(ನ್ಯೂಸ್ ಕಡಬ) newskadaba.com ಮೇ.01: ಬೆಟ್ಟಿಂಗ್ ಹುಚ್ಚಿಗೆ ಒಂದು ಜೀವವೇ ಬಲಿಯಾಗಿದೆ. ಹೌದು ಅಜಾಗರೂಕ ಬೆಟ್ಟಿಂಗ್ ನಿಂದಾಗಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಐದು ಪೂರ್ಣ ಬಾಟಲಿ ಮದ್ಯವನ್ನು ನೀರು ಬೆರೆಸದೆ ಸೇವಿಸಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಪೂಜಾರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತನನ್ನು ಕಾರ್ತಿಕ್ ಎಂದು ಗುರುತಿಸಲಾಗಿದ್ದು, ಒಂದು ವರ್ಷದ ಹಿಂದೆಯಷ್ಟೇ ವಿವಾಹವಾಗಿದ್ದ ಈತ, ಅದೇ ಗ್ರಾಮದ ಸ್ಥಳೀಯರಾದ ವೆಂಕಟರೆಡ್ಡಿ, ಸುಬ್ರಮಣಿ ಮತ್ತು ಇತರ ಮೂವರೊಂದಿಗೆ ಬೆಟ್ಟಿಂಗ್ ನಡೆಸಿ, ಒಂದು ಹನಿ ನೀರಿಲ್ಲದೆ ಐದು ಬಾಟಲಿ ಮದ್ಯವನ್ನು ಶುದ್ಧವಾಗಿ ಕುಡಿಯಬಹುದೆಂದು ಹೇಳಿದ್ದಾನೆ. 10,000 ರೂ. ಬಹುಮಾನಕ್ಕೆ ಈತ ಬೆಟ್ಟಿಂಗ್ ಮಾಡಿದ್ದಾನೆ ಎನ್ನಲಾಗಿದೆ.
ವೆಂಕಟರೆಡ್ಡಿ ಕಾರ್ತಿಕ್‌ಗೆ ಸವಾಲು ಹಾಕಿದ್ದಾಗಿ ಹೇಳಲಾಗಿದ್ದು, ಈ ಕೆಲಸವನ್ನು ಪೂರ್ಣಗೊಳಿಸಿದರೆ, ಅವನಿಗೆ ಹಣ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಪೂರ್ಣ ವಿಶ್ವಾಸ ಮತ್ತು ಅಹಂಕಾರದಿಂದ ಸವಾಲನ್ನು ಸ್ವೀಕರಿಸಿದ ಕಾರ್ತಿಕ್, ನೀರಿಲ್ಲದೆ ಎಲ್ಲಾ ಐದು ಬಾಟಲಿ ಮದ್ಯ ಸೇವಿಸಿದ್ದಾನೆ. ನೀರು ಬೆರೆಸದೆ ಬರಿ ಮದ್ಯ ಕುಡಿದ ಪರಿಣಾಮ ನಂತರ, ಆತನ ಆರೋಗ್ಯವು ವೇಗವಾಗಿ ಹದಗೆಡಲು ಪ್ರಾರಂಭಿಸಿತು.