ಗ್ರಾಮ ಪಂಚಾಯತಿ ಮಟ್ಟದಲ್ಲಿ ಬೆಳೆ ನಷ್ಟ ಸಮೀಕ್ಷೆ ನಡೆಸಿ, ಮಧ್ಯಂತರ ಪರಿಹಾರ ಬಿಡುಗಡೆ ಮಾಡಿ : ಬಸವರಾಜ ಬೊಮ್ಮಾಯಿ



(ನ್ಯೂಸ್‌ ಕಡಬ) newskadaba.com,  ಸೆ.11 ಹಾವೇರಿ : ರಾಜ್ಯ ಸರ್ಕಾರವು ಭಾರೀ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬೆಳೆ ನಷ್ಟ ಸಮೀಕ್ಷೆಗಳನ್ನು ನಡೆಸಿ ರೈತರಿಗೆ ಮಧ್ಯಂತರ ಪರಿಹಾರವನ್ನು ನೀಡಬೇಕು ಎಂದು ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ.







ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಬೊಮ್ಮಾಯಿ, ಬೆಳೆ ನಷ್ಟದ ಕುರಿತು ವಿವರವಾದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಬಹುದು. NDRF ಮತ್ತು SDRF ಮಾನದಂಡಗಳ ಅಡಿಯಲ್ಲಿ ಪರಿಹಾರವನ್ನು ನೀಡಬೇಕು ಎಂದು ಹೇಳಿದರು.






ಕಳೆದ ಎರಡು ವರ್ಷ ವಾಡಿಗೆಗಿಂತ ಹೆಚ್ಚು ಮಳೆ ಆಗಿದೆ.ರೈತರ ಬೆಳೆ‌ ನಷ್ಟ ವಾಗಿದೆ, ಬಡವರ ಮನೆ ಬಿದ್ದಿವೆ. ಇಷ್ಟೆಲ್ಲಾ ಆದರೂ ಸರ್ಕಾರ ಕಣ್ಣು ಮುಚ್ಚಿಕೊಂಡು ಕೂತಿದೆ ಎಂದರು. ಮೊನ್ನೆ ಕಾಟಾಚಾರಕ್ಕೆ ಒಂದು ಸಭೆ ಬಿಟ್ಟರೆ ಸಿಎಂ ಸಿದ್ದರಾಮಯ್ಯ ಏನೂ ಮಾಡಿಲ್ಲ. ಬೆಳೆ ನಷ್ಟದ ವ್ಯಾಪ್ತಿ, ಕ್ಷೇತ್ರದ ಬಗ್ಗೆ ಪ್ರಾಥಮಿಕ ಸಮೀಕ್ಷೆ ಸರಿಯಾಗಿ ಮಾಡೇ ಇಲ್ಲ. ಗ್ರಾ.ಪಂ ಮಟ್ಟದಲ್ಲಿ ವಿಲೇಜ್ ಅಕೌಂಟೆಂಟ್ ಸರ್ವೆ ಮಾಡಬೇಕು. ಅರ್ಜಿ ಕೊಟ್ಟಲ್ಲಿ ಮಾತ್ರ ಸರ್ವೆ ಮಾಡಿದ್ದಾರೆ, ವೈಜ್ಞಾನಿಕವಾಗಿ ಬೆಳೆಹಾನಿ ಸರ್ವೆ ಆಗೇ ಇಲ್ಲ ಎಂದರು.

ಹಾವೇರಿ ಜಿಲ್ಲೆಯಲ್ಲಿ 23,536 ಹೆಕ್ಟೇರ್ ಪ್ರದೇಶ ಹಾವೇರಿ ಜಿಲ್ಲೆಯಲ್ಲಿ ನಷ್ಟವಾಗಿದೆ. ಇದಕ್ಕಿಂತ ವ್ಯಾಪಕವಾಗಿ ನಷ್ಟವಾಗಿದೆ. ಕೃಷಿ ಇಲಾಖೆ ರೈತರ ಸಮಸ್ಯೆಗಳಿಗೆ ಸ್ಪಂದಿಸ್ತಿಲ್ಲ. ಮನೆ ಬಿದ್ದ ಬಗ್ಗೆ ಸರ್ಕಾರ ಚಕಾರ ಎತ್ತುತ್ತಿಲ್ಲ. ನಮ್ ಸರ್ಕಾರ ಮನೆ ಬಿದ್ದರೆ 5 ಲಕ್ಷ ಕೊಡ್ತಾ ಇತ್ತು.

error: Content is protected !!
Scroll to Top