newskadaba

250 ನಿವೇಶನ ರಹಿತ ಬಡಕುಟುಂಬಗಳಿಗೆ ಶೀಘ್ರವೇ ಮನೆ ನಿರ್ಮಾಣ- ಅಶೋಕ್ ರೈ

(ನ್ಯೂಸ್ ಕಡಬ) newskadaba.com ಜೂ. 20. ಚುನಾವಣೆಗೂ ಮೊದಲೇ ತನ್ನ ರೈ ಎಸ್ಟೇಟ್ ಆ್ಯಂಡ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಮೂಲಕ ನಿವೇಶನಕ್ಕೆ ನೋಂದಣಿ ಮಾಡಿಸಿಕೊಂಡ 250 ಮಂದಿ ನಿವೇಶನ ರಹಿತ ಬಡಕುಟುಂಬಗಳಿಗೆ ನಿವೇಶನದ ಜೊತೆಗೆ ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ. ವಿಟ್ಲ ಮುಡ್ನೂರು ಗ್ರಾಮದ ಕಟ್ಟತ್ತಿಲದಲ್ಲಿ ಮನೆ ನಿರ್ಮಾಣವಾಗಲಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಈಗಾಗಲೇ ಮನೆ ನಿರ್ಮಾಣಕ್ಕೆ ಜಾಗ ಖರೀದಿ ಮಾಡಿದ್ದು, ಆ ಜಾಗದಲ್ಲೇ ಮನೆ ನಿರ್ಮಾಣ […]

250 ನಿವೇಶನ ರಹಿತ ಬಡಕುಟುಂಬಗಳಿಗೆ ಶೀಘ್ರವೇ ಮನೆ ನಿರ್ಮಾಣ- ಅಶೋಕ್ ರೈ Read More »

ಕರಾವಳಿ

ಪ್ರಚೋದನಾಕಾರಿ ಪೋಸ್ಟ್- ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು

(ನ್ಯೂಸ್ ಕಡಬ) newskadaba.com ಜೂ. 20. ವಾಟ್ಸಪ್‌ನಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಸಾರ್ವಜನಿಕ ಶಾಂತಿ ಭಂಗ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದ ಆರೋಪಿಗೆ ಜಿಲ್ಲಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಕಾಸರಗೋಡು ನಿವಾಸಿ ಸತ್ಯನಾರಾಯಣ ಎಂಬವರ ವಿರುದ್ಧ ಪುತ್ತೂರು ನಗರ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದರು.   ಆರೋಪಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಪ್ರಚೋದನಾಕಾರಿ ಪೋಸ್ಟ್- ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು Read More »

ಕರಾವಳಿ

ರಾಹುಲ್ ಗಾಂಧಿ ಹುಟ್ಟುಹಬ್ಬ – ತನ್ನ ಕಣ್ಣುಗಳನ್ನೇ ಗಿಫ್ಟ್ ಮಾಡಿದ ಡಿಕೆಶಿ..!

(ನ್ಯೂಸ್ ಕಡಬ) newskadaba.com ಜೂ. 20. ಗುರುವಾರದಂದು ಕಾಂಗ್ರೆಸ್ ಯುವ ನಾಯಕ, ಲೋಕಸಭಾ ವಿರೋಧ ಪಕ್ಷದ ನಾಯಕರ ರಾಹುಲ್ ಗಾಂಧಿಯವರು ತನ್ನ 54ನೇ ಹುಟ್ಟುಹವನ್ನು ಆಚರಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಜನ್ಮದಿನ ಹಿನ್ನೆಲೆ ರಾಜ್ಯ ಯುವ ಕಾಂಗ್ರೆಸ್ ವತಿಯಿಂದ ಕೆಪಿಸಿಸಿ ಕಚೇರಿಯಲ್ಲಿ ನೇತ್ರದಾನ ಶಿಬಿರ ನಡೆಸಲಾಯಿತು.   ಈ ಪ್ರಯುಕ್ತ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮ್ಮ ಕಣ್ಣುಗಳನ್ನು ಗಿಫ್ಟ್ ನೀಡಿದ್ದಾರೆ. ಈ ಶಿಬಿರದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನೇತ್ರದಾನ ಪತ್ರಕ್ಕೆ

