Special Article

ಆಹಾರ ಶ್ರೇಣೀಬದ್ಧತೆಗೆ ಹೆಚ್ಚು ಪ್ರಾಮುಖ್ಯತೆ- ಆರೋಗ್ಯವನ್ನು ಬೆಳೆಸುವ ಪರಿಕಲ್ಪನೆ; ಡಾ.ಅಜಿತ್ ಕೋಡಿಂಬಾಳ

(ನ್ಯೂಸ್ ಕಡಬ) newskadaba.com ನ. 02. ನಮ್ಮ ದೈನಂದಿನ ಆಹಾರವು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ. ಇಂದು, ಆರೋಗ್ಯಕರ ಜೀವನಶೈಲಿಯ ಪರಿಕಲ್ಪನೆಗಳಲ್ಲಿ ಆಹಾರ ಶ್ರೇಣೀಬದ್ಧತೆ ಹೊಸ ಘಟ್ಟವನ್ನು ಹೊಂದಿದೆ. ನಾವು ಆಯ್ಕೆ ಮಾಡುವ ಆಹಾರವು ನಮಗೆ ಪೋಷಣೆಯೊಂದಿಗೆ ಮಾತ್ರವಲ್ಲ, ಹಲವು ಕಾಯಿಲೆಗಳನ್ನು ತಡೆಯಲು ಸಹ ನೆರವಾಗುತ್ತದೆ. ಆಹಾರ ಶ್ರೇಣೀಬದ್ಧತೆ ಅಂದರೆ ಏನು? ಆಹಾರ ಶ್ರೇಣೀಬದ್ಧತರಯು ಅನ್ನದ ಮೂಲಗಳು, ಪೋಷಕಾಂಶಗಳು ಮತ್ತು ಆಹಾರದ ಗುಣಮಟ್ಟವನ್ನು ಪರಿಗಣಿಸುತ್ತವೆ. ಇದು ಮೂರು ಪ್ರಮುಖ ವರ್ಗಗಳಲ್ಲಿ ಹೆಸರಾಗುತ್ತದೆ. ಕಾರ್ಬೋಹೈಡ್ರೇಟ್ಸ್, ಪ್ರೋಟೀನ್ಸ್ ಮತ್ತು ಕೊಬ್ಬಿದ […]

ಆಹಾರ ಶ್ರೇಣೀಬದ್ಧತೆಗೆ ಹೆಚ್ಚು ಪ್ರಾಮುಖ್ಯತೆ- ಆರೋಗ್ಯವನ್ನು ಬೆಳೆಸುವ ಪರಿಕಲ್ಪನೆ; ಡಾ.ಅಜಿತ್ ಕೋಡಿಂಬಾಳ Read More »

ಆರೋಗ್ಯ ಮಾಹಿತಿ

‘ಬೆಳಕಿನ ಹಬ್ಬ ದೀಪಾವಳಿ ವೇಳೆ ಆಹಾರದ ಸಾಂಸ್ಕೃತಿಕ ಮಹತ್ವ’ ✍️ ಡಾ.ಅಜಿತ್ ಕೆ ಕೋಡಿಂಬಾಳ

(ನ್ಯೂಸ್ ಕಡಬ) newskadaba.com ಅ. 31. ದೀಪಾವಳಿ, ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪ್ರಸಿದ್ಧವಾದ ಹಬ್ಬಗಳಲ್ಲಿ ಒಂದಾಗಿದೆ. ಇದು “ಎಲೆಕುಂಬು” ಎಂದು ಕರೆಯುವ ಹಬ್ಬವಾಗಿದ್ದು, ಕತ್ತಲೆಯಿಂದ ಬೆಳಕಿಗೆ ಹೋಗುವ ಸಂಕೇತವನ್ನು ಹೊಂದಿದೆ. ದೀಪಾವಳಿಯ ಸಂದರ್ಭದಲ್ಲಿ ಆಹಾರವು ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ, ಇದು ಕೇವಲ ಉಲ್ಲಾಸಕ್ಕಾಗಿ ಮಾತ್ರವಲ್ಲ, ಸಹಜವಾಗಿ ಆಳವಾದ ಸಾಂಸ್ಕೃತಿಕ ಮತ್ತು ವೈದಿಕ ಅರ್ಥವನ್ನು ಒಳಗೊಂಡಿದೆ. 1. ಆಹಾರ ಮತ್ತು ಧಾರ್ಮಿಕ ತತ್ವಗಳು ದೀಪಾವಳಿ ಸಂದರ್ಭದಲ್ಲಿ ತಯಾರಾದ ಆಹಾರವು ದೇವತೆಗಳಿಗೆ ಅರ್ಪಣೆಯಾಗುತ್ತದೆ. ಪುರಾಣಗಳ ಪ್ರಕಾರ, ಈ ಹಬ್ಬದಲ್ಲಿ

