ಶಸ್ತ್ರಸಜ್ಜಿತವಾದ ಏಳು ಮಂದಿ ಬರ್ಭರವಾಗಿ ಹತ್ಯೆ ಮಾಡಿದ್ದರು. ಇದೊಂದು ವ್ಯವಸ್ಥಿತ ಹಾಗೂ ಪೂರ್ವ ನಿಯೋಜಿತ ಕೊಲೆಯಾಗಿದ್ದು, ಸುಹಾಸ್‌‍ ಶೆಟ್ಟಿಯನ್ನು ಹತ್ಯೆ ಮಾಡಲು , ಮೊದಲೇ ದುಷ್ಕರ್ಮಿಗಳು ಸಂಚು ರೂಪಿಸಿದ್ದರು. ಆತನನ್ನು ಅಟ್ಟಾಡಿಸಿಕೊಂಡು ಹತ್ಯೆ ಮಾಡಲಾಗಿದೆ.

Scroll to Top