ರಾಹುಲ್ ಗಾಂಧಿ ಹುಟ್ಟುಹಬ್ಬ – ತನ್ನ ಕಣ್ಣುಗಳನ್ನೇ ಗಿಫ್ಟ್ ಮಾಡಿದ ಡಿಕೆಶಿ..! Read More »

ಕರ್ನಾಟಕ

ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ 7 ಪಿಎಸ್ಐ, 31 ಹೆಚ್.ಸಿ, 78 ಪಿಸಿಗಳ ಸಹಿತ ಜಿಲ್ಲೆಯ 116 ಸಿಬ್ಬಂದಿಗಳ ವರ್ಗಾವಣೆ

(ನ್ಯೂಸ್ ಕಡಬ) newskadaba.com ಜೂ. 20. ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಗುರಿಯನ್ನು ಹೊಂದಿರುವ ಮಹತ್ವದ ಆಡಳಿತಾತ್ಮಕ ಸುಧಾರಣೆಯಲ್ಲಿ ಮಂಗಳೂರು ನಗರ ಕಮಿಷನರೇಟ್ ಮತ್ತು ಪುತ್ತೂರು ನಗರ, ಪುತ್ತೂರು ಗ್ರಾಮಾಂತರ, ಕಡಬ, ವಿಟ್ಲ, ಬೆಳ್ಳಾರೆ ಹಾಗೂ ಸುಬ್ರಹ್ಮಣ್ಯ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿನ 7 ಮಂದಿ ಎ.ಎಸ್.ಐ, 31 ಮಂದಿ ಹೆಡ್‌ಕಾನ್‌ಸ್ಟೇಬಲ್ ಮತ್ತು 78 ಮಂದಿ ಕಾನ್‌ಸ್ಟೇಬಲ್‌ಗಳನ್ನು ವರ್ಗಾವಣೆಗೊಳಿಸಿ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್

ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ 7 ಪಿಎಸ್ಐ, 31 ಹೆಚ್.ಸಿ, 78 ಪಿಸಿಗಳ ಸಹಿತ ಜಿಲ್ಲೆಯ 116 ಸಿಬ್ಬಂದಿಗಳ ವರ್ಗಾವಣೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ನಾಲ್ಕು ಕಾಲೇಜುಗಳ ಅಭಿವೃದ್ಧಿಗೆ ಶಾಸಕ ಅಶೋಕ್ ರೈ ಮನವಿ

(ನ್ಯೂಸ್ ಕಡಬ) newskadaba.com ಜೂ. 20. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಲ್ಕು ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅಭಿವೃದ್ದಿಗೆ ಅನುದಾನ ನೀಡುವಂತೆ ಶಾಸಕ ಅಶೋಕ್ ರೈ ಅವರು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಅವರಿಗೆ ಗುರುವಾರದಂದು ಮನವಿ ಸಲ್ಲಿಸಿದ್ದಾರೆ. ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಅವರು, ಪುತ್ತೂರಿನ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ 4 ಕೋಟಿ, ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ 2 ಕೋಟಿ, ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ

ನಾಲ್ಕು ಕಾಲೇಜುಗಳ ಅಭಿವೃದ್ಧಿಗೆ ಶಾಸಕ ಅಶೋಕ್ ರೈ ಮನವಿ Read More »

ಕರ್ನಾಟಕ

ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿ ಯಾವುದೇ ದೋಷಗಳಿರಲಿಲ್ಲ ಸಿಇಒ ಕ್ಯಾಂಪ್ ಬೆಲ್ ವಿಲ್ಸನ್

