sullia

ಸುಳ್ಯ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಬಿ.ಇ ರಮೇಶ್ ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba.com ಸುಳ್ಯ‌, ಮಾ. 17. ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ನೇಮಕಗೊಂಡಿರುವ ಬಿ.ಇ. ರಮೇಶ್ ರವರು ಅಧಿಕಾರ ಸ್ವೀಕರಿಸಿದರು. ಪ್ರಭಾರ ಬಿಇಒ ಶ್ರೀಮತಿ ವೀಣಾ ಎಂಟಿ ಅವರು ಅಧಿಕಾರ ಹಸ್ತಾಂತರಿಸಿದರು. ಬಿಇಒ ಕಚೇರಿ ಸಿಬ್ಬಂದಿಗಳು ನೂತನ ಶಿಕ್ಷಣಾಧಿಕಾರಿಗಳನ್ನು ಸ್ವಾಗತಿಸಿದರು.

ಸುಳ್ಯ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಬಿ.ಇ ರಮೇಶ್ ಅಧಿಕಾರ ಸ್ವೀಕಾರ Read More »

ಕರಾವಳಿ

ಸುಳ್ಯ: ಸಾಲ ತೀರಿಸಲಾಗದ ಹಿನ್ನೆಲೆ ಬ್ಯಾಂಕ್ ಗೆ ನುಗ್ಗಿದ ವ್ಯಕ್ತಿ        ➤ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನ

(ನ್ಯೂಸ್ ಕಡಬ)newskadaba.com ಸುಳ್ಯ, ಫೆ.21. ಸಾಲದ ಕಂತು ತೀರಿಸಲಾಗದೆ ಬ್ಯಾಂಕ್ ಗೆ ನುಗ್ಗಿದ ವ್ಯಕ್ತಿಯೊಬ್ಬ ಪೆಟ್ರೊಲ್ ಚೆಲ್ಲಿ ಬ್ಯಾಂಕ್ ಗೆ ಬೆಂಕಿಹಚ್ಚಲು ಯತ್ನಿಸಿದಲ್ಲದೆ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ಸುಳ್ಯದಿಂದ ವರದಿಯಾಗಿದೆ. ಸುಳ್ಯದ ರಥಬೀದಿಯಲ್ಲಿರುವ ಸರಸ್ವತಿ ಬ್ಯಾಂಕ್ ಗೆ ನುಗ್ಗಿದ ಸ್ಥಳೀಯ ಪೂರಿ ಅಂಗಡಿ ನಡೆಸುತ್ತಿದ್ದ ಶಿವಣ್ಣಗೌಡ ಎಂಬವರು ಈ ರೀತಿ ಮಾಡಲು ಯತ್ನಿಸಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. news  

ಸುಳ್ಯ: ಸಾಲ ತೀರಿಸಲಾಗದ ಹಿನ್ನೆಲೆ ಬ್ಯಾಂಕ್ ಗೆ ನುಗ್ಗಿದ ವ್ಯಕ್ತಿ        ➤ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನ Read More »

ಕರಾವಳಿ, ಕ್ರೈಮ್ ನ್ಯೂಸ್

ಪ್ರವಾಸಕ್ಕೆಂದು ಹೋಗಿದ್ದ ಸುಳ್ಯದ ವಿದ್ಯಾರ್ಥಿ ಪುಣೆಯಲ್ಲಿ ಮೃತ್ಯು !!

(ನ್ಯೂಸ್ ಕಡಬ)newskadaba.com ಸುಳ್ಯ, ಫೆ.17. ಅಜ್ಮೀರ್‌ ಪ್ರವಾಸಕ್ಕೆಂದು ಹೋಗಿದ್ದ ಸುಳ್ಯದ ವಿದ್ಯಾರ್ಥಿಯೋರ್ವರು ಉಸಿರಾಟದ ಸಮಸ್ಯೆಯಿಂದ ಮೃತಪಟ್ಟ ಘಟನೆ ಪುಣೆಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಸಿದ್ದೀಖ್ ಅಲ್ ಮದೀನಿ ಎಂದು ಗುರುತಿಸಲಾಗಿದೆ. ಸಂಸ್ಥೆಯ ಸ್ನೇಹಿತರ ಜತೆ ಮೊನ್ನೆ ಅಜ್ಮೀರ್ ಪ್ರವಾಸಕ್ಕೆಂದು ಹೋಗಿದ್ದ ಅವರಿಗೆ ಪುಣೆಯಲ್ಲಿ ಉಸಿರಾಟದ ಸಮಸ್ಯೆ ಉಂಟಾಗಿದ್ದು, ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟಿದ್ದಾಗಿ ಎನ್ನಲಾಗಿದೆ.  

