ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಅಳಿಕೆ ವಲಯದಿಂದ ದೇಲಂತಬೆಟ್ಟು ಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ



(ನ್ಯೂಸ್ ಕಡಬ) newskadaba.com ಜು. 19. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ಅಳಿಕೆ ವಲಯ ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮವು ದೇಲಂತಬೆಟ್ಟು ಉನ್ನತ ಪ್ರಾಥಮಿಕ ಶಾಲೆಯಲ್ಲಿ ನಡೆಸಲಾಯಿತು.







ಕಾರ್ಯಕ್ರಮವನ್ನು ಒಕ್ಕೂಟ ಉಪಾಧ್ಯಕ್ಷರಾದ ಚಂದ್ರಶೇಖರ ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಸ್ವಾಗತವನ್ನು ಜ್ಞಾನದೀಪ ಶಿಕ್ಷಕರಾದ ಶಶಾಂಕ್ ನಡೆಸಿದರು. ವಲಯದ ಮೇಲ್ವಿಚಾರಕಿ ಮೀನಾಕ್ಷಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿಸರ ಜಾಗೃತಿ ಬಗ್ಗೆ ಶಾಲಾ ಅಧ್ಯಾಪಕರಾದ ಉದಯರವರು ಮಾಹಿತಿ ನೀಡಿದರು. ವೇದಿಕೆಯಲ್ಲಿ ಜ್ಞಾನವಿಕಾಸ ಸಮನ್ವಯಾಧಿಕಾರಿ ದೀಪಾ, ಶಾಲಾ ಶಿಕ್ಷಕರಾದ ಸವಿತಾ, ಶೌರ್ಯವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ರವೀಶ, ಪುಟ್ಟಣ್ಣ, ಗಣೇಶ, ಚಂದ್ರಶೇಖರ ಹಾಗೂ ಕುಶಾಲಪ್ಪ ಮೊದಲಾದವರು ಉಪಸ್ಥಿತರಿದ್ದರು.






 

ಸೇವಾ ಪ್ರತಿನಿಧಿ ಪೂರ್ಣಿಮಾರವರು ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಶಿಕ್ಷಕಿ ಸವಿತಾ ಧನ್ಯವಾದಗೈದರು. ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆ ನಡೆಸಿ ಬಹುಮಾನವನ್ನು ವಿತರಿಸಲಾಯಿತು. ಜೊತೆಗೆ ಶಾಲಾ ಮಕ್ಕಳಿಗೆ ಸಸಿ ವಿತರಣೆ ಮಾಡಿ ಸಸಿಗಳನ್ನು ನೆಡಲಾಯಿತು.

error: Content is protected !!
Scroll to Top