ಏರಿಕೆಯಾದ ಚಿನ್ನದ ಬೆಲೆ; ಇಳಿಕೆಯಾದ ಡೈಮಂಡ್ ಬೆಲೆ



(ನ್ಯೂಸ್ಕಡಬ) newskadaba.com,   .13 ಚಿನ್ನ ಅಂದ್ರೆ ಕಷ್ಟ ಎಂಬಂತೆ ಆಗಿದೆ. ಆಭರಣ ಪ್ರಿಯ ಮಹಿಳೆಯರು ಚಿನ್ನ ಖರೀದಿ ಇನ್ನು ಕನಸು ಅಂದುಕೊಳ್ಳುತ್ತಿದ್ದಾರೆ. ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ ನಡುವೆ ವಜ್ರದ ಬೆಲೆ ಹಂತ ಹಂತವಾಗಿ ಇಳಿಕೆಯಾಗುತ್ತಿದೆ. ರಷ್ಯಾ ಮತ್ತು ಉಕ್ರೇನ್ ಯುದ್ಧ, ಡೊನಾಲ್ಡ್ ಟ್ರಂಪ್ ಅತಿರೇಕದ ಸುಂಕಗಳ ಪರಿಣಾಮ ಚಿನ್ನವಿಂದು ಗಗನಕುಸುವಾಗಿದೆ. ಈ ಎಲ್ಲಾ ಜಾಗತೀಕ ಬದಲಾವಣೆಗಳು ನೇರವಾಗಿ ಚಿನ್ನದ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿವೆ.







ಕಳೆದ ಕೆಲವು ತಿಂಗಳಿನಿಂದ ಗಣನೀಯವಾಗಿ ವಜ್ರದ ಬೆಲೆ ಕಡಿಮೆಯಾಗುತ್ತಿದೆ. ಕೆಲ ತಿಂಗಳ ಹಿಂದೆ 80,000 ರೂ.ಗಳವರೆಗಿದ್ದ 0-3 ಸೆನ್ಸ್ ವಜ್ರದ ಬೆಲೆ, ಇದೀಗ 40 ಸಾವಿರ ರೂಪಾಯಿ ಕುಸಿತ ಕಂಡಿದೆ. ಅದರಲ್ಲೂ 50 ಸೆನ್ಸ್ ಅಳತೆಯ ವಜ್ರದ ಬೆಲೆ ಕುಸಿತ ಕಂಡು ಬಂದಿದೆ. ವಜ್ರದ ದರ ಕುಸಿಯುತ್ತಿದ್ರೆ, ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಚಿನ್ನಕ್ಕಿಂತ ವಜ್ರ ಖರೀದಿಯೇ ಉತ್ತಮ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.






ವಜ್ರದ ಬೆಲೆ ಕುಸಿತಕ್ಕೆ ಕಾರಣ ?

ಡೊನಾಲ್ಡ್ ಟ್ರಂಪ್ ಭಾರತದ ಉತ್ಪನ್ನಗಳ ಮೇಲೆ ಶೇ.100ರಷ್ಟು ಸುಂಕ ವಿಧಿಸಿದ್ದಾರೆ. ಇದರಿಂದ ಭಾರತದ ವಜ್ರ ಅಥವಾ ಆಭರಣಗಳ ಬೇಡಿಕೆ ಅಮೆರಿಕಾದಲ್ಲಿ ಕಡಿಮೆಯಾಗಲಿದೆ. ಸಹಜವಾಗಿ ದೇಶಿಯ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗುತ್ತದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸುತ್ತಾರೆ. ಪೂರೈಕೆ ಹೆಚ್ಚಳವಾಗಿ ಬೇಡಿಕೆ ಕಡಿಮೆಯಾದ ಬೆಲೆ ಇಳಿಕೆಯಾಗೋದು ಮಾರುಕಟ್ಟೆಯ ಸಾಮಾನ್ಯ ನಿಯಮವಾಗಿದೆ.

error: Content is protected !!
Scroll to Top