‘ಬೆಳಕಿನ ಹಬ್ಬ ದೀಪಾವಳಿ ವೇಳೆ ಆಹಾರದ ಸಾಂಸ್ಕೃತಿಕ ಮಹತ್ವ’ ✍️ ಡಾ.ಅಜಿತ್ ಕೆ ಕೋಡಿಂಬಾಳ Read More »

ವಿಶೇಷ ಲೇಖನಗಳು

“ಟ್ರಮಡಾಲ್” ಎಂಬ ನೋವು ನಿವಾರಕ ಮಾತ್ರೆ- ಡಾ. ಚೂಂತಾರು

(ನ್ಯೂಸ್ ಕಡಬ) newskadaba.com ಅ. 17. ಟ್ರಮಡಾಲ್ ಎಂಬ ವಿವಾದಾತ್ಮಕ ನೋವು ನಿವಾರಕ ಔಷಧಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿರುವ, ಅತ್ಯಂತ ಹೆಚ್ಚು ದುರ್ಬಳಕೆಯಾಗುತ್ತಿರುವ ಮತ್ತು ಹತ್ತು ಹಲವು ವಿವಾದಕ್ಕೆ ಕಾರಣವಾದ ಮಾತ್ರೆ ಟ್ರಮಡಾಲ್ ಎಂದರೂ ತಪ್ಪಾಗಲಾರದು. ಇದೊಂದು ಪರಿಣಾಮಕಾರಿ ನೋವು ನಿವಾರಕ ಔಷಧಿಯಾಗಿದ್ದು, ತೀವ್ರವಾದ ಮಂಡಿ ನೋವು, ಸೊಂಟ ನೋವು, ಹಲ್ಲು ನೋವು ಮುಂತಾದ ನೋವುಗಳಿಗೆ ಬಳಸುವ ಔಷಧಿಯಾಗಿರುತ್ತದೆ. ಬಾಯಿ ಮುಖಾಂತರ ಸುಲಭವಾಗಿ ಸೇವಿಸಬಹುದಾದ ಈ ಔಷಧಿ ಸೇವಿಸಿದ ಒಂದು ಗಂಟೆಯ ಒಳಗೆ, ನೋವು ಶಮನ

“ಟ್ರಮಡಾಲ್” ಎಂಬ ನೋವು ನಿವಾರಕ ಮಾತ್ರೆ- ಡಾ. ಚೂಂತಾರು Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

“ಕಲಾವಿದನ ಕೈಚಳಕದಿಂದ ಮೂಡಿಬಂದ ವರ್ಣರಂಜಿತ ಸರಕಾರಿ ಶಾಲಾ ಗೋಡೆ”- ಪ್ರವೀಣ್ ರಾಜ್ ಕೊಯಿಲ

(ನ್ಯೂಸ್ ಕಡಬ) newskadaba.com ಕಡಬ, ಸೆ. 06. ಸರ್ಕಾರಿ ಶಾಲೆಯೆಂದರೆ ಮೂಗು ಮುರಿಯುವ ಈ ಕಾಲಘಟ್ಟದಲ್ಲಿ ಸರ್ಕಾರಿ ಶಾಲೆಯ ಗೋಡೆಗಳಿಗೆ ಸಂಪೂರ್ಣ ಬಣ್ಣ ಬಳಿದು ಆ ಗೋಡೆಗಳಲ್ಲಿ ವರ್ಣಾಲಂಕಾರ ಮಾಡುವ ಮೂಲಕ ಗಮನ ಸೆಳೆಯುವ ಕಾರ್ಯವನ್ನು ಕಡಬ ತಾಲೂಕಿನ ಕೊಯಿಲ ಗ್ರಾಮದ ಸಬಳೂರು ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಡಲಾಗಿದೆ. ಶಾಲಾ ಪೂರ್ವವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಶಾಲಾಭಿವೃದ್ದಿ ಸಮಿತಿ ಸಹಕಾರದೊಂದಿಗೆ ಸಹೃದಯಿ ದಾನಿಗಳ ನೆರವಿನಿಂದ ಶಿಕ್ಷಣ, ಕಲೆ, ನೃತ್ಯ, ಜಾನಪದ ಸಂಸ್ಕೃತಿಗಳನ್ನು ಪ್ರತಿಬಿಂಬಿಸುವ ವೈವಿಧ್ಯಮಯ ವರ್ಣ

