ಆನ್ ಲೈನ್ ನಲ್ಲಿ ಮೀನಿನ ಬಲೆ ಖರೀದಿಸಿದ ಮಹಿಳೆಗೆ ವಂಚನೆ

(ನ್ಯೂಸ್ ಕಡಬ) newskadaba.com ಜು. 07. ಆನ್‌ ಲೈನ್ ಮೂಲಕ ಮೀನಿನ ಬಲೆ ಖರೀದಿಸಿದ ಮಹಿಳೆಯೋರ್ವರಿಗೆ ಸಾವಿರಾರು ರೂ. ವಂಚಿಸಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ರೇಷ್ಮಾ ಎಂಬವರು ನೀಡಿದ ದೂರಿನ ಪ್ರಕಾರ, ಅವರು ಆನ್‌ ಲೈನ್‌ನಲ್ಲಿ ಮೀನಿನ ಬಲೆಯನ್ನು ಬುಕ್ ಮಾಡಿದ್ದು, ಈ ಬಗ್ಗೆ ಒಬ್ಬ ಅಪರಿಚಿತ ವ್ಯಕ್ತಿ ಕರೆ ಮಾಡಿ ಮೀನಿನ ಬಲೆಯನ್ನು ಡೆಲಿವರಿ ಕೊಡಲು ಹಣ ಪಾವತಿ ಮಾಡುವಂತೆ ತಿಳಿಸಿದ್ದನು. ಅದರಂತೆ ರೇಷ್ಮಾ ಜು. 02ರಿಂದ 4ರ ನಡುವೆ ವಿವಿಧ ಹಂತಗಳಲ್ಲಿ ಒಟ್ಟು 4,1250ರೂ. ಹಣವನ್ನು ಪಾವತಿಸಿದ್ದರು.

ಆದರೆ ಅಪರಿಚಿತ ವ್ಯಕ್ತಿಯು ಈವರೆಗೂ ಮೀನಿನ ಬಲೆಯನ್ನು ಕಳುಹಿಸಿಕೊಡದೇ ಹಣವನ್ನು ವಾಪಾಸು ನೀಡದೇ ವಂಚಿಸಿರುವುದಾಗಿ ದೂರಲಾಗಿದೆ.

Scroll to Top