rss

RSS ಚುಟುವಟಿಕೆಗೆ ನಿಷೇಧ: ತಮಿಳುನಾಡು ನೀತಿ ಅಧ್ಯಯನಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ

(ನ್ಯೂಸ್‌ ಕಡಬ) newskadaba.com ಅ. 14. ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸುವ ಕುರಿತಾಗಿ ತಮಿಳುನಾಡು ಸರ್ಕಾರದ ನೀತಿಗಳನ್ನು ಅಧ್ಯಯನ ಮಾಡುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರದಂದು ಸೂಚನೆ ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ಸಂಘಟನೆ ತನ್ನ ಚಟುವಟಿಕೆಗಳಿಗೆ ಸರ್ಕಾರಿ ಸ್ಥಳಗಳನ್ನು ಬಳಸಿಕೊಳ್ಳುತ್ತಿದೆ. ತಮಿಳುನಾಡು ರಾಜ್ಯದಲ್ಲಿ ಇದನ್ನು ನಿರ್ಬಂಧಿಸಿದಂತೆ ರಾಜ್ಯದಲ್ಲಿಯೂ ನಿರ್ಬಂಧಿಸಬೇಕು ಎಂದು ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಪತ್ರ […]

RSS ಚುಟುವಟಿಕೆಗೆ ನಿಷೇಧ: ತಮಿಳುನಾಡು ನೀತಿ ಅಧ್ಯಯನಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದಕ್ಕೆ ಕ್ಷಮೆಯಾಚನೆ

(ನ್ಯೂಸ್‌ ಕಡಬ) newskadaba.com, ಆ.26 ಬೆಂಗಳೂರು :ಕರ್ನಾಟಕ ವಿಧಾನಸಭೆಯ ಅಧಿವೇಶನದ ವೇಳೆ ಆರ್‌ಎಸ್‌ಎಸ್‌ನ ಗೀತೆ “ನಮಸ್ತೇ ಸದಾ ವತ್ಸಲೇ ಮಾತೃಭೂಮೇ” ಹಾಡಿದ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟನೆ ನೀಡಿದ್ದು, ತಪ್ಪು ಉದ್ದೇಶವಿಲ್ಲದ ಕಾರಣದಿಂದಾಗಿ ಈ ನಡೆ ನಡೆದಿರುವುದಾಗಿ ತಿಳಿಸಿದ್ದಾರೆ. ಆದರೆ, ಈ ಕುರಿತು ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು ಅಥವಾ ಇತರರು ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಅವರು ಎಲ್ಲರ ಸಮಕ್ಷಮ ಕ್ಷಮೆಯಾಚಿಸಿದ್ದಾರೆ. ಬೆಂಗಳೂರುದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆಶಿ, “ನಾನು ಯಾವುದೇ ತಪ್ಪು ಮಾಡಿಲ್ಲ. ಬದಲಾಗಿ, ವಿರೋಧಪಕ್ಷದ

ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದಕ್ಕೆ ಕ್ಷಮೆಯಾಚನೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ನೂತನ RSS ಕಛೇರಿ ಉದ್ಘಾಟನೆ

(ನ್ಯೂಸ್ ಕಡಬ) newskadaba.com , ಡಿ. 09. ಮಂಗಳೂರು: ಆರ್.ಎಸ್‍.ಎಸ್. (ರಾಷ್ಟ್ರೀಯ ಸ್ವಯಂಸೇವಕ ಸಂಘ)ನ ಸರಸಂಘಚಾಲಕ ಡಾ.ಮೋಹನ್ ಭಾಗವತ್ ಮಂಗಳೂರಿನ ಸಂಘನಿಕೇತನ ಬಳಿ ಹೊಸ RSS ಕಚೇರಿಯನ್ನು ಭಾನುವಾರ ಉದ್ಘಾಟಿಸಿದರು. ಆರೆಸ್ಸೆಸ್ ಈಗಾಗಲೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗಮನಾರ್ಹ ಅಸ್ತಿತ್ವವನ್ನು ಹೊಂದಿದೆ ಎಂಬುದು ಉಲ್ಲೇಖಾರ್ಹ. ಉದ್ಘಾಟನಾ ಸಮಾರಂಭದಲ್ಲಿ ಭಾಗವತ್ ಅವರು ಭಾರತ ಮಾತೆಗೆ ಪುಷ್ಪ ನಮನ ಸಲ್ಲಿಸಿದರು. ಬೆಳವಣಿಗೆ ಮತ್ತು ಸಮೃದ್ಧಿಯ ಸಾಂಕೇತಿಕ ಸೂಚಕವಾಗಿ, ಅವರು ಕಚೇರಿಯ ಆವರಣದಲ್ಲಿ ಗೋಲ್ಡನ್ ಚಂಪಕ ಮರವನ್ನು ನೆಟ್ಟರು, ಕಚೇರಿ