“ಕಲಾವಿದನ ಕೈಚಳಕದಿಂದ ಮೂಡಿಬಂದ ವರ್ಣರಂಜಿತ ಸರಕಾರಿ ಶಾಲಾ ಗೋಡೆ”- ಪ್ರವೀಣ್ ರಾಜ್ ಕೊಯಿಲ Read More »

ವಿಶೇಷ ಲೇಖನಗಳು

“ಕನ್ನಡದ ಕಿಚ್ಚು ಹತ್ತಿಸಿದ ಕನ್ನಡ ಮೇಷ್ಟ್ರು” – ಡಾ. ಚೂಂತಾರು

(ನ್ಯೂಸ್ ಕಡಬ) newskadaba.com ಸೆ. 05. ಅವರ ನಿಜ ನಾಮಧೇಯ ಯಸ್. ವೆಂಕಟರಮಣ ಭಟ್. ಅವರನ್ನು ಎಲ್ಲರೂ ಕರೆಯುತ್ತಿದ್ದದ್ದು ಎಸ್.ವಿ. ಮೇಷ್ಟ್ರು ಎಂಬುದಾಗಿ. ನಾನು ಅಂದಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಾರೆ (ಇಂದಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ) ಯಲ್ಲಿ 7ನೇ ತರಗತಿಯಲ್ಲಿ ಕಲಿಯುತ್ತಿದ್ದಾಗ ನಮಗೆ ಕನ್ನಡ ಕಲಿಸಿದ ನಮ್ಮ ಪ್ರೀತಿಯ ಎಸ್.ವಿ. ಮೇಷ್ಟ್ರು. ಅವರು ಕನ್ನಡದಲ್ಲಿ ಪಾಠ ಆರಂಭಿಸಿದರೆ ನಾವೆಲ್ಲರೂ ಮಂತ್ರಮುಗ್ದರಾಗಿ ತಲ್ಲೀನರಾಗಿ ಕುಳಿತು ಬಿಡುತಿದ್ದೆವು. ಕ್ಲಾಸಿನಲ್ಲಿ ಸಾಸಿವೆ ಬಿದ್ದರೂ ಕೇಳಿಸುವಷ್ಟು ನಿಶ್ಚಬ್ಧ. ಭೀಮ

“ಕನ್ನಡದ ಕಿಚ್ಚು ಹತ್ತಿಸಿದ ಕನ್ನಡ ಮೇಷ್ಟ್ರು” – ಡಾ. ಚೂಂತಾರು Read More »

ವಿಶೇಷ ಲೇಖನಗಳು

ಫೆಬ್ರವರಿ 13- “ಬಾಯಿ, ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರ ದಿನ”; ಡಾ. ಮುರಲೀ ಮೋಹನ ಚೂಂತಾರು

(ನ್ಯೂಸ್ ಕಡಬ) newskadaba.com ಫೆ. 13. ದಂತ ವೈದ್ಯಕೀಯ ಕ್ಷೇತ್ರ ಎನ್ನುವುದು ವೈದ್ಯಕೀಯ ಶಾಸ್ತ್ರದ ಒಂದು ಅವಿಭಾಜ್ಯ ಅಂಗ. ಪ್ರಾಥಮಿಕವಾಗಿ ದಂತ ವೈದ್ಯಕೀಯ ಪದವಿ (B.D.S) ಪಡೆದ ಬಳಿಕ ಸುಮಾರು ಒಂಭತ್ತು ವಿಭಾಗಗಳಲ್ಲಿ ಉನ್ನತ ವ್ಯಾಸಂಗ ಅಥವಾ ಸ್ನಾತಕೋತರ ಪದವಿ (M.D.S)  ಪಡೆಯುವ ಅವಕಾಶವಿದೆ. ಇದರಲ್ಲಿ ಒಂದು ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದ ಸ್ನಾತಕೋತ್ತರ ಪದವಿಯನ್ನು ಬಾಯಿ, ಮುಖ ಮತ್ತು ದವಡೆ ಶಾಸ್ತ್ರ (“ORAL AND MAXILLOFACIAL SURE”) ಎಂದು ಕರೆಯಲಾಗುತ್ತದೆ. ಬಾಯಿ ಮುಖ ಮತ್ತು ದವಡೆ ತಜ್ಞರು

ಫೆಬ್ರವರಿ 13- “ಬಾಯಿ, ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರ ದಿನ”; ಡಾ. ಮುರಲೀ ಮೋಹನ ಚೂಂತಾರು Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

