ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ 8 ವರ್ಷಗಳ ಬಳಿಕ ಮತ್ತೆ ಬೆಳ್ಳಿತೆರೆಗೆ ಕಮ್‌ಬ್ಯಾಕ್

(ನ್ಯೂಸ್ಕಡಬ) newskadaba.com,  ಸೆ.15 ಬೆಂಗಳೂರು : ಸ್ಯಾಂಡಲ್‌ವುಡ್ಗೆ ಬರೋಬ್ಬರಿ 8 ವರ್ಷಗಳ ಬಳಿಕ ಮತ್ತೆ ಪೀಕಬೂ ಚಿತ್ರದ ಮೂಲಕ ಕಮ್‌ಬ್ಯಾಕ್ ಮಾಡಿದ ಅಮೂಲ್ಯ .

ಮಂಜು ಸ್ವರಾಜ್ ನಿರ್ದೇಶನದ ಪೀಕಬೂ ಚಿತ್ರದಲ್ಲಿ ಅಮೂಲ್ಯ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ನಟಿ ಅಮೂಲ್ಯ ಅವರಿಗೆ ಸೆ.14ರಂದು ಹುಟ್ಟುಹಬ್ಬದ ಸಂಭ್ರಮ. ಈ ವೇಳೆ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆಯಾಗಿದೆ.

ಮಂಜು ಸ್ವರಾಜ್ ಅವರು ಅಮೂಲ್ಯಗೆ ನಿರ್ದೇಶಿಸುತ್ತಿರುವ 2ನೇ ಸಿನಿಮಾ ಇದಾಗಿದೆ. ಇದಕ್ಕೂ ಮುನ್ನ ‘ಗೋಲ್ಡನ್ ಸ್ಟಾರ್’ ಗಣೇಶ ಮತ್ತು ಅಮೂಲ್ಯ ನಟನೆಯ ಶ್ರಾವಣಿ ಸುಬ್ರಮಣ್ಯ ಸಿನಿಮಾ ನಿರ್ದೇಶಿಸಿದ್ದು, ಆ ಸಿನಿಮಾ ಹಿಟ್ ಆಗಿತ್ತು.

ಸದ್ಯಕ್ಕೆ ಈ ಚಿತ್ರದ ತಾಂತ್ರಿಕ ವರ್ಗ ಅಂತಿಮವಾಗಿದ್ದು, ಕಲಾವಿದರು ಇನ್ನು ಕೆಲವೇ ದಿನಗಳಲ್ಲಿ ಅಂತಿಮಗೊಳ್ಳಲಿದೆ. ಸುರೇಶ್ ಬಾಬು ಬಿ ಚಿತ್ರದ ಛಾಯಾಗ್ರಾಹಕರಾದರೆ, ವೀರ್ ಸಮರ್ಥ್ ಮತ್ತು ಶ್ರೀಧರ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಸದ್ಯ ಅಮೂಲ್ಯ ಅವರ ಹುಟ್ಟು ಹಬ್ಬದ ಹಿನ್ನೆಲೆ ಟೈಟಲ್ ಟೀಸರ್ ಬಿಡುಗಡೆಯಾಗಿದೆ.

Scroll to Top