ಬೆಂಗಳೂರಿನಲ್ಲಿ ಧಾರಾಕಾರ ಮಳೆ



(ನ್ಯೂಸ್‌ ಕಡಬ) newskadaba.com,  ಸೆ.11 ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ.







ರಾಜಾಜಿನಗರದ 4ನೇ ಬ್ಲಾಕ್​​ನಲ್ಲಿ 2 ಮನೆಗಳ ಮೇಲೆ ಮರ ಬಿದ್ದಿದೆ. ಚಂದ್ರಮ್ಮ, ಪೀಟರ್​ ಎಂಬುವರ ಮನೆಗಳ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಹಾನಿ ಸಂಭವಿಸಿದೆ. ಪ್ರಾಣಹಾನಿ ಉಂಟಾಗಿಲ್ಲ.






ತೀವ್ರ ಮಳೆ ಗಾಳಿಗೆ ಮರ ಬಿದ್ದು 5 ಕಾರು, ಟಾಟಾ ಏಸ್​ ವಾಹನ, 3-4 ಬೈಕ್​ಗಳು ಜಖಂಗೊಂಡಿವೆ. ಮನೆಗಳ ಮೇಲೆ ಮರ ಬಿದ್ದ ಪರಿಣಾಮ  ಎರಡು ಕುಟುಂಬಗಳ ಜನರು ಮನೆಯಿಂದ ಹೊರಬರಲಾಗದ ಪರಿಸ್ಥಿತಿ ಉಂಟಾಗಿದೆ.

ರಾತ್ರಿ ಸುಮಾರು ಎರಡು ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಹಲವೆಡೆ ರಸ್ತೆಗಳು ಜಲಾವೃತಗೊಂಡಿದೆ. ಕೆಲವೆಡೆ ಬೃಹತ್​ ಮರಗಳು ಧರೆಗುರುಳಿದ್ದು, ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಅಲ್ಲಲ್ಲಿ ನಿಧಾನಗತಿಯ ಸಂಚಾರವಾಗಿದೆ.

error: Content is protected !!
Scroll to Top