(ನ್ಯೂಸ್ ಕಡಬ) newskadaba.com ಜೂ. 20. ಗುಜರಾತಿನ ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ಏರ್‌ಇಂಡಿಯಾ ವಿಮಾನದಲ್ಲಿ ಯಾವುದೇ ದೋಷಗಳಿರಲಿಲ್ಲ, ವಿಮಾನದಲ್ಲಿ ನಿಯಮಿತ ತಪಾಸಣೆಗಳನ್ನು ಮಾಡಲಾಗುತ್ತಿತ್ತು ಎಂದು ಏರ್‌ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್‌ ವಿಲ್ಸನ್‌ ಹೇಳಿದ್ದಾರೆ. ಈ ಕುರಿತು ಕೇಂದ್ರ ವಾಯುಯಾನ ಸಚಿವಾಲಯ ನಿರ್ಧಾರ ಮಾಡಲಿದೆ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.   ದುರಂತಕ್ಕೀಡಾದ ಏರ್ ಇಂಡಿಯಾದ ಕೊನೆಯ ತಪಾಸಣೆ 2023 ರ ಜೂನ್‌ನಲ್ಲಿ ನಡೆದಿತ್ತು. ಮುಂದಿನ ತಪಾಸಣೆ ಡಿಸೆಂಬರ್‌ ತಿಂಗಳಿನಲ್ಲಿ ಆಗಬೇಕಿತ್ತು. ಬಲಭಾಗದ ಎಂಜಿನ್‌ನ ದುರಸ್ತಿ ಕಾರ್ಯ ಮಾರ್ಚ್‌ನಲ್ಲಿ ನಡೆಸಲಾಗಿತ್ತು.

ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿ ಯಾವುದೇ ದೋಷಗಳಿರಲಿಲ್ಲ ಸಿಇಒ ಕ್ಯಾಂಪ್ ಬೆಲ್ ವಿಲ್ಸನ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬಮೂಲ್ ಅಧ್ಯಕ್ಷರಾಗಿ ಡಿಕೆ ಸುರೇಶ್ ಅವಿರೋಧ ಆಯ್ಕೆ

(ನ್ಯೂಸ್ ಕಡಬ) newskadaba.com ಜೂ. 20. ಸಹಕಾರ ಹಾಲು ಒಕ್ಕೂಟ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸಂಘದ ಅಧ್ಯಕ್ಷರಾಗಿ ಡಿ.ಕೆ.ಸುರೇಶ್‌ ರವರುಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಡಿ.ಕೆ.ಸುರೇಶ್‌ ಅವರು ಬೆಂಗಳೂರು ಡೈರಿ ಸರ್ಕಲ್‌ ಕಚೇರಿಯಲ್ಲಿ ಬಮೂಲ್‌ ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಈ ಸ್ಥಾನಕ್ಕೆ ಯಾರೂ ಉಮೇದುವಾರಿಕೆ ಸಲ್ಲಿಕೆ ಇಲ್ಲದ ಕಾರಣ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಬಮೂಲ್ ಅಧ್ಯಕ್ಷರಾಗಿ ಡಿಕೆ ಸುರೇಶ್ ಅವಿರೋಧ ಆಯ್ಕೆ Read More »

ಕರ್ನಾಟಕ

ಮರದ ಕೊಂಬೆ ಬಿದ್ದು ಯುವಕ ಮೃತ್ಯು- ಕಣ್ಣುಗಳನ್ನು ದಾನ ಮಾಡಿದ ಕುಟುಂಬ

(ನ್ಯೂಸ್ ಕಡಬ) newskadaba.com ಜೂ. 20. ಮರದ ಕೊಂಬೆ ಬಿದ್ದ ಪರಿಣಾಮ ಪ್ರಜ್ಞೆ ಕಳೆದುಕೊಂಡು ಕೋಮಾಸ್ಥಿತಿಯಲ್ಲಿದ್ದ ಯುವಕ ಅಕ್ಷಯ್‌ ಮೃತಪಟ್ಟಿದ್ದು, ಈ ಬೆನ್ನಲ್ಲೇ ಆತನ ಕುಟುಂಬಸ್ಥರು ಕಣ್ಣು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ಜೂನ್‌ 15 ರಂದು ಬೆಂಗಳೂರಿನ ಬನಶಂಕರಿ ಬಳಿ ಅಕ್ಷಯ್ ಬೈಕ್‌ನಲ್ಲಿ ತೆರಳುತ್ತಿದ್ದಾಗ ಆತನ ತಲೆಯ ಮೇಲೆ ಮರದ ಕೊಂಬೆ ಬಿದ್ದು ಗಂಭೀರ ಗಾಯಗೊಂಡಿದ್ದರು. ತಲೆಗೆ ತೀವ್ರತರದ ಪೆಟ್ಟು ಬಿದ್ದಿದ್ದರಿಂದ ಆತನ ಬ್ರೈನ್‌ ಡೆಡ್‌ ಆಗಿದೆ ಎಂದು ವೈದ್ಯರು ಘೋಷಣೆ ಮಾಡಿದ್ದು, ಆದರೆ

