ಸೆ.5ರಿಂದ ಅಮೇಜಾನ್ ಪ್ರೈಮ್ನಲ್ಲಿ ಯಶ್ ತಾಯಿ ನಿರ್ಮಾಣದ ʼಕೊತ್ತಲವಾಡಿʼ ಚಿತ್ರ

(ನ್ಯೂಸ್‌ ಕಡಬ) newskadaba.com,  ಸೆ. 4 ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್  ಅವರ ತಾಯಿ ಪುಷ್ಪ ಅರುಣ್ ಕುಮಾರ್ ಅವರು  ತಮ್ಮ ಪಿಎ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿದ್ದ ಮೊದಲ ಚಿತ್ರ ʼಕೊತ್ತಲವಾಡಿʼ ಶ್ರೀರಾಜ್ ನಿರ್ದೇಶಿಸಿ, ಪೃಥ್ವಿ ಅಂಬಾರ್ ಹಾಗೂ ಕಾವ್ಯ ಶೈವ ನಾಯಕ – ನಾಯಕಿಯಾಗಿ ನಟಿಸಿದ್ದ ಈ ಚಿತ್ರ ಕಳೆದ ತಿಂಗಳು ಬಿಡುಗಡೆಯಾಗಿ ಜನಮನಸೂರೆಗೊಂಡಿತ್ತು. ಸೆಪ್ಟೆಂಬರ್ 5 ರಿಂದ ಈ ಚಿತ್ರವನ್ನು ಅಮೇಜಾನ್ ಪ್ರೈಮ್ನಲ್ಲೂ ವೀಕ್ಷಿಸಬಹುದಾಗಿದೆ

ʼಕೊತ್ತಲವಾಡಿʼ ಚಿತ್ರವನ್ನು ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಅಮೆಜಾನ್ ಪ್ರೈಮ್‌ನಲ್ಲಿ ನೋಡಬಹುದು. ಆದರೆ ಮೊದಲು ಸೆಪ್ಟೆಂಬರ್ 5 ರಂದು ಕನ್ನಡದಲ್ಲಿ ಮಾತ್ರ ಪ್ರದರ್ಶನವಾಗಲಿದ್ದು, ನಂತರದ ದಿನಗಳಲ್ಲಿ ಮಿಕ್ಕ ಭಾಷೆಗಳಲ್ಲಿ ವೀಕ್ಷಿಸಬಹುದು.

ಕಾರ್ತಿಕ್ ಎಸ್ ಛಾಯಾಗ್ರಹಣ, ರಾಮಿಸೆಟ್ಟಿ ಪವನ್ ಸಂಕಲನ,‌ ವಿಕಾಸ್ ವಸಿಷ್ಠ ಸಂಗೀತ ನಿರ್ದೇಶನ ಹಾಗೂ ಅಭಿನಂದನ್ ಕಶ್ಯಪ್ ಹಿನ್ನೆಲೆ ಸಂಗೀತ ನೀಡಿರುವ ಈ ಚಿತ್ರದ ತಾರಾಬಳಗದಲ್ಲಿ ಪೃಥ್ವಿ ಅಂಬರ್, ಕಾವ್ಯ ಶೈವ, ಗೋಪಾಲ್ ದೇಶಪಾಂಡೆ, ರಾಜೇಶ್ ನಟರಂಗ, ರಘು ರಾಮನಕೊಪ್ಪ, ಮಾನಸಿ ಸುಧೀರ್ ಮುಂತಾದವರಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.

 

Scroll to Top