ಹಾಲು ಕದಿಯುವ ಹಸು ಪತ್ತೆ- ವಿಡಿಯೋ ವೈರಲ್..!

(ನ್ಯೂಸ್ ಕಡಬ) newskadaba.com ಜೂ. 14.  ಹಸುವೊಂದು ಹಾಲು ಕದ್ದು ಕುಡಿಯುವ ವಿಚಿತ್ರ ಪ್ರಕರಣವೊಂದು ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಬೆಳಕಿಗೆ ಬಂದಿದ್ದು, ಹಸು ಒಂದು ಕಳ್ಳತನ ಮಾಡಿ ಸಿಕ್ಕಿಬಿದ್ದಿದೆ. ಇದು ವಿಚಿತ್ರವಾದರೂ ಸತ್ಯ.

ಮೂಡಿಗೆರೆಯಲ್ಲಿ ಅಂಗಡಿ ನಡೆಸುತ್ತಿದ್ದ ವಿಕ್ರಂ ಎಂಬವರ ಅಂಗಡಿಯಲ್ಲಿ ಪ್ರತಿದಿನ 10-20 ಲೀಟರ್ ಹಾಲು ಕಳ್ಳತನವಾಗುತ್ತಿತ್ತು. ಹಾಲಿನ ವಾಹನ ಅಂಗಡಿ ಮುಂದೆ ಸರಿಯಾಗಿ ಸಂಖ್ಯೆ ಪ್ರಕಾರ ಹಾಲಿನ ಟ್ರೇ ಇಳಿಸಿ ಹೋಗುತ್ತಿದ್ದರೂ ಹಾಲಿನ ಪ್ಯಾಕೆಟ್‌ಗಳು ಅಲ್ಲಿ ಇರುತ್ತಿರಲಿಲ್ಲ. ವಿಕ್ರಂ ಮೊದಲಿಗೆ ಇದು ಮಾನವರ ಕಳ್ಳತನವೆಂದು ಶಂಕಿಸಿದ್ದರು. ಆದರೆ ಶುಕ್ರವಾರ ರಾತ್ರಿ 20 ಲೀಟರ್ ಹಾಲು ಕಳವಾಗಿದ್ದಲ್ಲದೇ ಬದಲಾಗಿ ಪ್ಲಾಸ್ಟಿಕ್ ಹಾಲಿನ ಕವರ್‌ಗಳೂ ಕಾಣೆಯಾಗಿದ್ದವು. ಈ ಹಿನ್ನೆಲೆ ಅವರು ಅಂಗಡಿಯ ಸಿಸಿಟಿವಿ ಪರಿಶೀಲಿಸಿದಾಗ, ಇದುವರೆಗೂ ಯಾರೂ ಊಹಿಸದ ದೃಶ್ಯಗಳು ಬಯಲಾಗಿವೆ. ಅದೇನೆಂದರೆ ಆ ಹಾಲು ಕದಿಯುತ್ತಿದ್ದದ್ದು ಕಳ್ಳ ಹಸು ಎಂಬುದು ತಿಳಿದು ಬಂದಿದೆ. ಹೌದು ಹಸುವೊಂದು ಟ್ರೇಯಲ್ಲಿದ್ದ ಎಲ್ಲಾ ಹಾಲು ಕುಡಿದು ಪ್ಯಾಕೆಟ್‌ಗಳನ್ನೂ ತಿಂದಿತ್ತು! ಈ ಘಟನೆ ಎಲ್ಲೆಡೆ ವೈರಲ್ ಆಗುತ್ತಿದೆ.

Scroll to Top