(ನ್ಯೂಸ್ ಕಡಬ) newskadaba.com ಜೂ. 25. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗುವ 6 ರಿಂದ 14 ವರ್ಷದೊಳಗಿನ ಪ್ರತಿಭಾವಂತ ಮಕ್ಕಳಿಗೆ ಚಿಗುರು ಕಾರ್ಯಕ್ರಮ, 15 ರಿಂದ 30 ವರ್ಷದೊಳಗಿನ ಪ್ರತಿಭಾವಂತ ಯುವ ಕಲಾವಿದರಿಗೆ ಯುವ ಸೌರಭ ಕಾರ್ಯಕ್ರಮ ಮತ್ತು ಆಕಾಶವಾಣಿ ಬಿ ಹೈಗ್ರೇಡ್ ಹಾಗೂ ಸರ್ಕಾರದಿಂದ ಕೊಡಮಾಡುವ ಪ್ರಶಸ್ತಿ ಪುರಸ್ಕೃತ ಕಲಾವಿದರಿಂದ ಸಾಂಸ್ಕೃತಿಕ ಸೌರಭಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಕಾರ್ಯಕ್ರಮದಲ್ಲಿ ಶಾಸ್ರ್ತೀಯ ಸಂಗೀತ, ಕರ್ನಾಟಕ/ಹಿಂದುಸ್ಥಾನಿ ವಾದ್ಯ ಸಂಗೀತ ಕರ್ನಾಟಕ/ಹಿಂದುಸ್ಥಾನಿ ಸಂಗೀತ, ಸುಗಮ ಸಂಗೀತ/ವಚನ ಸಂಗೀತ/ತತ್ವಪದ/ದಾಸರಪದ, ಜನಪದ ಗೀತೆಗಳು, ಸಮೂಹ ನೃತ್ಯ/ನೃತ್ಯ ರೂಪಕ, ಶಾಸ್ತ್ರೀಯ ನೃತ್ಯ-ಭರತನಾಟ್ಯ ,ಕಥಕ್, ಮೋಹಿನಿಯಾಟಂ, ಕೂಚಿಪುಡಿ ಒಡೆಸ್ಸಿ, (ಸೋಲೋ/ಯುಗಳ ನೃತ್ಯ), ಜನಪದ ಪ್ರದರ್ಶನ ಕಲಾ ತಂಡಗಳು, ನಾಟಕ, ಯಕ್ಷಗಾನ, ಮೂಡಲಪಾಯ, ಬಯಲಾಟ, ಗೊಂಬೆಮೇಳ, ಗಮಕ/ಕಥಾ ಕೀರ್ತನ, ಏಕಪಾತ್ರಾಭಿನಯ ಇತ್ಯಾದಿ ಕಲಾ ಪ್ರದರ್ಶನ ನೀಡಲು ಅವಕಾಶವಿದೆ.
ಕಲಾವಿದರು ತಮ್ಮ ದಾಖಲೆಗಳೊಂದಿಗೆ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಳು ಭವನ, ಉರ್ವಸ್ಟೋರ್, ಅಶೋಕನಗರ ಅಂಚೆ, ಮಂಗಳೂರು ವಿಳಾಸಕ್ಕೆ ಜೂನ್ 30 ರೊಳಗೆ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಕಲಾವಿದರು ಇಲಾಖೆ ನಿಗದಿಪಡಿಸಿದ ಸ್ಥಳ ಮತ್ತು ದಿನಾಂಕಗಳಂದು ಕಾರ್ಯಕ್ರಮ ನೀಡಬೇಕಾಗುವುದು.
ಹೆಚ್ಚಿನ ಮಾಹಿತಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು (ದೂರವಾಣಿ ಸಂ. 0824-2951327) ಸಂಪರ್ಕಿಸಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ: ಕಲಾವಿದರಿಂದ ಅರ್ಜಿ ಆಹ್ವಾನ









