ಉಕ್ರೇನ್‌ ಅಧ್ಯಕ್ಷ ಜೆಲೆನ್‌ಸ್ಕಿ ಶೀಘ್ರ ಭಾರತಕ್ಕೆ : ರಾಯಭಾರಿ

(ನ್ಯೂಸ್‌ ಕಡಬ) newskadaba.com, ಆ.25: ನವದೆಹಲಿ: ಕಳೆದ ಮೂರುವರೆ ವರ್ಷಗಳಿಂದ ರಷ್ಯಾ ಜೊತೆ ಯುದ್ಧ ನಡೆಸುತ್ತಿರುವ ಉಕ್ರೇನ್‌ನ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್‌ಸ್ಕಿ ಅವರು ಶೀಘ್ರದಲ್ಲಿ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ಉಕ್ರೇನ್‌ನ ಭಾರತದ ರಾಯಭಾರಿ ಒಲೆಕ್ಸಾಂಡರ್‌ ಪೊಲಿಷ್‌ಚುಕ್‌ ತಿಳಿಸಿದ್ದಾರೆ.

ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಪೊಲಿಷ್‌ಚುಕ್‌, ‘ಕಳೆದ ವರ್ಷ ಆ.23ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಜೆಲೆನ್‌ಸ್ಕಿ ಅವರಿಗೆ ಆಹ್ವಾನ ನೀಡಿದ್ದರು. ಇದರ ಭಾಗವಾಗಿ ಜೆಲೆನ್‌ಸ್ಕಿ ಅವರ ಆಗಮನಕ್ಕೆ ಶೀಘ್ರವಾಗಿ ದಿನಾಂಕ ನಿಗದಿಯಾಗಲಿದೆ. ದಿನಾಂಕವು ಕೆಲ ದಿನಗಳಲ್ಲಿ ಪ್ರಕಟವಾಗಲಿದೆ’ ಎಂದು ತಿಳಿಸಿದ್ದಾರೆ. ಕಳೆದ ವರ್ಷ ಆ.23ರಂದು ಮೋದಿ ಅವರು ಉಕ್ರೇನ್‌ಗೆ ಐತಿಹಾಸಿಕ ಭೇಟಿ ನೀಡಿದ್ದರು.

Scroll to Top