ಕುಕ್ಕೆ ಶ್ರೀ ಸುಬ್ರಹ್ಮಣ್ಯ : ಅಭಿವೃದ್ಧಿ ಸಮಿತಿಯಲ್ಲಿ ಮಲೆಕುಡಿಯ ಜನಾಂಗದವರ ನಿರ್ಲಕ್ಷ್ಯಕ್ಕೆ ಮಲೆಕುಡಿಯ ಸಂಘದಿಂದ ಆಕ್ಷೇಪ
(ನ್ಯೂಸ್ ಕಡಬ) newskadaba.com ಕುಕ್ಕೆ ಶ್ರೀ ಸುಬ್ರಹ್ಮಣ್ಯ, ನ. 01: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಅಭಿವೃದ್ದಿ ಸಮಿತಿಯಲ್ಲಿ ಮಲೆಕುಡಿಯ ಜನಾಂಗದವರನ್ನು ಸೇರಿಸಿಕೊಳ್ಳದೆ ನಿರ್ಲಕ್ಷ್ಯ ಮಾಡಿರುವುದಾಗಿ ಆರೋಪಿಸಿ ಮಲೆಕುಡಿಯರ ಸಂಘ ವಲಯ ಸಮಿತಿ ಸುಬ್ರಹ್ಮಣ್ಯ ಪತ್ರಿಕಾ ಹೇಳಿಕೆ ಅ.31 ರಂದು ಬಿಡುಗಡೆ ಮಾಡಿದ್ದಾರೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದೇವಸ್ಥಾನಕ್ಕೆ ನೂತನವಾಗಿ ಅಭಿವೃದ್ಧಿ ಸಮಿತಿ ರಚನೆಯಾಗಿದ್ದು ಸ್ಥಳೀಯ ಮೂಲ ನಿವಾಸಿಗಳಾದ ಮಲೆ ಕುಡಿಯ ಬುಡಕಟ್ಟು ಸಮುದಾಯವನ್ನು ನಿರ್ಲಕ್ಷಿದ್ದಾರೆ. ಈ ಹಿಂದಿನ ನಿರ್ಧಾರದಂತೆ ಮನೆಕುಡಿಯ ಜನಾಂಗದವರ ಕೋರಿಕೆಯನ್ನು ನಿರ್ಲಕ್ಷ್ಯ ಮಾಡಲಾಗಿದೆ. […]









