(ನ್ಯೂಸ್ ಕಡಬ) newskadaba.com, ಎ.04 : ರಾಮನಗುಳಿ ಬಳಿ ನಿರ್ಜನ ಪ್ರದೇಶದಲ್ಲಿ ಕಾರಿನಲ್ಲಿ ಒಂದು ಕೋಟಿ ಸಿಕ್ಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಮುಂಬೈನಲ್ಲಿ ವಶಕ್ಕೆ ಪಡೆದು ಅಂಕೋಲಾಗೆ ಕರೆತಂದ ಪೊಲೀಸರು, ಅಂಕೋಲಾ ಬಳಿಯ ಹಳಿಯಾಳ ತಟ್ಟಿಗೇರ ಎಂಬಲ್ಲಿ ಆರೋಪಿಗಳ ಕಾಲಿಗೆ ಗುಂಡು ಹೊಡೆದಿದ್ದಾರೆ.
ಪ್ರಕರಣಕ್ಕೆ ಸಂಬಂದಿಸಿದ ಆರೋಪಿಗಳನ್ನು ಅಂಕೋಲಾಕ್ಕೆ ಕರೆ ತಂದಾಗ ಮೂವರು ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಗೆ ಯತ್ನ ನಡೆದಿದೆ. ದಾಳಿಯಾದ ಮೂವರು ಪೊಲೀಸರ ಕಾಲಿಗೆ, ತಲೆಗೆ ಗಾಯಗಳಾಗಿದ್ದು, ಗಾಯಾಳು ಪೊಲೀಸರು, ಗುಂಡಿನ ರುಚಿ ತಿಂದ ಸಮಾಜಘಾತುಕ ಕ್ರಿಮಿ ರೌಡಿ ತಲ್ಲತ್, ಡೀಲ್ ನೌಫಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.