ಕಡಬ: ಶೌರ್ಯಶ್ರೀ ವಿಪತ್ತು ನಿರ್ವಹಣಾ ಘಟಕಗಳ ತರಬೇತಿ ಕಾರ್ಯಾಗಾರ ಪ್ರಥಮ ಚಿಕಿತ್ಸೆಯ ಸರಿಯಾದ ತಿಳುವಳಿಕೆ ಇದ್ದರೆ ಅದೇಷ್ಟೋ ಜೀವಗಳನ್ನು ಉಳಿಸಬಹುದು- ಕಮಾಂಡರ್ ಶಾಂತಿ ಲಾಲ್ ಜಟೀಯಾ



(ನ್ಯೂಸ್ ಕಡಬ) newskadaba.com ಕಡಬ, ಜು. 07. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕಿನ ಆರು ವಲಯಗಳ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕಗಳ ತರಬೇತಿ ಕಾರ್ಯಾಗಾರವು ಕಡಬ ಶ್ರೀ ದುರ್ಗಾಂಭಿಕಾ ಸಭಾ ಭವನದಲ್ಲಿ ನಡೆಯಿತು.







ಕಾರ್ಯಕ್ರಮವನ್ನು ಉದ್ಘಾಟಿಸಿದ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರು ವಿವೇಕ್ ವಿನ್ಸ್ಂಟ್ ಪಾಯಿಸ್ ರವರು ಮಾತನಾಡಿ, ಕಡಬ ತಾಲೂಕಿನ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ 120 ಸದಸ್ಯರು ಪ್ರತೀ ಗ್ರಾಮಗಳಲ್ಲಿ ಪ್ರಚಲಿತವಾಗಬೇಕು. ಆಕಸ್ಮಿಕ ಅವಘಡಗಳಲ್ಲಿ ಶೀಘ್ರವಾಗಿ ಸ್ಪಂದಿಸಿ ಸಾರ್ವಜನಿಕರಲ್ಲಿ ಧೈರ್ಯತುಂಬುವ ಸಮರ್ಥ ಸ್ವಯಂ ಸೇವಕ ನಾಯಕರಾಗಬೇಕು ಎಂದರು.






ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಸಬ್ ಇನ್ಸ್ಪೆಕ್ಟರ್ ಕಮಾಂಡರ್ ಶಾಂತಿಲಾಲ್ ಜಟೀಯಾರವರು ತರಬೇತಿ ನೀಡಿ, ಜೀವದ ಅಪಾಯದಲ್ಲಿರುವ ವ್ಶಕ್ತಿಯ ಪ್ರಾಣ ಉಳಿಸಲು ಪರಿತಪಿಸುವ ಪ್ರತತಯೊಬ್ಬನೂ ದೇಶದ ಯೋಧನೇ ಆಗಿರುತ್ತಾನೆ. ಅಪಾಯದ ಅಂಚಿನಲ್ಲಿರುವ ಅಮೂಲ್ಯ ಜೀವವನ್ನು ಕಾಪಾಡುವಲ್ಲಿ ಶೌರ್ಯ ಘಟಕದ ಸ್ವಯಂ ಸೇವಕರುಗಳು ಪ್ರಥಮ ಚಿಕಿತ್ಸೆ ನೀಡುವ ಕೌಶಲ್ಯವನ್ನು ಹೊಂದಿರಬೇಕು. ಅಪಘಾತದಲ್ಲಿ ಗಾಯಗೊಂಡವನಿಗೆ, ಹೃದಯಾಘಾತದಿಂದ ಚಡಪಡಿಸುವವನಿಗೆ ಹಾಗೂ ಪ್ರಜ್ಞಾವಸ್ಥೆಯನ್ನು ಕಳೆದುಕೊಂಡವನಿಗೆ ಪ್ರಥಮ ಚಿಕಿತ್ಸೆಯನ್ನು ನೀಡಿ ನಂತರ ಆಸ್ಪತ್ರೆಗೆ ದಾಖಲಿಸುವ ಬಗ್ಗೆ ತರಬೇತಿಯನ್ನು ನೀಡಿದರು.

ಕಾರ್ಯಕ್ರಮವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಅಧಿಕಾರಿಗಳಾದ ವಿನೋದ್ ಅಕಿರಾ ಹಾಗೂ ಸಂಘಡಿಗರು ಪ್ರಾತ್ಯಕ್ಷಿಕೆಯ ಮೂಲಕ ತರಬೇತಿ ನಡೆಸಿಕೊಟ್ಟರು.

ತರಬೇತಿಯ ಸಭಾಕಾರ್ಯಕ್ರಮದ ವೇದಿಕೆಯಲ್ಲಿ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಮಹೇಶ್ ಕೆ ಸವಣೂರು, ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಯೋಜನಾಧಿಕಾರಿ ಜೈವಂತ್ ಪಟಗಾರ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಶಿವಪ್ರಸಾದ್ ರೈ ಮೈಲೇರಿ, ತಾಲೂಕು ಶೌರ್ಯ ಘಟಕದ ಕ್ಯಾಪ್ಟನ್ ಭವಾನಿಶಂಕರ ಹಾಗೂ ಶೌರ್ಯ ಘಟಕ ಮೇಲ್ವೀಚಾರಕ ನಿತೇಶ್ ಉಪಸ್ಥಿತರಿದ್ದರು.

ಕಡಬ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಸ್ವಾಗತಿಸಿ ಧನ್ಯವಾದಗೈದರು. ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top