ಶಿರಾಡಿ ಘಾಟ್ ನಲ್ಲಿ ರೈಲು ಹಳಿಯ ಮೇಲೆ ಬಿದ್ದ ಬೃಹತ್ ಬಂಡೆ – ಸಂಚಾರದಲ್ಲಿ ವ್ಯತ್ಯಯ



(ನ್ಯೂಸ್ ಕಡಬ) newskadaba.com ಕಡಬ, ಜೂ.21. ಸಕಲೇಶಪುರದಿಂದ ಸುಬ್ರಹ್ಮಣ್ಯ ರೋಡ್ ರೈಲ್ವೆ ನಿಲ್ದಾಣದ ನಡುವೆ ಬರುವ ಎಡಕುಮೇರಿ – ಸಿರಿಬಾಗಿಲು ನಡುವೆ ರೈಲು ಹಳಿಯ ಮೇಲೆ ಬಂಡೆಗಳು ಬಿದ್ದ ಪರಿಣಾಮವಾಗಿ ರೈಲು ಸಂಚಾರದ ಸಮಯದಲ್ಲಿ ವ್ಯತ್ಯಯವುಂಟಾಗಿದೆ.







ರೈಲು ಸಂಖ್ಯೆ 16511 ಕೆಎಸ್ಆರ್ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ ಕಡಗರವಳ್ಳಿಗೆ ಬೆಳಿಗ್ಗೆ 3:40 ಕ್ಕೆ ಆಗಮಿಸಿದ್ದು, ಸುಮಾರು 4 ಗಂಟೆ 10 ನಿಮಿಷ ತಡವಾಗಿ ಸಂಚರಿಸಿದೆ. ರೈಲು ಸಂಖ್ಯೆ 16585 SMVT ಬೆಂಗಳೂರು – ಮುರುಡೇಶ್ವರ ಎಕ್ಸ್‌ಪ್ರೆಸ್ ಸಕಲೇಶಪುರಕ್ಕೆ ಬೆಳಿಗ್ಗೆ 3:10 ಕ್ಕೆ ಆಗಮಿಸಿದ್ದು 3 ಗಂಟೆ 50 ನಿಮಿಷ ತಡವಾಗಿ ಹೊರಟಿದೆ. ರೈಲು ಸಂಖ್ಯೆ 07377 ವಿಜಯಪುರ – ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ವಿಶೇಷ ರೈಲು ಸಕಲೇಶಪುರಕ್ಕೆ ಬೆಳಿಗ್ಗೆ 6:26 ಕ್ಕೆ ಆಗಮಿಸಿದ್ದು ಸುಮಾರು 2 ಗಂಟೆ 48 ನಿಮಿಷ ತಡವಾಗಿದೆ. ಹಿಟಾಚಿ ಯಂತ್ರಗಳ ಮೂಲಕ ಬಂಡೆಯನ್ನು ತೆರವುಗೊಳಿಸಲಾಗಿದ್ದು, ಹಾನಿಗೊಳಗಾಗಿರುವ ರೈಲು ಹಳಿಗಳನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ.






ಸಂಚಾರ ಅಡಚಣೆಯ ವೇಳೆ ರೈಲಿನಲ್ಲಿರುವ ಪ್ರಯಾಣಿಕರಿಗೆ ಕುಡಿಯುವ ನೀರು, ಬಿಸ್ಕತ್ತು, ಉಪಹಾರ ಮತ್ತು ಚಹಾ ವ್ಯವಸ್ಥೆ ಮಾಡಲಾಗಿದೆ ಎಂದು ರೈಲ್ವೇ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಯಾಣಿಕರು NTES ಅಥವಾ Where is My Train ಅಪ್ಲಿಕೇಶನ್ ಮೂಲಕ ತಮ್ಮ ರೈಲನ್ನು ಲೈವ್ ಆಗಿ ಟ್ರ್ಯಾಕ್ ಮಾಡಬಹುದು. ಮಾತ್ರವಲ್ಲದೆ ತುರ್ತು ಸಂದರ್ಭದಲ್ಲಿ, @RailwaySeva ಗೆ ಟ್ವೀಟ್ ಮಾಡುವುದು ಅಥವಾ 139 ನಂಬರಿಗೆ ಕರೆ ಮಾಡಬಹುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.

error: Content is protected !!
Scroll to Top