ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಅ. 27 ರಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯು ಮಂಗಳೂರು – ತಿರುವನಂತಪುರ ನಡುವೆ ಹೊಸ ವಿಮಾನ ಸೇವೆ ಪ್ರಾರಂಭ – News Kadaba

ಅ. 27 ರಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯು ಮಂಗಳೂರು – ತಿರುವನಂತಪುರ ನಡುವೆ ಹೊಸ ವಿಮಾನ ಸೇವೆ ಪ್ರಾರಂಭ

(ನ್ಯೂಸ್‌ ಕಡಬ) newskadaba.com,  ಅ.25 ಮಂಗಳೂರು: ಅ. 27 ರಿಂದ ಮಂಗಳೂರು ಮತ್ತು ತಿರುವನಂತಪುರ ನಡುವೆ ಹೊಸ ವಿಮಾನ ಸೇವೆಯನ್ನು ಆರಂಭಿಸುತ್ತಿದೆ. ವಾರದಲ್ಲಿ 3 ದಿನ ಲಭ್ಯವಿರುವ ಈ ಸೇವೆಯು 2 ಕರಾವಳಿ ನಗರಗಳ ನಡುವಿನ ಸಂಪರ್ಕವನ್ನು ಸುಲಭಗೊಳಿಸಲಿದೆ.

ಪ್ರಸ್ತುತ ರೈಲಿನಲ್ಲಿ ಸುಮಾರು 9 ಗಂಟೆಗಳಿರುವ ಪ್ರಯಾಣದ ಸಮಯವು ಈ ವಿಮಾನದಿಂದಾಗಿ ಕೇವಲ 80 ನಿಮಿಷಗಳಿಗೆ ಇಳಿಯಲಿದೆ. ಈ ಮೂಲಕ ವ್ಯಾಪಾರ, ಪ್ರವಾಸೋದ್ಯಮ ಮತ್ತು ವೈಯಕ್ತಿಕ ಪ್ರಯಾಣಕ್ಕೆ ದೊಡ್ಡ ಉತ್ತೇಜನ ಸಿಗುವ ನಿರೀಕ್ಷೆಯಿದೆ. ಪ್ರಸ್ತುತ, ಈ ಎರಡು ನಗರಗಳ ನಡುವೆ ವೇಗದ ಸಾರಿಗೆ ಸಂಪರ್ಕಕ್ಕಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಲಭ್ಯವಿದ್ದು, 620 ಕಿ.ಮೀ. ದೂರವನ್ನು ಕ್ರಮಿಸಲು ಸುಮಾರು 8 ಗಂಟೆ 40 ನಿಮಿಷಗಳನ್ನು ತೆಗೆದುಕೊಳ್ಳುತ್ತಿದೆ.

ಆದರೆ, ಹೊಸ ವಿಮಾನ ಸೇವೆಯಿಂದಾಗಿ ಪ್ರಯಾಣಿಕರು 7 ಗಂಟೆಗೂ ಅಧಿಕ ಸಮಯವನ್ನು ಉಳಿಸಬಹುದಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಈ ಹೊಸ ಮಾರ್ಗದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದು, “ಪ್ರಕೃತಿ, ಸಂಸ್ಕೃತಿ ಮತ್ತು ಪ್ರಶಾಂತತೆ ಮೇಳೈಸುವ ಒಂದು ಕರಾವಳಿಯಿಂದ ಮತ್ತೊಂದು ಕರಾವಳಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ,” ಎಂದು ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದೆ.

Scroll to Top