ಉಚ್ಚಿಲ ಕಡಲತೀರದಲ್ಲಿ ಮಹಿಳೆ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಉಚ್ಚಿಲ . 31: ಸೋಮೇಶ್ವರ ಸಮೀಪದ ಉಚ್ಚಿಲ ಕಡಲತೀರದಲ್ಲಿ ಶುಕ್ರವಾರ ಮಹಿಳೆಯ ಮೃತ ದೇಹ ಪತ್ತೆಯಾಗಿದೆ. ಸೋಮೇಶ್ವರದ ಸಂಕೋಳಿಗೆ ನಿವಾಸಿ ಉಷಾ(60)ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಮಹಿಳೆ ಕಳೆದ ಕೆಲ ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದಳೆನ್ನಲಾಗಿದೆ.

 

ಮಾನಸಿಕವಾಗಿ ಜರ್ಜರಿತಗೊಂಡು ಅತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಉಳ್ಳಾಲ ಪೊಲೀಸರು ಮೃತದೇಹದ ಪರಿಶೀಲನೆ ನಡೆಸಿದ್ದಾರೆ.

 

Scroll to Top