Udupi

ಉಡುಪಿ: ಬಿಟ್ ಕಾಯಿನ್ ಹೆಸರಿನಲ್ಲಿ 25 ಲಕ್ಷ ವಂಚನೆ..!

(ನ್ಯೂಸ್ ಕಡಬ)newskadaba.com  ಉಡುಪಿ, ಏ.12. ಬಿಟ್ ಕಾಯಿನ್‌ನಲ್ಲಿ ಹೂಡಿದ ಲಕ್ಷಾಂತರ ರೂ. ಹಣವನ್ನು ವಾಪಾಸು ನೀಡದೆ ಮೋಸ ಮಾಡಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೆಬ್‌ಸೈಟ್‌ನಲ್ಲಿ ವ್ಯಾಲೆಟ್ ಓಪನ್ ಮಾಡಿ ಹಣ ಪಾವತಿಸುವಂತೆ ತಿಳಿಸಿದ್ದ. ಇದನ್ನು ನಂಬಿದ ಆತ್ರೇಯ ಆಚಾರ್ಯ, ಮಾರಚ್ 19ರಿಂದ ಎಪ್ರಿಲ್ 9ರ ಮಧ್ಯಾವಧಿಯಲ್ಲಿ ತುಷಾರ್ ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಒಟ್ಟು 25,52,300ರೂ. ಹಣವನ್ನು ಆನ್ ಲೈನ್ ಮೂಲಕ ವರ್ಗಾವಣೆ ಮಾಡಿದ್ದರು. ಆ ಬಳಿಕ ವ್ಯಾಲೇಟ್‌ನಲ್ಲಿದ್ದ ಬಿಟ್ ಕಾಯಿನ್‌ನ್ನು ತುಷಾರ್ […]

ಉಡುಪಿ: ಬಿಟ್ ಕಾಯಿನ್ ಹೆಸರಿನಲ್ಲಿ 25 ಲಕ್ಷ ವಂಚನೆ..! Read More »

ಕರಾವಳಿ

ಉಡುಪಿ: ‘ಪಕ್ಷ ನನ್ನನ್ನು ನಡೆಸಿಕೊಂಡ ರೀತಿಗೆ ನೋವಾಗಿದೆ’ ➤ ರಘುಪತಿ ಭಟ್

(ನ್ಯೂಸ್ ಕಡಬ)newskadaba.com ಉಡುಪಿ, ಏ.12. “ಟಿಕೆಟ್ ತಪ್ಪಿರುವುದಕ್ಕೆ ಬೇಸರವಿಲ್ಲ, ಆದರೆ ಪಕ್ಷ ನನ್ನನ್ನು ನಡೆಸಿಕೊಂಡ ರೀತಿಯಿಂದ ನನಗೆ ನೋವಾಗಿದೆ” ಎಂದು ಶಾಸಕ ಕೆ. ರಘುಪತಿ ಭಟ್ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಶಾಸಕ ಕೆ. ರಘುಪತಿ ಭಟ್ ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅವರ ಮನೆ ಮುಂದೆ ನೂರಾರು ಸಂಖ್ಯೆಯ ಕಾರ್ಯಕರ್ತರು ಸೇರಿದ್ದು, ಮಾಧ್ಯಮದೊಂದಿಗೆ ಮಾತನಾಡಿ, “ಪಕ್ಷ ನನ್ನನ್ನು ನಡೆಸಿಕೊಂಡ ರೀತಿಯಿಂದ ನೋವಾಗಿದೆ. ಯಾವೊಬ್ಬ ನಾಯಕರೂ ನನಗೆ ಕಾಲ್ ಮಾಡಿ ಮಾತನಾಡಿಲ್ಲ. ಒಬ್ಬ ಜಿಲ್ಲಾಧ್ಯಕ್ಷರೂ ನನಗೆ ಕರೆ

ಉಡುಪಿ: ‘ಪಕ್ಷ ನನ್ನನ್ನು ನಡೆಸಿಕೊಂಡ ರೀತಿಗೆ ನೋವಾಗಿದೆ’ ➤ ರಘುಪತಿ ಭಟ್ Read More »

ಕರಾವಳಿ

ಉಡುಪಿ: ಹದಿಹರೆಯದ ಯುವತಿ ನಾಪತ್ತೆ ➤ ದೂರು ದಾಖಲು

(ನ್ಯೂಸ್ ಕಡಬ)newskadaba.com ಉಡುಪಿ, ಏ.11. ಉಡುಪಿಯಲ್ಲಿ ಹದಿಹರೆಯದ ಯುವತಿ ನಾಪತ್ತೆಯಾಗಿದ್ದಾಳೆ ಎಂದು ವರದಿ ತಿಳಿಸಿದೆ. ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ಅಂಬಾಗಿಲು ಕಕ್ಕುಂಜೆ ಹೌಸ್ ನಿವಾಸಿ ಶ್ರೀಲಕ್ಷ್ಮೀ(19) ನಾಪತ್ತೆಯಾದ ಯುವತಿಯಾಗಿದ್ದಾಳೆ. ಏಪ್ರಿಲ್ 7 ರಂದು ಶ್ರೀ ಲಕ್ಷ್ಮೀ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ. 5 ಅಡಿ 6 ಇಂಚು ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ

