(ನ್ಯೂಸ್ ಕಡಬ) newskadaba.com, ಆ.05: ಉಪ್ಪಿನಂಗಡಿ: ಪುತ್ತೂರು ತಾಲೂಕು ಹಿರೆಬಂಡಾಡಿ ಗ್ರಾಮ ಪಂಚಾಯತಿಗೆ ಒಳಪಟ್ಟ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾರ ಇಲ್ಲಿನ ಮುಂದಿನ ಮೂರು ವರ್ಷಗಳ ಅವಧಿಗೆ ಶಾಲಾಭಿವೃಧ್ದಿ ಮತ್ತು ಮೇಲುಸ್ತುವಾರಿ ಸಮಿತಿಯ ರಚನೆಯು ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷರಾಗಿ ಎರಡನೇ ಬಾರಿಗೆ ಅವಿರೋಧವಾಗಿ ಶ್ರೀಯುತ ಅಝೀಝ್ ಬಿ.ಕೆ ಮರು ಆಯ್ಕೆಯಾದರು.
ಉಪಾಧ್ಯಕ್ಷೆಯಾಗಿ ಶ್ರೀಮತಿ ಅಸ್ಮಾ ಮೊದಲ ಬಾರಿಗೆ ಆಯ್ಕೆಯಾದರು.
ಪದಾಧಿಕಾರಿಗಳಾಗಿ ವಾಮನ ಬರಮೇಲು, ಪದ್ಮನಾಭ ಶೆಟ್ಟಿ ಬಡಿಲ, ತೇಜಾವತಿ, ಹಂಝ ಪಿ ಆಕಿರೆ, ವನಿತಾ, ಸುಮಯ್ಯ, ಅಬ್ದುಲ್ ಖಾದರ್ ಅಡೆಕ್ಕಲ್, ಶರೀಫ್ ಯು.ಟಿ, ಮನೋಹರ ನೇಕಾರಪೇಟೆ, ಅಬೂಬಕ್ಕರ್ ಸಿದ್ದೀಕ್, ತಸೀನಾ, ನಸೀಮಾ, ಹಿದಾಯತುಲ್ಲಾ, ಸಿಮ್ರಾನ್, ಶಂಶಾದ್, ನಸೀಮಾ, ಸದಸ್ಯರುಗಳಾಗಿ ಆಯ್ಕೆಯಾದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರೆಬಂಡಾಡಿ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ವಾರಿಜಾಕ್ಷಿ ವಹಿಸಿದ್ದರು.
ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಜಯಶ್ರೀ ಎಂ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು.
ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಅಝೀಝ್ ಬಿ.ಕೆ ಮಾತನಾಡಿ ಮೊದಲ ಅವಧಿಯಲ್ಲಿ ಎಸ್‌ಡಿಎಂಸಿ ಸದಸ್ಯರ ಸಂಪೂರ್ಣ ಸಹಕಾರದಿಂದ ಹೆಚ್ಚಿನ ಅಭಿವೃದ್ಧಿ ಮಾಡಲು ಸಾಧ್ಯವಾಯಿತು. ಮುಂದೆಯೂ ನಮ್ಮ ಶಾಲೆಗಾಗಿ ನಿಮ್ಮ ಸಹಕಾರ ಮತ್ತಷ್ಟು ಸಂಘಟಿತವಾಗಿರಲಿ ಎಂದು ಶುಭಹಾರೈಸಿದರು.
ವೇದಿಕೆಯಲ್ಲಿ ಹಿರೆಬಂಡಾಡಿ ಗ್ರಾಮ ಪಂಚಾಯ್ ಸದಸ್ಯರಾದ ಹೇಮಂತ್ ಮೈತಳಿಕೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಟಿಜಿಟಿ ಶಿಕ್ಷಕರಾದ ಶ್ರೀಮತಿ ಸುಮನಾ ರವರು ಕಾರ್ಯಕ್ರಮ ನಿರೂಪಿಸಿದರೆ, ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಮೋಹನಾಂಗಿ ವಂದಿಸಿದರು. ಇತರ ಶಿಕ್ಷಕರು ಸಹಕರಿಸಿದರು.