ವಿಶ್ವ ದೃಷ್ಟಿ ದಿನ- ಅಕ್ಟೋಬರ್ 12- ಡಾ. ಮುರಲೀ ಮೋಹನ ಚೂಂತಾರು

(ನ್ಯೂಸ್ ಕಡಬ) newskadaba.com ಪ್ರತಿ ವರ್ಷ ಅಕ್ಟೋಬರ್ ತಿಂಗಳ ಎರಡನೇ ಗುರುವಾರದಂದು ವಿಶ್ವ ದೃಷ್ಟಿ ದಿನ ಎಂದು ಜಾಗತಿಕವಾಗಿ ಆಚರಿಸಲಾಗುತ್ತದೆ. ಕಣ್ಣಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ವಿಶ್ವದಾದ್ಯಂತ ಮಾಡಲಾಗುತ್ತದೆ. 2022ರ ಧ್ಯೇಯ ವಾಕ್ಯ ‘love your eyes at work’ ಅಂದರೆ ಸದಾ ಕೆಲಸದಲ್ಲಿರುವ ನಿಮ್ಮ ಕಣ್ಣನ್ನು ಪ್ರೀತಿಸಿರಿ ಎಂಬುದಾಗಿದೆ. ನೇತ್ರದಾನ ಮಹಾದಾನ ನೇತ್ರದಾನ ಬಹಳ ಪವಿತ್ರವಾದ ದಾನ. ನಾವು ಸತ್ತ ಬಳಿಕವೂ ಜಗತ್ತನ್ನು ಆನಂದಿಸಬೇಕಿದ್ದಲ್ಲಿ ನಮ್ಮ ಕಣ್ಣುಗಳನ್ನು ಇನ್ನೊಬ್ಬರಿಗೆ ನಮ್ಮ ಮರಣಾನಂತರ ದಾನ ಮಾಡಬೇಕು.

ವಿಶ್ವ ದೃಷ್ಟಿ ದಿನ- ಅಕ್ಟೋಬರ್ 12- ಡಾ. ಮುರಲೀ ಮೋಹನ ಚೂಂತಾರು Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

ಸೆ. 26: ವಿಶ್ವ ಸಂತಾನ ನಿಯಂತ್ರಣ ಜಾಗೃತಿ ದಿನ – ಡಾ.ಮುರಲೀ ಮೋಹನ ಚೂಂತಾರು

(ನ್ಯೂಸ್ ಕಡಬ) newskadaba.com ಸೆ. 26. ಪ್ರತಿ ವರ್ಷ ವಿಶ್ವಸಂಸ್ಥೆಯು ಸೆಪ್ಟೆಂಬರ್ 26 ರಂದು ‘ವಿಶ್ವ ಸಂತಾನ ನಿಯಂತ್ರಣ ಜಾಗ್ರತಿ ದಿನ’ ಎಂದು ಆಚರಿಸಿ ಜನರಲ್ಲಿ ಜನ ಸಂಖ್ಯೆ ನಿಯಂತ್ರಣ, ಮಹಿಳೆಯರ ಆರೋಗ್ಯ ಮತ್ತು ಸಂತಾನ ನಿಯಂತ್ರಣದ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ, ಯುವಜನರಲ್ಲಿ ಆರೋಗ್ಯದ ಜಾಗೃತಿ ಮೂಡಿಸಿ ಅವರ ದೈಹಿಕ ಮತ್ತು ಲೈಂಗಿಕ ಜೀವನದ ಬಗ್ಗೆ ಪರಿಪೂರ್ಣ ಮಾಹಿತಿ ನೀಡುವ ಕೆಲಸವನ್ನು ಮಾಡಲಾಗುತ್ತದೆ. ಈ ಆಚರಣೆ ಆರಂಭವಾಗಿ 15 ವರ್ಷ ಕಳೆದರೂ ಜನರಲ್ಲಿ ಸಂತಾನ

ಸೆ. 26: ವಿಶ್ವ ಸಂತಾನ ನಿಯಂತ್ರಣ ಜಾಗೃತಿ ದಿನ – ಡಾ.ಮುರಲೀ ಮೋಹನ ಚೂಂತಾರು Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