ಉಡುಪಿ: ಹದಿಹರೆಯದ ಯುವತಿ ನಾಪತ್ತೆ ➤ ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಉಡುಪಿ: ‘ಫ್ಯಾಕ್ಟ್ ಚೆಕ್ ವಿಭಾಗ’ ➤ ನಕಲಿ ಸುದ್ದಿಗೆ ಕೇಂದ್ರ ಕಡಿವಾಣ

(ನ್ಯೂಸ್ ಕಡಬ)newskadaba.com ಉಡುಪಿ, ಏ.08. ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸರ್ಕಾರದ ಕುರಿತು ನಕಲಿ ಸುದ್ದಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನೂತನವಾಗಿ “ಫ್ಯಾಕ್ಟ್ ಚೆಕ್ ವಿಭಾಗ” ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಫೇಸ್ ಬುಕ್, ಯೂಟ್ಯೂಬ್ ,ಟ್ವಟರ್ ಸೇರಿ ವಿವಿಧ ಆನ್ ಲೈನ್ ವೇದಿಕೆಗಳಲ್ಲಿ ಪ್ರಸಾರ ಮಾಡಲಾಗುವ ಸುದ್ದಿಗಳ ಸತ್ಯಾ ಸತ್ಯತೆಯನ್ನು ಪರಿಶೀಲಿಸಲು, ಅವುಗಳ ಸತ್ಯಾಂಶ ಗಮನಿಸಲು ಹೊಸ ವಿಭಾಗ ಸ್ಥಾಪಿಸಲು ನಿರ್ಧರಿಸುವುದಾಗಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಖಾತೆಯ ಸಹಾಯಕ ಸಚಿವರಾದ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.  

ಉಡುಪಿ: ‘ಫ್ಯಾಕ್ಟ್ ಚೆಕ್ ವಿಭಾಗ’ ➤ ನಕಲಿ ಸುದ್ದಿಗೆ ಕೇಂದ್ರ ಕಡಿವಾಣ Read More »

ಕರಾವಳಿ

ಕುಂದಾಪುರ: ಫಾಲ್ಸ್ ನಲ್ಲಿ ನೀರಿಗಿಳಿದ ವಿದ್ಯಾರ್ಥಿ ನಾಪತ್ತೆ

(ನ್ಯೂಸ್ ಕಡಬ)newskadaba.com ಕುಂದಾಪುರ, ಏ.08. ಸ್ನೇಹಿತರೊಂದಿಗೆ ಗುಡ್ ಪ್ರೈಡೇ ರಜೆಗೆ ಮಜಾ ಮಾಡಲು ಬಂದ ವಿದ್ಯಾರ್ಥಿಯೊಬ್ಬ ನೀರು ಪಾಲಾಗಿ ನಾಪತ್ತೆಯಾದ ಘಟನೆ ಬೈಂದೂರು ತಾಲೂಕಿನ ಕೊಸಳ್ಳಿ ಪಾಲ್ಸ್ ನಲ್ಲಿ ನಡೆದಿದೆ. ಘಟನೆಯಲ್ಲಿ ನಾಪತ್ತೆಯಾದ ವಿದ್ಯಾರ್ಥಿಯನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಎ.ಎಸ್.ಐ ಕುಮಾರ ಶೆಟ್ಟಿ ಎಂಬುವರ ಮಗ ಚಿರಾಂತ್ ಶೆಟ್ಟಿ(20) ಎಂದು ತಿಳಿದುಬಂದಿದೆ.  

