ಈದ್ ಮೀಲಾದ್ ಪ್ರಯುಕ್ತ ಇಂದು ತೆಕ್ಕಾರಿನಲ್ಲಿ ಬೃಹತ್ ಬುರ್ದಾ ಮಜ್ಲಿಸ್ ಖ್ಯಾತ ಗಾಯಕ ಹನೀಫ್ ರಝಾ ಖಾದ್ರಿ ಬಿಜಾಪುರ ರವರಿಂದ ನಅತ್ ಅಲಾಪನೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ. 03. ಪೈಗಂಬರ್ ಪ್ರವಾದಿ (ಸ.ಅ)ರ 1500ನೇ ಜನ್ಮ ದಿನಾಚರಣೆಯ ಅಂಗವಾಗಿ ಈದ್ ಮಿಲಾದ್ ಸ್ವಾಗತ ಸಮಿತಿ ತೆಕ್ಕಾರು ಇದರ ವತಿಯಿಂದ ‘ಇಷ್ಕೇ ಮದೀನಾ’ ಬೃಹತ್ ಬುರ್ದಾ ಮಜ್ಲಿಸ್ ಕಾರ್ಯಕ್ರಮವು ಬುಧವಾರ ಸಂಜೆ 6 ಗಂಟೆಗೆ ತೆಕ್ಕಾರು ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಸಂಘಟಕರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಇಂದು (ಸೆ.03) ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ ಪ್ರಾರಂಭಗೊಳ್ಳಲಿದ್ದು ಬೃಹತ್ ಬುರ್ದಾ ಮಜ್ಲಿಸ್ ನ ನಅತ್ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಮುಹಮ್ಮದ್ ಹನೀಫ್ ರಝಾ ಖಾದ್ರಿ ಬರಕಾತಿ ಬಿಜಾಪುರ ನಅತ್ ಹಾಡಲಿದ್ದಾರೆ. ಇಷ್ಕೇ ಮದೀನಾ ಕಾಸರಗೋಡು ತಂಡ ಬುರ್ದಾ ಮಜ್ಲಿಸ್ ಗೆ ನೇತೃತ್ವ ನೀಡಲಿದೆ.

ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಬಾಗವಹಿಸುವ ನಿರೀಕ್ಷೆಯಿದೆ ಎಂದು ಈದ್ ಮೀಲಾದ್ ಸ್ವಾಗತ ಸಮಿತಿ ಸಂಘಟಕರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Scroll to Top