“ವಿಶ್ವ ಫಾರ್ಮಸಿಸ್ಟರ ದಿನ- ಸೆಪ್ಟೆಂಬರ್ 25” – ಡಾ|| ಮುರಲೀ ಮೋಹನ್ ಚೂಂತಾರು

(ನ್ಯೂಸ್ ಕಡಬ) newskadba.com ಸೆ. 25. ಪ್ರತಿ ವರ್ಷ ಸಪ್ಟೆಂಬರ್ 25ರಂದು ವಿಶ್ವದಾದ್ಯಂತ ಫಾರ್ಮಸಿ‍ಸ್ಟ್ ಗಳು “ವಿಶ್ವ ಫಾರ್ಮಸಿಸ್ಟ್ ದಿನ” ಎಂದು ಆಚರಿಸಿರುತ್ತಾರೆ. 2009ರಲ್ಲಿ ಎಪ್‍ಐಪಿ ಅಂದರೆ ಇಂಟರ್‍ ನ್ಯಾಷನಲ್ ಫಾರ್ಮಸುಟಿಕಲ್ ಪೆಡರೇಶನ್‍ ಆದೇಶದಂತೆ ಈ ಆಚರಣೆಯನ್ನು ಜಾರಿಗೆ ತರಲಾಯಿತು. ಆರೋಗ್ಯ ಕ್ಷೇತ್ರದ ಅವಿಭಾಜ್ಯ ಅಂಗವಾದ ‘ಫಾರ್ಮಸಿ’ ವಿಭಾಗದ ತಜ್ಞರುಗಳು ತಮ್ಮ ವೃತ್ತಿ ಜೀವನದ ಏಳು ಬೀಳುಗಳನ್ನು ವಿಮರ್ಶಿಸಿ ಕುಂದು ಕೊರತೆಗಳನ್ನು ಪರಾಮರ್ಷಿಸಿ ಮಗದೊಮ್ಮೆ ತಮ್ಮನ್ನು ತಮ್ಮ ವೃತ್ತಿಗೆ ಸಮರ್ಪಿಸಿಕೊಂಡು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಸುದಿನ. ಪ್ರತಿ

“ವಿಶ್ವ ಫಾರ್ಮಸಿಸ್ಟರ ದಿನ- ಸೆಪ್ಟೆಂಬರ್ 25” – ಡಾ|| ಮುರಲೀ ಮೋಹನ್ ಚೂಂತಾರು Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

“ಎಲ್ಲೆಡೆ ಸಲ್ಲುವ ಸಲಹುವ ನಮ್ಮ ಗಣಪ”- ಡಾ. ಮುರಲೀ ಮೋಹನ ಚಂತಾರು

(ನ್ಯೂಸ್ ಕಡಬ) newskadaba.com ಸೆ. 16. ಜಗತ್ತಿನೆಲ್ಲೆಡೆ ಅತ್ಯಂತ ಭಯಭಕ್ತಿ ಮತ್ತು ಶ್ರದ್ಧೆಯಿಂದ ಪೂಜಿಸಲ್ಪಡುವ ದೇವನೊಬ್ಬನೆಂದರೆ ಅದು ‘ಗಣಪ’  ಎಂದರೆ ತಪ್ಪಾಗಲಾರದು. ಅತ್ಯಂತ ವರ್ಣಮಯ ವ್ಯಕ್ತಿತ್ವದ ದೇವರಾದ ಗಣಪತಿಯನ್ನು ಜನರು ವಿನಾಯಕ, ವಿಘ್ನರಾಜ, ಗಣಾಧಿಪ, ಗಣಪ, ಗಣೇಶ, ಏಕದಂತ, ಹೇರಂಭ, ಲಂಭೋದರ, ಗಜಾನನ, ಸುಮುಖ ಹೀಗೆ ಹತ್ತಾರು ಹೆಸರುಗಳಿಂದ ಪೂಜಿಸುತ್ತಾರೆ. ಭಾರತ , ಚೀನಾ, ಜಪಾನ್, ಥಾಯ್ ಲ್ಯಾಂಡ್ , ನೇಪಾಳ , ಶ್ರೀ ಲಂಕಾ, ಇಂಡೋನೇಷ್ಯಾ, ಇರಾನ್, ಅಫ್ಘಾನಿಸ್ತಾನ. ಹೀಗೆ ವಿಶ್ವದೆಲ್ಲೆಡೆ ಹಲವು ಹೆಸರುಗಳಿಂದ ಪ್ರಸಿದ್ಧಿಯಾದ

“ಎಲ್ಲೆಡೆ ಸಲ್ಲುವ ಸಲಹುವ ನಮ್ಮ ಗಣಪ”- ಡಾ. ಮುರಲೀ ಮೋಹನ ಚಂತಾರು Read More »

ಕರಾವಳಿ, ವಿಶೇಷ ಲೇಖನಗಳು
Scroll to Top