ಧಾರವಾಡ : ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು, ಐವರಿಗೆ ಗಂಭೀರ ಗಾಯ

(ನ್ಯೂಸ್‌ ಕಡಬ) newskadaba.com,  ಅ .13. ಧಾರವಾಡ:  ಮರಕ್ಕೆ ಕ್ರೂಸರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿ, ಐವರು ಗಾಯಗೊಂಡ ಘಟನೆ ತಾಲೂಕಿನ ಹೊಸ ತೇಗೂರು ಗ್ರಾಮದ ಬಳಿ ಪೂನಾ-ಬೆಂಗಳೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗ್ಗೆ ಸಂಭವಿಸಿದೆ

ಗದಗ ಮುಲದ ಸುರೇಶ ಬಸವಣ್ಣೆಪ್ಪ ತುಪ್ಪದ (65) ಮತ್ತು ಮಹಾಂತಮ್ಮ ಬಸವಣ್ಣೆಪ್ಪ ತುಪ್ಪದ (೫೨) ಸಾವನ್ನಪ್ಪಿದ್ದು, ಕ್ರೂಸರ್‌ನಲ್ಲಿ ಪ್ರಯಾಣಿಸುತ್ತಿದ್ದ ಗೀತಾ ಸಿದ್ಧರಾಮ ಅಸುಂಡಿ, ಜನನಿ ಸುರೇಶ ತುಪ್ಪ, ಕೀರ್ತಿ ಸುರೇಶ ತುಪ್ಪದ, ವಿರಾಜ ಸಿದ್ಧಲಿಂಗಪ್ಪ ತುಪ್ಪದ ಮತ್ತು ಕ್ರೂಸರ್ ಚಾಲಕ ಚೇತನ ಜಾಧವ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Scroll to Top