ಪ್ರವಾಸಕ್ಕೆಂದು ಹೋಗಿದ್ದ ಸುಳ್ಯದ ವಿದ್ಯಾರ್ಥಿ ಪುಣೆಯಲ್ಲಿ ಮೃತ್ಯು !! Read More »

ಕರಾವಳಿ, ಕ್ರೈಮ್ ನ್ಯೂಸ್

ಸುಳ್ಯ: ಈಜಲು ನೀರಿಗಿಳಿದ ಯುವಕರಿಬ್ಬರು ಮೃತ್ಯು!     

(ನ್ಯೂಸ್ ಕಡಬ)newskadaba.com ಸುಳ್ಯ, ಫೆ.12. ಈಜಲು ನೀರಿಗಿಳಿದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಅಜ್ಜಾವರ ಪಯಸ್ವಿನಿ ನದಿಯಲ್ಲಿ ಸಂಭವಿಸಿದೆ. ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಯುವಕರ ಗುಂಪು ಪಕ್ಕದಲ್ಲೇ ಇದ್ದ ಪಯಸ್ವಿನಿ ನದಿಗೆ ಈಜಲು ತೆರಳಿದ್ದು, ಈ ವೇಳೆ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬಳಿಕ ಮೃತದೇಹವನ್ನು ಹೊರತೆಗೆದು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಸುಳ್ಯ: ಈಜಲು ನೀರಿಗಿಳಿದ ಯುವಕರಿಬ್ಬರು ಮೃತ್ಯು!      Read More »

ಕರಾವಳಿ, ಕ್ರೈಮ್ ನ್ಯೂಸ್

ಸುಳ್ಯ: ವಿವಾಹಿತೆ ಜೊತೆ ಸಿಕ್ಕಿಬಿದ್ದ ಮುಖಂಡ  ➤ ಅನೈತಿಕ ಸಂಬಂಧದ ಆರೋಪ

(ನ್ಯೂಸ್ ಕಡಬ)newskadaba.com ಸುಳ್ಯ, ಫೆ.02. ವಿವಾಹಿತ ಮಹಿಳೆಯನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದ ಬಂಟ್ವಾಳ ತಾಲೂಕಿನ ಮುಖಂಡನೋರ್ವ ರೆಡ್ ಹ್ಯಾಂಡಾಗಿ ಜೊತೆಗಿದ್ದ ಮಹಿಳೆಯ ಪತಿಯ ಕೈಗೆ ಸಿಕ್ಕಿಬಿದ್ದ ಘಟನೆ ಸುಳ್ಯ ತಾಲೂಕಿನ ಜಾಲ್ಸೂರಿನಲ್ಲಿ ನಡೆದಿದೆ. ಈ ವೇಳೆ ಆರೋಪಿ ಮಹಿಳೆಯನ್ನು ಕಾರಿನಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಬಂಟ್ವಾಳ ತಾಲೂಕು ಕೇಪು ಗ್ರಾಮ ಮುಳಿಯಾಲ ಮುಗೇರು ನಿವಾಸಿ, ಪುಣಚ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ, ಪುತ್ತೂರು ಗ್ರಾಮಾಂತರ ಮಂಡಲದ ಉಪಾಧ್ಯಕ್ಷರೆನ್ನಲಾದ ಹರಿಪ್ರಸಾದ್ ಯಾದವ್ ಆರೋಪಿಯಾಗಿದ್ದು, ಅವರ ವಿರುದ್ಧ ಮಹಿಳೆಯ ಪತಿ ಪುತ್ತೂರು