ಮಂಗಳೂರಿನಲ್ಲಿ ನೂತನ RSS ಕಛೇರಿ ಉದ್ಘಾಟನೆ Read More »

ಕರಾವಳಿ

ಏನೇ ಆದರೂ RSS ಕಛೇರಿ ತೆರೆಯಲು ಬಿಡುವುದಿಲ್ಲ- ಪ್ರಿಯಾಂಕ್ ಖರ್ಗೆ ಖಡಕ್ ವಾರ್ನಿಂಗ್

(ನ್ಯೂಸ್ ಕಡಬ) newskadaba.com ಕಲಬುರಗಿ, ಸೆ. 18. ಕಳೆದ ಒಂಬತ್ತು ವರ್ಷಗಳಿಂದ ರಾಜ್ಯದ ನಾನಾ ಶಿಕ್ಷಣ ಸಂಸ್ಥೆಗಳು ಹಾಗೂ ಪೊಲೀಸ್‌ ಠಾಣೆಗಳಲ್ಲಿ ಆರ್‌ಎಸ್‌ಎಸ್‌ ಶಾಖೆಗಳು ನಡೆಯುತ್ತಿವೆ. ಇನ್ನು ಮುಂದೆ ಅವುಗಳನ್ನು ಬಂದ್‌ ಮಾಡಿಸಲಾಗುವುದು ಎಂದು ಆರ್‌ಡಿಪಿಆರ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಖಡಕ್‌ ಎಚ್ಚರಿಕೆ ನೀಡಿದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ಶಿಕ್ಷಣ ಸಂಸ್ಥೆಗಳು ಹಾಗೂ ಪೊಲೀಸ್‌ ಠಾಣೆಯಲ್ಲಿ ಕೇಸರಿ ಶಾಲು ಹಾಕಿಕೊಂಡಿದ್ದು ಕಂಡು ಬಂದಿದೆ. ಇನ್ನು ಮುಂದೆ ಅವೆಲ್ಲವೂ ಬಂದ್‌

ಏನೇ ಆದರೂ RSS ಕಛೇರಿ ತೆರೆಯಲು ಬಿಡುವುದಿಲ್ಲ- ಪ್ರಿಯಾಂಕ್ ಖರ್ಗೆ ಖಡಕ್ ವಾರ್ನಿಂಗ್ Read More »

ಕರ್ನಾಟಕ

ಆರೆಸ್ಸೆಸ್ ಗೆ ಬಿಗ್ ಶಾಕ್ ನೀಡಿದ ರಾಜ್ಯ ಸರಕಾರ- ಜನಸೇವಾ ಟ್ರಸ್ಟ್ ಗೆ ನೀಡಲಾಗಿದ್ದ ಜಮೀನಿಗೆ ತಡೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 14. ಆರ್‌ಎಸ್‌ಎಸ್‌ ಸಂಘಟನೆಯ ಜನಸೇವಾ ಟ್ರಸ್ಟ್‌ಗೆ ಹಿಂದಿನ ಸರಕಾರ ನೀಡಿದ್ದ 35.33 ಎಕರೆ ಗೋಮಾಳ ಭೂಮಿಯನ್ನು ಕಾಂಗ್ರೆಸ್ ತಡೆಹಿಡಿದಿರುವ ಬಗ್ಗೆ ವರದಿಯಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರವು ಆರ್ ಎಸ್‌ಎಸ್ ನ ಜನ ಸೇವಾ ಟ್ರಸ್ಟ್ ಗೆ ಬೆಂಗಳೂರಿನ ಕುರುಬರಹಳ್ಳಿ ಗ್ರಾಮದ ತಾವರಕೆರೆ ಹೋಬಳಿಯಲ್ಲಿ 35 ಎಕರೆ 33 ಗುಂಟೆ ಗೋಮಾಳ ಜಮೀನನ್ನು ನೀಡಿತ್ತು. 2023ರ ಮೇ. 22 ರಂದು ಜಿಲ್ಲಾಧಿಕಾರಿ ಗೋಮಾಳ ಭೂಮಿಯನ್ನು ಜನಸೇವಾ ಟ್ರಸ್ಟ್ ಗೆ ಮಂಜೂರು

