ಕಡಬ: ಪಟ್ಟಣ ಪಂಚಾಯತ್ ಚುನಾವಣೆ ಚುನಾವಣಾಧಿಕಾರಿಗಳ ನೇಮಕ

(ನ್ಯೂಸ್ ಕಡಬ) newskadaba.com ಕಡಬ, ಜು. 29. ಇಲ್ಲಿನ ಪಟ್ಟಣ ಪಂಚಾಯತ್ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿದ್ದು, ಇದೀಗ ಚುನಾವಣಾ ಅಧಿಕಾರಿಗಳನ್ನು ನೇಮಕಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

 

ವಾರ್ಡ್ ನಂ. 1ರಿಂದ 7ರ ವರೆಗೆ (1-ಕಳಾರ, 2-ಕೋಡಿಬೈಲು, 3-ಪನ್ಯ, 4-ಬೆದ್ರಾಜೆ, 5-ಮಾಲೇಶ್ವರ, 6- ಕಡಬ, 7-ಪಣೆಮಜಲು) ಚುನಾವಣಾ ಅಧಿಕಾರಿಯಾಗಿ ಸುಬ್ರಹ್ಮಣ್ಯ ಉಪವಲಯ ಅರಣ್ಯಾಧಿಕಾರಿ ವಿಮಲ ಬಾಬು, ಸಹಾಯಕ ಚುನಾವಣಾಧಿಕಾರಿಯಾಗಿ ತಾ.ಪಂ. ವ್ಯವಸ್ಥಾಪಕ (ಪ್ರಭಾರ) ಭುವನೇಂದ್ರ ಕುಮಾರ್ ಎಂ., ವಾರ್ಡ್ 8ರಿಂದ 13ರ ವರೆಗೆ (8-ಪಿಜಕಳ 9-ಮೂರಾಜೆ, 10-ದೊಡ್ಡಕೊಪ್ಪ, 11-ಕೋಡಿಂಬಾಳ, 12-ಮಜ್ಜಾರು, 13-ಪುಳಿಕುಕ್ಕು) ಚುನಾವಣಾಧಿಕಾರಿಯಾಗಿ ಸುಬ್ರಹ್ಮಣ್ಯ ವಿಶೇಷ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಪ್ರಮೋದ್ ಕುಮಾರ್, ಸಹಾಯಕ ಚುನಾವಣಾಧಿಕಾರಿಯಾಗಿ ಕೊಯಿಲ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸಂದೇಶ್ ಕೆ.ಎನ್. ಅವರನ್ನು ನೇಮಕಗೊಳಿಸಲಾಗಿದೆ.

ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆಗಳು ಇಂದಿನಿಂದ ಆರಂಭಗೊಂಡಿದ್ದು, ಕಡಬ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಕಛೇರಿಯು ಪ್ರಾರಂಭವಾಗಿದೆ.

Scroll to Top