(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜು. 19. ಖಾಝಿ ಕೂರತ್ ತಂಙಳ್ ಅನುಸ್ಮರಣೆ ಮತ್ತು ಮಹ್ಳರತುಲ್ ಬದ್ರಿಯಾ ಮಜ್ಲಿಸ್ ವಾರ್ಷಿಕ ಕಾರ್ಯಕ್ರಮವು ಇಂದು(ಶನಿವಾರ) ಮಗ್ರಿಬ್ ಬಳಿಕ ತೆಕ್ಕಾರು ಮಸೀದಿಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದು ಸಂಘಟಕರು ಮಾಧ್ಯಮ ಪ್ರಕಟಣೆಗೆ ತಿಳಿಸಿದ್ದಾರೆ.
SSF ತೆಕ್ಕಾರು ಶಾಖೆ ವತಿಯಿಂದ ತೆಕ್ಕಾರಿನ ಖಾಝಿಯಾಗಿ ಸೇವೆ ಸಲ್ಲಿಸಿ ಮರಣ ಹೊಂದಿದ ಮರ್ಹೂಂ ಸೆಯ್ಯದ್ ಕೂರತ್ ತಂಙಳ್ ರವರ ಅನುಸ್ಮರಣೆ ಮತ್ತು ಮಹ್ಳರತ್ತುಲ್ ಬದ್ರಿಯಾ ಮಜ್ಲಿಸ್ ನ ವಾರ್ಷಿಕ ಕಾರ್ಯಕ್ರಮವು ಇಂದು (ಜು.19) ಸಂಜೆ ತೆಕ್ಕಾರು ಮಸೀದಿ ವಠಾರದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸೆಯ್ಯದ್ ಮಶ್ ಹೂದ್ ತಂಙಳ್ ಕೂರತ್, ಸಯ್ಯದ್ ಬದ್ರುದ್ದೀನ್ ತಂಙಳ್ ತೆಕ್ಕಾರು, ಅಶ್ರಫ್ ಸಖಾಫಿ ಮಾಡಾವು, ಅಬ್ದುಲ್ ಮಜೀದ್ ಸಖಾಫಿ ಅಮ್ಮುಂಜೆ, ಉಸ್ಮಾನ್ ಸ’ಅದಿ ತೆಕ್ಕಾರು, ಅಬ್ದುಲ್ಲಾ ಅಹ್ಮದ್ ಉಡುಪಿ ಸಹಿತ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.
ಇನ್ನು ತೆಕ್ಕಾರಿಗೆ ಪ್ರಥಮ ಬಾರಿಗೆ ಆಗಮಿಸುತ್ತಿರುವ ಸೆಯ್ಯದ್ ಕೂರತ್ ತಂಙಳ್ ಸುಪುತ್ರ ಸೆಯ್ಯದ್ ಮಶ್ ಹೂದ್ ತಂಙಳ್ ರವರಿಗೆ ಜಮಾಅತ್ ಪರವಾಗಿ ಅದ್ದೂರಿಯ ಸನ್ಮಾನ ಕಾರ್ಯಕ್ರಮವು ಕೂಡ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಪತ್ರಿಕಾಗೋಷ್ಠಿಯಲ್ಲಿ SSF ತೆಕ್ಕಾರು ಯುನಿಟ್ ನಾಯಕರಾದ ಜಾಫರ್ ಕೆ.ಪಿ, ಶೆಕಿರ್ ಮಾಸ್ಟರ್, ಸಫ್ವಾನ್ ಕನರಾಜೆ ಹಾಗೂ ನಸೀಫ್ ರವರು ಉಪಸ್ಥಿತರಿದ್ದರು.