ಆರೆಸ್ಸೆಸ್ ಗೆ ಬಿಗ್ ಶಾಕ್ ನೀಡಿದ ರಾಜ್ಯ ಸರಕಾರ- ಜನಸೇವಾ ಟ್ರಸ್ಟ್ ಗೆ ನೀಡಲಾಗಿದ್ದ ಜಮೀನಿಗೆ ತಡೆ Read More »

ಕರ್ನಾಟಕ

ಆರೆಸ್ಸೆಸ್ ರಾಮಕುಂಜ ಮಂಡಲ ವತಿಯಿಂದ ಪಥ ಸಂಚಲನ

(ನ್ಯೂಸ್ ಕಡಬ) newskadaba.com ಕಡಬ, ನ.7. ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಮಕುಂಜ ಮಂಡಲ ವತಿಯಿಂದ ಪಥ ಸಂಚಲನ ಕಾರ್ಯಕ್ರಮ ಭಾನುವಾರ ಸಾಯಂಕಾಲ ನಡೆಯಿತು. ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಗೋಕುಲನಗರದಿಂದ ಆರಂಭಗೊಂಡ ಪಥಸಂಚಲನ ಗೋಳಿತ್ತಡಿ ಮೂಲಕ ಸಾಗಿ ಶಾರದನಗರದಲ್ಲಿ ಸಮಾಪನಗೊಂಡಿತ್ತು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯವಾಹ ಶ್ರೀನಿವಾಸ್ ಉಬರಡ್ಕ ಬೌದ್ದಿಕ್ ನೀಡಿದರು. ಪುಷ್ಪರಾಜ್ ಹಳೆನೇರಿಂಕಿ ಸಂಘದ ಪ್ರಾಥನೆ ಹಾಡಿದರು. ಮುಖ್ಯಶಿಕ್ಷಕ ಚರಣ್ ಉಪಸ್ಥಿತರಿದ್ದರು.

ಆರೆಸ್ಸೆಸ್ ರಾಮಕುಂಜ ಮಂಡಲ ವತಿಯಿಂದ ಪಥ ಸಂಚಲನ Read More »

ಕರಾವಳಿ

ಮುಸ್ಲಿಂ ಯುವತಿಯ ಮದುವೆಯಲ್ಲಿ ಭಾಗವಹಿಸಿದ ಕಲ್ಲಡ್ಕ ಪ್ರಭಾಕರ್ ಭಟ್ ► ಸಾಮಾಜಿಕ ಜಾಲತಾಣದಲ್ಲಿ ಇದೀಗ ಫೊಟೊ ವೈರಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.16. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತನ್ನ ಭಾಷಣದ ಮೂಲಕ ಕೆಲವು ಮುಸ್ಲಿಮರ ವಿರೋಧ ಕಟ್ಟಿಕೊಂಡಿದ್ದ ಹಿರಿಯ ಆರೆಸ್ಸೆಸ್ ಮುಖಂಡ, ಕಲ್ಲಡ್ಕ ಶ್ರೀರಾಮ ವಿದ್ಯಾಸಂಸ್ಥೆಯ ಅಧ್ಯಕ್ಷರಾಗಿರುವ ಕಲ್ಲಡ್ಕ ಪ್ರಭಾಕರ್ ಭಟ್ ಮುಸ್ಲಿಮರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಫೋಟೊವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಓರ್ವ ಮುಸ್ಲಿಂ ಯುವತಿಯ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಭಟ್ ತಾನು ಮುಸ್ಲಿಂ ವಿರೋಧಿಯಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿ ಸಾಮರಸ್ಯ ಕದಡಲು ತನ್ನ ಮುಸ್ಲಿಂ