ಸುಳ್ಯ: ವಿವಾಹಿತೆ ಜೊತೆ ಸಿಕ್ಕಿಬಿದ್ದ ಮುಖಂಡ  ➤ ಅನೈತಿಕ ಸಂಬಂಧದ ಆರೋಪ Read More »

ಕರಾವಳಿ

ಸುಳ್ಯ: ನೇಣು ಬಿಗಿದು ಮಹಿಳೆ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಸುಳ್ಯ, ಜ.27. ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯದ ಅಜ್ಜಾವರ ಗ್ರಾಮದ ಪಡ್ಡಂಬೈಲು ಸಮೀಪದ ನಾಂಗುಳಿ ಎಂಬಲ್ಲಿ ಸಂಭವಿಸಿದೆ. ಶರತ್ ಎಂಬವರ ಪತ್ನಿ ಮಲ್ಲಿಕಾ(26) ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ ಎನ್ನಲಾಗಿದೆ. ಮೃತ ಮಹಿಳೆ ಮಲ್ಲಿಕಾ ಅವರು ಕೆ.ವಿ.ಜಿ. ಆಯುರ್ವೇದಿಕ್ ನಲ್ಲಿ ಉದ್ಯೋಗಿಯಾಗಿದ್ದರು. ರಜೆ ಹಿನ್ನಲೆ ಮಲ್ಲಿಕಾ ಮನೆಯಲ್ಲಿದ್ದರು. ಸಂಜೆ ವೇಳೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದು ಬಂದಿದೆ. ಶವವನ್ನು ಸುಳ್ಯ ಸರಕಾರಿ

ಸುಳ್ಯ: ನೇಣು ಬಿಗಿದು ಮಹಿಳೆ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಸುಳ್ಯ: ಕಾಡಾನೆ ಹಾವಳಿ ನಿಯಂತ್ರಿಸಲು ಜೇನು ನೊಣ ಬಳಕೆ

(ನ್ಯೂಸ್ ಕಡಬ)newskadaba.com ಮಂಗಳೂರು, ಜ.24. ಕಾಡಾನೆಗಳು ನಾಡಿನತ್ತ ಹೆಜ್ಜೆ ಹಾಕಿ ಬೆಳೆಗಳನ್ನು ಧ್ವಂಸ ಮಾಡುತ್ತಿದ್ದು, ರಾಜ್ಯದ ಕೆಲವು ಪ್ರದೇಶಗಳಲ್ಲಿ ರೈತರು ಕಂಗಾಲಾಗಿದ್ದಾರೆ. ಸುಳ್ಯದ ಕೃಷಿಕರು ಇವುಗಳ ಹಾವಳಿ ತಡೆಗೆ ಸರಳ ಮತ್ತು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಸುಳ್ಯ ತಾಲೂಕಿನ ಮಂಡೆಕೋಲು, ಅಜ್ಜಾವರ, ಅಲೆಟ್ಟಿ ಮುಂತಾದ ಗ್ರಾಮಗಳ ಜನರು ಆನೆಗಳು ನೀಡುತ್ತಿರುವ ತೊಂದರೆಯಿಂದ ಹೈರಾಣಾಗಿದ್ದರು. ಆನೆ ಕಂದಕ, ಸೋಲಾರ್ ಬೇಲಿ, ಸಿಮೆಂಟ್ ಹಲಗೆ ಅಳವಡಿಕೆ ಹೀಗೆ ಹಲವು ತಂತ್ರಗಳನ್ನು ಅನುಷ್ಠಾನಗೊಳಿಸಿದ್ದಾರೆ.

ಸುಳ್ಯ: ಕಾಡಾನೆ ಹಾವಳಿ ನಿಯಂತ್ರಿಸಲು ಜೇನು ನೊಣ ಬಳಕೆ Read More »

ಕರಾವಳಿ

ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಆಳಕ್ಕೆ ಉರುಳಿ ಬಿದ್ದ ಕಾರು !

