“ನಾಲಿಗೆಗೆ ರುಚಿ ಇಲ್ಲದ ಆಹಾರ ದೇಹದ ಆರೋಗ್ಶ ಕಾಪಾಡುತ್ತದೆ” ಪೌಷ್ಟಿಕ ಆಹಾರ ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಅಭಿಪ್ರಾಯ



(ನ್ಯೂಸ್ ಕಡಬ) newdkadaba.com ಬಿಳಿನೆಲೆ, ಆ. 01. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಬಿಳಿನೆಲೆ ವಲಯದ ಬಿಳಿನೆಲೆ ಜ್ಞಾನದೀಪ ಜ್ಞಾನ ವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಕಾರ್ಯಕ್ರಮವು ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.







ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ ಶಿಕ್ಷಕಿ ಜನಜಾಗೃತಿ ವೇದಿಕೆಯ ಬಿಳಿನೆಲೆ ವಲಯದ ಪದಾಧಿಕಾರಿ ಶ್ರೀಮತಿ ಶಾರದಾ ಬಿಳಿನೆಲೆ ಮಾತನಾಡಿ, ಮಹಿಳೆಯರ ಆರೋಗ್ಶ ವೃಧ್ಧಿಗೆ ಪೌಷ್ಟಿಕ ಆಹಾರದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.






ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಪ್ರತಿ ವ್ಶಕ್ತಿಯೂ ತಾನು ನಿರೀಕ್ಷಿಸಿದ ಪ್ರಕಾರ ಜೀವನ ನಡೆಸಲು ಆರೋಗ್ಶವೇ ಪ್ರಾಮುಖ್ಯ. ಆರೋಗ್ಶ ಉತ್ತಮವಾಗಿರಬೇಕಾದರೆ ಸೇವಿಸುವ ಆಹಾರವೂ ಪೌಷ್ಟಿಕತೆಯಿಂದ ಕೂಡಿರಬೇಕು. ಪೌಷ್ಟಿಕ ಆಹಾರ ಎನ್ನುವುದು ನಾಲಿಗೆಗೆ ಕಡಿಮೆ ರುಚಿಯನ್ನು ನೀಡುತ್ತದೆ ಮತ್ತು ದೇಹದ ಆರೋಗ್ಶವನ್ನು ಹೆಚ್ಚಿಸುತ್ತದೆ ಎಂದರು.

ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಚೇತನಾ ಕಾರ್ಯಕ್ರಮ ಸಂಘಟಿಸಿದರು.‌ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ತಯಾರಿಸಿದ ವಿವಿಧ ರೀತಿಯ ಖಾದ್ಶಗಳ ಪ್ರದರ್ಶನ ಹಾಗೂ ಪೌಷ್ಟಿಕ ಆಹಾರ ತಯಾರಿಕೆಯ ಪ್ರಾತ್ಯಕ್ಷಿಕೆ ನಡೆಸಿ ಬಹುಮಾನ ನೀಡಲಾಯಿತು. ಕಾರ್ಯಕ್ರಮದ ಅಧ್ಶಕ್ಷತೆಯನ್ನು ಕೇಂದ್ರದ ಸದಸ್ಶೆ ಶ್ರೀಮತಿ ಲತಾರವರು ವಹಿಸಿದ್ದರು.

ಕಾರ್ಯಕ್ರಮದ ವೇದಿಕೆಯಲ್ಲಿ ಬಿಳಿನೆಲೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆˌ ಬಿಳಿನೆಲೆ ಒಕ್ಕೂಟದ ಅಧ್ಶಕ್ಷ ರಾಜೇಶ್ ಒಗ್ಗು ಹಾಗೂ ಸೇವಾಪ್ರತಿನಿಧಿ ಸತೀಶ್ ಆಜನ ಉಪಸ್ಥಿತರಿದ್ದರು. ಆದಿಪರಾಶಕ್ತಿ ಸಂಘದ ಸದಸ್ಯೆ ಶ್ರೀಮತಿ ಶೃತಿ ಮೂಜೂರು ಸ್ವಾಗತಿಸಿ, ಕೇಂದ್ರದ ಸಂಯೋಜಕಿ ಉಷಾ ಸತೀಶ್ ವಂದಿಸಿದರು. ಜ್ಞಾನದೀಪ ಜ್ಞಾನವಿಕಾಸ ಕೇಂದ್ರದ ಸದಸ್ಯರುಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.

error: Content is protected !!
Scroll to Top