ಭಾರತ ಶೂನ್ಯ ತೆರಿಗೆ ಆಫರ್ ನೀಡಿದೆ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌



(ನ್ಯೂಸ್ಕಡಬ) newskadaba.com,  ಸೆ.02  ನ್ಯೂಯಾರ್ಕ್‌ : ಶಾಂಘೈ ಶೃಂಗದಲ್ಲಿ ಭಾರತ-ರಷ್ಯಾ ಸ್ನೇಹ ಸಂಬಂಧದ ಫೋಟೋ ವೈರಲ್‌ ಆದ ಬೆನ್ನಲ್ಲೇ ಮತ್ತೆ ಭಾರತದ ವಿರುದ್ಧ ಸಿಡಿದೆದ್ದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌, ‘ಭಾರತ ಅಮೆರಿಕದ ಮೇಲಿನ ತೆರಿಗೆಯನ್ನು ಶೂನ್ಯಕ್ಕಿಳಿಸುವ ಆಫರ್ ನೀಡಿದೆ. ಆದರೆ ಸಮಯ ಮೀರಿಹೋಗುತ್ತಿದೆ. ವರ್ಷಗಳ ಮೊದಲೇ ಭಾರತ ಈ ಕೆಲಸ ಮಾಡಬೇಕಿತ್ತು’ ಎಂದು ಗುಡುಗಿದ್ದಾರೆ.







‘ನಾವು ಭಾರತದ ಜೊತೆ ದೊಡ್ಡಮಟ್ಟದ ವ್ಯಾಪಾರ ನಡೆಸುತ್ತೇವೆ. ಆದರೆ ಭಾರತ ನಮ್ಮ ಜೊತೆ ತೀರಾ ಕಡಿಮೆ ವ್ಯಾಪಾರ ನಡೆಸುತ್ತದೆ. ಇದು ಸಂಪೂರ್ಣವಾಗಿ ಏಕಪಕ್ಷೀಯ ವಿಪತ್ತು! ಅಲ್ಲದೆ, ಭಾರತವು ತನ್ನ ಹೆಚ್ಚಿನ ತೈಲ ಮತ್ತು ಮಿಲಿಟರಿ ಉತ್ಪನ್ನಗಳನ್ನು ರಷ್ಯಾದಿಂದ ಖರೀದಿಸುತ್ತದೆ, ಅಮೆರಿಕದಿಂದ ಬಹಳ ಕಡಿಮೆ ಖರೀದಿಸುತ್ತದೆ. ಅವರು ಈಗ ತಮ್ಮ ಸುಂಕಗಳನ್ನು ಸಂಪೂರ್ಣವಾಗಿ ಕಡಿತಗೊಳಿಸಲು ಮುಂದಾಗಿದ್ದಾರೆ, ಆದರೆ ತಡವಾಗುತ್ತಿದೆ. ಅವರು ವರ್ಷಗಳ ಹಿಂದೆಯೇ ಹಾಗೆ ಮಾಡಬೇಕಿತ್ತು’ ಎಂದಿದ್ದಾರೆ.






error: Content is protected !!
Scroll to Top