ಕುಂದಾಪುರ: ಫಾಲ್ಸ್ ನಲ್ಲಿ ನೀರಿಗಿಳಿದ ವಿದ್ಯಾರ್ಥಿ ನಾಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಉಡುಪಿ: ಅಕ್ರಮ ಮದ್ಯ ಮಾರಾಟ ವಿರುದ್ದ ಕಠಿಣ ಕ್ರಮ ➤ ಡಿಸಿ ಕೂರ್ಮಾರಾವ್ ಎಂ ಎಚ್ಚರಿಕೆ

(ನ್ಯೂಸ್ ಕಡಬ)newskadaba.com ಉಡುಪಿ, ಏ.07. ಸುಗಮ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಎಲ್ಲಾ ಸಿದ್ದತೆಗಳನ್ನು ನಡೆಸಲಾಗುತ್ತಿದ್ದು, ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ನಿಯಮ ಉಲ್ಲಂಘಿಸಿ ಅಕ್ರಮವಾಗಿ ಮದ್ಯಮಾರಾಟ ಮಾಡುವ ಸನ್ನದುದಾರರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಎಚ್ಚರಿಕೆ ನೀಡಿದರು. ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ , ಜಿಲ್ಲೆಯ ವೈನ್ ಮರ್ಚೆಂಟ್ ಅಸೋಸಿಯೇಷನ್ ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳೊದಿಗೆ ಹಾಗೂ ಚೇಂಬರ್ ಆಫ್ ಕಾಮರ್ಸ್ ಮತ್ತು

ಉಡುಪಿ: ಅಕ್ರಮ ಮದ್ಯ ಮಾರಾಟ ವಿರುದ್ದ ಕಠಿಣ ಕ್ರಮ ➤ ಡಿಸಿ ಕೂರ್ಮಾರಾವ್ ಎಂ ಎಚ್ಚರಿಕೆ Read More »

ಕರಾವಳಿ

ಉಡುಪಿ: ವಿವಿಧೆಡೆ ಪೋಲಿಸರಿಂದ ಪಥ ಸಂಚಲನ

(ನ್ಯೂಸ್ ಕಡಬ)newskadaba.com ಉಡುಪಿ, ಏ.07. ಉಡುಪಿ ಜಿಲ್ಲೆಯ ವಿವಿಧೆಡೆ ಚುನಾ ವಣೆ ಪೂರ್ವಭಾವಿಯಾಗಿ ಪ್ಯಾರಾ ಮಿಲಿಟರಿ ಪಡೆ, ಪೊಲೀಸ್ ಅಧಿಕಾರಿಗಳು ಹಾಗೂ ಸಿಬಂದಿ ಜಿಲ್ಲೆಯ ವಿವಿಧೆಡೆ ಪಥ ಸಂಚಲನ ನಡೆಸಿದರು ಎಂದು ವರದಿಯಾಗಿದೆ. ಉಡುಪಿ ವಿಧಾನಸಭಾ ಕ್ಷೇತ್ರಕ್ಕೊಳಪಡುವ ಮಲ್ಪೆ, ಕಾಪು ವಿಧಾನಸಭಾ ಕ್ಷೇತ್ರಕ್ಕೊಳಪಡುವ ಕಾಪು ಪ್ರದೇಶ, ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೊಳಪಡುವ ಬೈಲೂರು ಹಾಗೂ ಕಾರ್ಕಳ ಪೇಟೆ, ಬೈಂದೂರು ವಿಧಾನಸಭಾ ಕ್ಷೇತ್ರಕ್ಕೊಳಪಡುವ ಶಿರೂರು ಭಾಗ ಗಳಲ್ಲಿ ಪಥಸಂಚಲನ ಮಾಡಲಾಯಿತು.  

ಉಡುಪಿ: ವಿವಿಧೆಡೆ ಪೋಲಿಸರಿಂದ ಪಥ ಸಂಚಲನ Read More »

ಕರಾವಳಿ

ಸೈಕಲ್‌ನಲ್ಲಿ ಕನ್ಯಾಕುಮಾರಿಗೆ 1500 ಕಿ.ಮೀ ಯಾತ್ರೆ ಪೂರ್ಣಗೊಳಿಸಿದ ಪದವಿ ವಿದ್ಯಾರ್ಥಿ 

(ನ್ಯೂಸ್ ಕಡಬ)newskadaba.com  ಉಡುಪಿ, ಏ.01. ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ತೃತೀಯ ಬಿಎ ​​ವಿದ್ಯಾರ್ಥಿ ದಿನೇಶ್ ಸೈಕಲ್‌ನಲ್ಲಿ ಕನ್ಯಾಕುಮಾರಿಗೆ 1500 ಕಿಲೋಮೀಟರ್ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಕಾಲೇಜಿನಲ್ಲಿ ಅವರಿಗೆ ಅದ್ದೂರಿ ಸ್ವಾಗತ ನೀಡಲಾಯಿತು ಎನ್ನಲಾಗಿದೆ. 1500 ಕಿ.ಮೀ 20 ದಿನಗಳಲ್ಲಿ ಕನ್ಯಾಕುಮಾರಿ ಯಾತ್ರೆ ಪೂರ್ಣಗೊಳಿಸಿದ ದಿನೇಶ್ ಅವರನ್ನು ಕಾಲೇಜು ಕ್ಯಾಂಪಸ್‌ನಿಂದ ಅವರ ತಾಯಿ ಪಾರ್ವತಿ ಬೋವಿಯವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.  