ಮರದ ಕೊಂಬೆ ಬಿದ್ದು ಯುವಕ ಮೃತ್ಯು- ಕಣ್ಣುಗಳನ್ನು ದಾನ ಮಾಡಿದ ಕುಟುಂಬ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮೂಡಬಿದಿರೆಯ ಡಾ. ತಾರಿಕಾ ಎಸ್. ಬಂಗೇರ ಅವರಿಗೆ ಪಿಹೆಚ್ ಡಿ ಪದವಿ

(ನ್ಯೂಸ್ ಕಡಬ) newskadaba.com ಜೂ. 20. ಮೂಡಬಿದಿರೆಯ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಡಾ. ತಾರಿಕಾ ಎಸ್. ಬಂಗೇರ ಅವರ “ಕಂಪಾರೇಟಿವ್ ಫಾರ್ಮಾಸ್ಸಿಟಿಕೋ ಅನಾಲಿಟಿಕಲ್ ಮತ್ತು ಟೊಕ್ಸಿಕೊಲಾಜಿ ಕಲ್ ಸ್ಟಡೀ ಆಫ್ ರಜತ ಚಂದ್ರೋದಯ ಮತ್ತು ರಜತ ಸಿಂಧೂರ ವಿದ್ ಇಮ್ಯೂನೋಮೊಡ್ಯು ಲೇಟರೀ ಇಪೊಕ್ಟ್” ಅನ್ನುವ ಸಂಶೋಧನಾ ಪ್ರಬಂಧಕ್ಕೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯ ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ. ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರೊಫೆಸರ್ ಡಾ. ಬಿ

ಮೂಡಬಿದಿರೆಯ ಡಾ. ತಾರಿಕಾ ಎಸ್. ಬಂಗೇರ ಅವರಿಗೆ ಪಿಹೆಚ್ ಡಿ ಪದವಿ Read More »

ಕರಾವಳಿ

ಮಂಗಳೂರು ವಿವಿ: ಪಿ.ಹೆಚ್.ಡಿ. ಪ್ರವೇಶಾತಿ

(ನ್ಯೂಸ್ ಕಡಬ) newsksdaba.com ಜೂ. 19. ಮಂಗಳೂರು ವಿಶ್ವವಿದ್ಯಾನಿಲಯದ ವಿವಿಧ ಸ್ನಾತಕೋತ್ತರ ವಿಭಾಗಗಳು, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು  ಹಾಗೂ ಮಾನ್ಯತೆ ಪಡೆದ ಸಂಶೋಧನಾ ಕೇಂದ್ರಗಳಲ್ಲಿ ಪಿ.ಹೆಚ್.ಡಿ ಕಾರ್ಯಕ್ರಮಕ್ಕೆ ಲಭ್ಯವಿರುವ ಖಾಲಿ ಸೀಟುಗಳಿಗೆ ನೋಂದಾಯಿಸಲು ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ  ದ್ವಿಪ್ರತಿಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ.   ನಿಗದಿತ ಅರ್ಜಿ ನಮೂನೆಯನ್ನು ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ ಅಥವಾ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜಿನ ಸಂಬಂಧಪಟ್ಟ ವಿಭಾಗಗಳಿಂದ ರೂ. 1,500ನ್ನು  (ಎಸ್‍ಸಿ/ಎಸ್‍ಟಿ ಅಭ್ಯರ್ಥಿಗಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಲ್ಲಿ ರೂ.750) ಚಲನ್/ ರಾಷ್ಟ್ರೀಕೃತ

ಮಂಗಳೂರು ವಿವಿ: ಪಿ.ಹೆಚ್.ಡಿ. ಪ್ರವೇಶಾತಿ Read More »

ಕರ್ನಾಟಕ
Scroll to Top