ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಶಿರಾಡಿ ಘಾಟ್: 40 ಅಡಿ ಪ್ರಪಾತದ ಹೊಳೆಗೆ ಬಿತ್ತು ನಾಲ್ವರು ಪ್ರಯಾಣಿಸುತ್ತಿದ್ದ ಕಾರು – News Kadaba

ಶಿರಾಡಿ ಘಾಟ್: 40 ಅಡಿ ಪ್ರಪಾತದ ಹೊಳೆಗೆ ಬಿತ್ತು ನಾಲ್ವರು ಪ್ರಯಾಣಿಸುತ್ತಿದ್ದ ಕಾರು

(ನ್ಯೂಸ್‌ ಕಡಬ) newskadaba.com,  ಅ..24 : ಹಾಸನ ಜಿಲ್ಲೆಯ ಸಕಲೇಶಪುರದ ಶಿರಾಡಿ ಘಾಟ್‌ನಲ್ಲಿ ರಸ್ತೆಬದಿಯ ಹೊಳೆಗೆ ಕಾರ್ ಬಿದ್ದಿದೆ. ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್‌ನಲ್ಲಿ ಈ ಘಟನೆ ನಡೆದಿದ್ದು, 40 ಅಡಿ ಎತ್ತರದಿಂದ ಕಾರ್ ಹೊಳೆಗೆ ಇಳಿದ್ರೂ ಎಲ್ಲರೂ ಪವಾಡ ರೀತಿಯಲ್ಲಿ ಬದುಕುಳಿದಿದ್ದಾರೆ. ಕಾರಿನಲ್ಲಿ ಗೋವಿಂದ್, ಪತ್ನಿ ಆಶಾ ಮಕ್ಕಳಾದ ಹರ್ಷಿತ್, ವರ್ಷಿತ್ ನಾಲ್ವರು ಮಂಗಳೂರಿಗೆ ತೆರಳುತ್ತಿದ್ದರು.

ರಾಷ್ಟ್ರೀಯ ಹೆದ್ದಾರಿ 75ರ ಮಂಗಳೂರು – ಬೆಂಗಳೂರು ನಗರಗಳಿಗೆ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದೆ. ಶಿರಾಡಿ ಗ್ರಾಮದಲ್ಲಿನ ಮಾರ್ಗ ಅಂಕುಡೊಂಕಾಗಿದೆ. ಈ ಗ್ರಾಮವು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ವ್ಯಾಪ್ತಿಗೆ ಒಳಪಡುತ್ತದೆ. ರಾಷ್ಟ್ರೀಯ ಹೆದ್ದಾರಿ 75 ಶಿರಾಡಿ ಮೂಲಕ ಹಾದುಹೋಗುತ್ತದೆ.

Scroll to Top