ಮುಸ್ಲಿಂ ಯುವತಿಯ ಮದುವೆಯಲ್ಲಿ ಭಾಗವಹಿಸಿದ ಕಲ್ಲಡ್ಕ ಪ್ರಭಾಕರ್ ಭಟ್ ► ಸಾಮಾಜಿಕ ಜಾಲತಾಣದಲ್ಲಿ ಇದೀಗ ಫೊಟೊ ವೈರಲ್ Read More »

ಕರಾವಳಿ

ಶರತ್ ಹತ್ಯೆಯಲ್ಲಿ ನೇರ ಭಾಗಿಯಾದ ಪ್ರಮುಖ ಆರೋಪಿಯ ಬಂಧನ ► ಪ್ರಕರಣ ಸಂಬಂಧ ಬಂಧಿತರ ಸಂಖ್ಯೆ 10 ಕ್ಕೆ ಏರಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.22. ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯದಲ್ಲಿ ಭಾಗಿಯಾದ ಪ್ರಮುಖ ಆರೋಪಿ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ಹತ್ಯೆಯಲ್ಲಿ ನೇರವಾಗಿ ಪಾಲ್ಗೊಂಡಿದ್ದ‌ ಸಜಿಪ ಮುನ್ನೂರು ಆಲಾಡಿ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಶರೀಫ್ (22) ಹಾಗೂ ಕೃತ್ಯಕ್ಕೆ ಸಹಕರಿಸಿದ ಪುತ್ತೂರು ತಾಲೂಕಿನ ರಾಮಕುಂಜ ನಿವಾಸಿ ಜಬ್ಬಾರ್(29) ಎಂದು ಪೊಲೀಸರು ತಿಳಿಸಿದ್ದಾರೆ. ಶರತ್ ಮಡಿವಾಳ ಹತ್ಯೆ ಪ್ರಕರಣದಲ್ಲಿ

ಶರತ್ ಹತ್ಯೆಯಲ್ಲಿ ನೇರ ಭಾಗಿಯಾದ ಪ್ರಮುಖ ಆರೋಪಿಯ ಬಂಧನ ► ಪ್ರಕರಣ ಸಂಬಂಧ ಬಂಧಿತರ ಸಂಖ್ಯೆ 10 ಕ್ಕೆ ಏರಿಕೆ Read More »

ಕರಾವಳಿ

ಶರತ್ ಮಡಿವಾಳ ಕೊಲೆ ಪ್ರಕರಣ ► ಮತ್ತಿಬ್ಬರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.19. ಆರೆಸ್ಸೆಸ್ ಕಾರ್ಯಕರ್ತ ಶರತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರದಂದು ಮತ್ತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಬಂಧಿತರನ್ನು ಸಕಲೇಶಪುರ ನಿವಾಸಿಗಳಾದ ಸುಹೈಲ್​ ಹಾಗೂ ಸಾದಿಕ್​ ಎಂದು ಗುರುತಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ದಕ್ಷಿಣ ಕನ್ನಡದ ಎಸ್‌ಪಿ ಸುಧೀರ್‌ ಕುಮಾರ್‌ ರೆಡ್ಡಿ ತಿಳಿಸಿದ್ದಾರೆ.  ಜುಲೈ 4ರಂದು ಆರೆಸ್ಸೆಸ್ ಕಾರ್ಯಕರ್ತ ಬಿ.ಸಿ.ರೋಡ್ ಉದಯ ಲಾಂಡ್ರಿ ಮಾಲಕ ಶರತ್ ಮಡಿವಾಳರ ಮೇಲೆ

ಶರತ್ ಮಡಿವಾಳ ಕೊಲೆ ಪ್ರಕರಣ ► ಮತ್ತಿಬ್ಬರು ಆರೋಪಿಗಳ ಬಂಧನ Read More »

ಕರಾವಳಿ
Scroll to Top