ಖಾಸಗಿ SSLC ಪರೀಕ್ಷಾರ್ಥಿಗಳಿಗೆ ಆನ್‌ಲೈನ್ ನೋಂದಣಿ ಕಿರಿಕಿರಿ- ಸಮೀಪದ ಶಾಲೆಗಳಲ್ಲಿ ಪರೀಕ್ಷೆಗಿಲ್ಲ ಅವಕಾಶ!
(ನ್ಯೂಸ್ ಕಡಬ) newskadaba.com, ಅ..24 2026ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಖಾಸಗಿಯಾಗಿ ನೋಂದಾಯಿಸಿಕೊಳ್ಳುವ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಮಂಡಳಿಯ ಹೊಸ ಆನ್‌ಲೈನ್ ವ್ಯವಸ್ಥೆಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸಂಕೀರ್ಣವಾದ ಆನ್‌ಲೈನ್ ಪ್ರಕ್ರಿಯೆ, ಶುಲ್ಕ ಪಾವತಿಸಿದ ನಂತರವೇ ನೋಂದಣಿ ಶಾಲೆಯ ಹೆಸರು ತಿಳಿಯುವುದು ಮತ್ತು ಅದು ಬಹಳ ದೂರದಲ್ಲಿರುವುದು ವಿದ್ಯಾರ್ಥಿಗಳಿಗೆ ದೊಡ್ಡ ತಲೆನೋವಾಗಿದೆ. ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದರೂ, ಮೂಲ ಪ್ರತಿಗಳನ್ನು ಖುದ್ದಾಗಿ ಶಾಲೆಗೆ ಹೋಗಿ ಸಲ್ಲಿಸಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳ ಸಮಯ ಮತ್ತು ಹಣವನ್ನು ವ್ಯರ್ಥ ಮಾಡುತ್ತಿದೆ. 2026ರ […]