ಸೈಕಲ್‌ನಲ್ಲಿ ಕನ್ಯಾಕುಮಾರಿಗೆ 1500 ಕಿ.ಮೀ ಯಾತ್ರೆ ಪೂರ್ಣಗೊಳಿಸಿದ ಪದವಿ ವಿದ್ಯಾರ್ಥಿ  Read More »

ಕರಾವಳಿ

ಉಡುಪಿ: ಕಳ್ಳತನವಾದ 34 ಮೊಬೈಲ್‌‌ಗಳನ್ನು ವಾರಸುದಾರರಿಗೆ ಹಿಂದಿರುಗಿಸಿದ ಪೊಲೀಸರು

(ನ್ಯೂಸ್ ಕಡಬ)newskadaba.com ಉಡುಪಿ, ಮಾ.31. ಕಳ್ಳತನವಾದ ಹಾಗೂ ಕಳೆದು ಹೋಗಿದ್ದ 34 ಮೊಬೈಲ್ ಫೋನ್‌ ಗಳನ್ನು ಪತ್ತೆ ಹಚ್ಚಿ ಆಯಾ ಮಾಲೀಕರಿಗೆ ಹಸ್ತಾಂತರಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ವರದಿಯಾದ ವಿವಿಧ ಪ್ರಕರಣಗಳ ಅಡಿಯಲ್ಲಿ, ಕಳೆದುಹೋದ 34 ಫೋನ್‌ ಗಳನ್ನು ಜಿಲ್ಲಾ ಪೊಲೀಸರು ಪತ್ತೆ ಮಾಡಿದ್ದಾರೆ. ಮೊಬೈಲ್ ಫೋನ್‌ ಗಳು ಕಳ್ಳತನ ಮತ್ತು ನಾಪತ್ತೆಯಾದ ಬಗ್ಗೆ ಸಾರ್ವಜನಿಕರು ಆದಷ್ಟು ಬೇಗ ಹತ್ತಿರದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡುವಂತೆ ಉಡುಪಿ ಜಿಲ್ಲಾ ಪೊಲೀಸ್ ಆಯುಕ್ತರು ವಿನಂತಿಸಿದ್ದಾರೆ.

ಉಡುಪಿ: ಕಳ್ಳತನವಾದ 34 ಮೊಬೈಲ್‌‌ಗಳನ್ನು ವಾರಸುದಾರರಿಗೆ ಹಿಂದಿರುಗಿಸಿದ ಪೊಲೀಸರು Read More »

ಕರಾವಳಿ

ಉಡುಪಿ: ಬ್ಲೇಡ್‌ನಿಂದ ಇರಿದು ಯುವಕನ ಕೊಲೆಗೆ ಯತ್ನ     ➤ ಇಬ್ಬರು ವಶಕ್ಕೆ..!

(ನ್ಯೂಸ್ ಕಡಬ)Newskadaba.com ಮಾ.31 ಕ್ಷುಲ್ಲಕ ಕಾರಣಕ್ಕಾಗಿ ಗಾಂಜಾ ನಶೆಯಲ್ಲಿದ್ದ ನಾಲ್ವರು ಯುವಕರ ತಂಡ ವ್ಯಕ್ತಿಯೊಬ್ಬರಿಗೆ ಲೇಸರ್ ಬ್ಲೇಡ್‌ನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಮಾ.30ರಂದು ನಸುಕಿನ ವೇಳೆ ಆದಿಉಡುಪಿ ಎಪಿಎಂಸಿ ಮಾರ್ಕೆಟ್ ಹಿಂಬದಿ ನಡೆದಿದೆ. ಗಂಭೀರವಾಗಿ ಗಾಯಗೊಂಡ ಆದಿ ಉಡುಪಿಯ ಪ್ರಶಾಂತ (27) ಹಾಗೂ ಹಲ್ಲೆ ನಡೆಸುವ ವೇಳೆ ಗಾಯಗೊಂಡಿದ್ದ ಆರೋಪಿಗಳಾದ ಪ್ರಶಾಂತ್ ಮತ್ತು ಸಂತೋಷ್ ಎಂಬವರು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಉಳಿದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.      

ಉಡುಪಿ: ಬ್ಲೇಡ್‌ನಿಂದ ಇರಿದು ಯುವಕನ ಕೊಲೆಗೆ ಯತ್ನ     ➤ ಇಬ್ಬರು ವಶಕ್ಕೆ..! Read More »

ಕರ್ನಾಟಕ
Scroll to Top