ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಇಂಡಿಯಾ ಸ್ಕಿಲ್ಸ್ ಕಾಂಪಿಟಿಷನ್ ಕರ್ನಾಟಕ – ನೋಂದಣಿ ಆರಂಭ – News Kadaba

ಇಂಡಿಯಾ ಸ್ಕಿಲ್ಸ್ ಕಾಂಪಿಟಿಷನ್ ಕರ್ನಾಟಕ – ನೋಂದಣಿ ಆರಂಭ

(ನ್ಯೂಸ್ ಕಡಬ) newskadaba.com ಸೆ. 08. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ 2026ನೇ ಸಾಲಿನಲ್ಲಿ ಚೀನಾದ ಶಾಂಘೈನಲ್ಲಿ ನಡೆಯುವ ವಿಶ್ವ ಕೌಶಲ್ಯ ಸ್ಪರ್ಧೆಗೆ (World Skill Competition – 2026) ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಕೌಶಲ್ಯ ಒಲಿಂಪಿಕ್ಸ್ (‘ಇಂಡಿಯಾ ಸ್ಕಿಲ್ಸ್ ಕಾಂಪಿಟಿಷನ್ ಕರ್ನಾಟಕ – 2025’) ಸ್ಪರ್ಧಾ ಕಾರ್ಯಕ್ರಮವನ್ನು 63 ಪ್ರಕಾರದ ಕೌಶಲ್ಯ ವಿಭಾಗಗಳಲ್ಲಿ ಆಯೋಜಿಸಲಾಗುತ್ತಿದೆ.
2001 ಜನವರಿ 1 ರಂದು ಅಥವಾ ನಂತರದಲ್ಲಿ ಜನಿಸಿದ ಅಭ್ಯರ್ಥಿಗಳಿಗೆ 63 ಪ್ರಕಾರದ ಕೌಶಲ್ಯ ವಿಭಾಗಗಳಲ್ಲಿ ಹಾಗೂ ದಿನಾಂಕ 2004 ಜನವರಿ 1 ರಂದು ಅಥವಾ ನಂತರದಲ್ಲಿ ಜನಿಸಿದ ಅಭ್ಯರ್ಥಿಗಳಿಗೆ 50 ಪ್ರಕಾರದ ಕೌಶಲ್ಯ ವಿಭಾಗಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಕೌಶಲ್ಯ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿದವರಿಗೆ ನಿರಂತರ ತರಬೇತಿಯನ್ನು ನಿಗಮದ ವತಿಯಿಂದ ಒದಗಿಸಲಾಗುತ್ತದೆ.

ಆಸಕ್ತ ಅರ್ಹ ಅಭ್ಯರ್ಥಿಗಳು https://www.skillindiadigital.gov.in/home ವೆಬ್ ಸೈಟ್‍ನಲ್ಲಿ ಉಚಿತವಾಗಿ ನೋಂದಾವಣೆ ಮಾಡಬಹುದು. ಸ್ಪರ್ಧೆಗೆ ನೋಂದಾಯಿಸಿಕೊಳ್ಳಲು  ಸೆಪ್ಟೆಂಬರ್ 30  ಕೊನೆಯ ದಿನ.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 919606492216 ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Scroll to Top