(ನ್ಯೂಸ್ ಕಡಬ)newskadaba.com ಸುಳ್ಯ, ಜ.24. ಇನೋವಾ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಆಳಕ್ಕೆ ಉರುಳಿ ಬಿದ್ದು ಅದರಲ್ಲಿದ್ದ ಓರ್ವನ ಕಾಲು ಜಖಂಗೊಂಡ ಘಟನೆ ಸುಳ್ಯದಲ್ಲಿ ವರದಿಯಾಗಿದೆ. ಮಣಿಪಾಲ ಮೂಲದ ಸಮೃದ್ಧಿ ಸೊಸೈಟಿ ಸಂಸ್ಥೆಗೆ ಸೇರಿದ ಇನೋವಾ ಕಾರು ಮಡಿಕೇರಿಗೆ ತೆರಳಿ ಮರಳಿ ಮಣಿಪಾಲಕ್ಕೆ ಹೋಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಇನ್ನು ಕಾರು ಉರುಳಿದ ಬಳಿಕ ಅಲ್ಲೇ ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಅಪಘಾತದಿಂದ ಕಾರಿನಲ್ಲಿದ್ದ ಓರ್ವರ ಕಾಲಿಗೆ ಗಂಭೀರ ಗಾಯಗಳಾಗಿದ್ದು,

ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಆಳಕ್ಕೆ ಉರುಳಿ ಬಿದ್ದ ಕಾರು ! Read More »

ಕರಾವಳಿ, ಕ್ರೈಮ್ ನ್ಯೂಸ್

ಸುಳ್ಯ: ಕೂಲಿ ಕೆಲಸಕ್ಕೆ ತೆರಳಿದ್ದ ವ್ಯಕ್ತಿಯ ಮೃತದೇಹ ಬಾವಿಯಲ್ಲಿ ಪತ್ತೆ

(ನ್ಯೂಸ್ ಕಡಬ)newskadaba.com ಸುಳ್ಯ, ಜ.20. ಕೆಲ ದಿನಗಳ ಹಿಂದೆ ಮನೆಯಿಂದ ಕೂಲಿ ಕೆಲಸಕ್ಕೆಂದು ಹೋಗಿದ್ದ ವ್ಯಕ್ತಿಯ ಶವ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಪಂಜ ಸಮೀಪದಲ್ಲಿ ಬೆಳಕಿಗೆ ಬಂದಿದೆ.  ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದ ಪೆರ್ಮಾಜೆ ನಾರಾಯಣ ನಾಯ್ಕ(70) ಶವವಾಗಿ ಪತ್ತೆಯಾದ ವ್ಯಕ್ತಿ. ಎಂದಿನಂತೆ ಕೂಲಿ ಕೆಲಸಕ್ಕೆಂದು ಮನೆಯಿಂದ ತೆರಳಿದ್ದರು. ಬಳಿಕ ಅವರು ಮನೆಗೆ ಬಾರದೇ ಇದ್ದುದರಿಂದ ಮನೆಯವರು ಹುಟುಕಾಟ ವಿವಿಧೆಡೆ ಹುಡುಕಾಟ ನಡೆಸಿದ್ದರು. ಬಾವಿಯಲ್ಲಿ ಅವರ ಶವ ಪತ್ತೆಯಾಗಿದೆ. ಮನೆಯವರು ಸ್ಥಳಕ್ಕೆ ಆಗಮಿಸಿ ಮೃತ ದೇಹ ಖಚಿತ

ಸುಳ್ಯ: ಕೂಲಿ ಕೆಲಸಕ್ಕೆ ತೆರಳಿದ್ದ ವ್ಯಕ್ತಿಯ ಮೃತದೇಹ ಬಾವಿಯಲ್ಲಿ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಅರಂತೋಡು: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

(ನ್ಯೂಸ್ ಕಡಬ) newskadaba.com ಅರಂತೋಡು, ಜ. 18. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಪಲ್ಟಿಯಾದ ಘಟನೆ ಮಾಣಿ- ಮೈಸೂರು ಹೆದ್ದಾರಿಯ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಬಳಿ ನಡೆದಿದೆ. ಮಡಿಕೇರಿಯಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಅರಂತೋಡು: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top