newskadaba

ತೊಕ್ಕೊಟ್ಟು ಅಂಗಡಿ ಮಾಲಿಕನ ಮೇಲೆ ತಲವಾರಿನಿಂದ ಹಲ್ಲೆ

(ನ್ಯೂಸ್ ಕಡಬ) newskadaba.com.ಮಂಗಳೂರು,ಜೂ.19:ಮಾಂಸದ ಅಂಗಡಿಯ ಮಾಲಿಕನೋರ್ವನನ್ನು ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟುವಿನಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ. ಮಾಂಸದ ಅಂಗಡಿ ಮಾಲಿಕ ಹಳೆಕೋಟೆ ನಿವಾಸಿಯಾಗಿರುವ ನಝೀರ್(47) ತೊಕ್ಕೊಟ್ಟು ಒಳಪೇಟೆಯತ್ತ ಬೀಡಾ ತಿನ್ನಲು ಬಂದಾಗ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ತಲವಾರಿನಿಂದ ನಝೀರ್ ಮೇಲೆ ಗಂಭೀರ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ನಝೀರ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ತೊಕ್ಕೊಟ್ಟು ಅಂಗಡಿ ಮಾಲಿಕನ ಮೇಲೆ ತಲವಾರಿನಿಂದ ಹಲ್ಲೆ Read More »

ಕರಾವಳಿ

ಮಾನಸಿಕ-ದೈಹಿಕವಾಗಿ ಹಿಂಸೆ ➤ ಕಾನ್ ಸ್ಟೇಬಲ್ ವಿರುದ್ಧ ಪತ್ನಿ ದೂರು

(ನ್ಯೂಸ್ ಕಡಬ) newskadaba.com ಪುತ್ತೂರು ,ಜೂ.18:  ತನಗೆ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿರುವುದಾಗಿ ಆರೋಪಿಸಿ, ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ಪತ್ನಿ ನೀಡಿದ ದೂರಿನಂತೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   ಇನ್ನು, 5 ತಿಂಗಳ ಹಿಂದೆಯಷ್ಟೆ ಸಬ್ ರಿ ಜಿಸ್ಟ್ರಾರ್ ಕಚೇರಿಯಲ್ಲಿ ಇವರಿಬ್ಬರ ವಿವಾಹ ನೋಂದಣಿ ನಡೆದಿತ್ತು. ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ಶಾಂತಕುಮಾರ್ ಅವರ ಪತ್ನಿ ಅಶ್ವಿನಿ ಶಾರದಾ (27) ಅವರು, ದೈಹಿಕ ಮತ್ತು ಮಾನಸಿಕ ಹಿಂಸೆಗೊಳಗಾಗಿರುವುದಾಗಿ

ಮಾನಸಿಕ-ದೈಹಿಕವಾಗಿ ಹಿಂಸೆ ➤ ಕಾನ್ ಸ್ಟೇಬಲ್ ವಿರುದ್ಧ ಪತ್ನಿ ದೂರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದ ತರಕಾರಿ ಟೆಂಪೋ ➤ ಸ್ಥಳದಲ್ಲೇ ಇಬ್ಬರ ದುರ್ಮರಣ..!!

(ನ್ಯೂಸ್ ಕಡಬ) newskadaba.com ಉಡುಪಿ, ಜೂ.18., ಕುಂದಾಪುರದಿಂದ ಉಡುಪಿಗೆ ತರಕಾರಿ ಹೊತ್ತು ತರುತ್ತಿದ್ದ ಟೆಂಪೋವೊಂದು ಚಾಲಕನ ನಿಯಂತ್ರಣ ತಪ್ಪಿ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿಯ 66 ರ ಅಂಬಾಗಿಲು ಬಳಿ ಗುರುವಾರ ನಡೆದಿದೆ. ಅಪಘಾತದ ರಭಸಕ್ಕೆ ಚಾಲಕ ಮತ್ತು ಸಹಪ್ರಯಾಣಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉದ್ಯಾವರದಲ್ಲಿ ತರಕಾರಿ ವ್ಯಾಪಾರವನ್ನು ಮಾಡುತ್ತಿದ್ದ ದಿನೇಶ್ (35) ಮತ್ತು ಮಂಜು (30) ಮೃತಪಟ್ಟ ದುರ್ಧೈವಿಗಳು. ಕುಂದಾಪುರದಿಂದ ಉದ್ಯಾವರಕ್ಕೆ ಟೆಂಪೋ ಟ್ರಾಕ್ಸ್ ನಲ್ಲಿ ತರಕಾರಿ ಸಾಗಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ

ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದ ತರಕಾರಿ ಟೆಂಪೋ ➤ ಸ್ಥಳದಲ್ಲೇ ಇಬ್ಬರ ದುರ್ಮರಣ..!! Read More »

ಕರಾವಳಿ

ಪರೀಕ್ಷೆ ಭರದಲ್ಲಿ ಸಾಮಾಜಿಕ ಅಂತರಕ್ಕೆ ಡೋಂಟ್ ಕ್ಯಾರ್

(ನ್ಯೂಸ್ ಕಡಬ) newskadaba.com ಮಂಗಳೂರು,ಜೂ.18:ಮಂಗಳೂರಿನಲ್ಲಿ ಪಿಯುಸಿ ಪರೀಕ್ಷೆ ಭರದಲ್ಲಿ ಸಾಮಾಜಿಕ ಅಂತರಕ್ಕೆ , ಕೇರಳ ಗಡಿ ಭಾಗ ತಲಪಾಡಿಯಲ್ಲಿ ವಿದ್ಯಾರ್ಥಿಗಳು ಡೋಂಟ್ ಕ್ಯಾರ್ ಎಂದಿದ್ದಾರೆ. ಕೇರಳ ಗಡಿ ಭಾಗ ತಲಪಾಡಿಯಲ್ಲಿ ನೂರಾರು ವಿದ್ಯಾರ್ಥಿಗಳು ,ಮಂಗಳೂರಿಗೆ ಪರೀಕ್ಷೆ ಬರೆಯಲು ಆಗಮಿಸಿದ್ದು  ವಿದ್ಯಾರ್ಥಿಗಳು ಸಾಮಾಜಿಕ ಅಂತರವನ್ನ ಮರೆತು ಗುಂಪುಗೂಡಿದ್ದರು. ತಲಪಾಡಿ ಮರಿಯಾಶ್ರಮ ಸಂಸ್ಥೆ ಬಳಿ ವಿದ್ಯಾರ್ಥಿಗಳಿಗೆ.  ಆಯಾ ಶಿಕ್ಷಣ ಸಂಸ್ಥೆಗಳಿಗೆ ತಲುಪಿಸಲು ಸರ್ಕಾರಿ ಬಸ್  ವ್ಯವಸ್ಥೆ ಮಾಡಲಾಗಿತ್ತು.    

ಪರೀಕ್ಷೆ ಭರದಲ್ಲಿ ಸಾಮಾಜಿಕ ಅಂತರಕ್ಕೆ ಡೋಂಟ್ ಕ್ಯಾರ್ Read More »

ಕರಾವಳಿ, ಕರ್ನಾಟಕ

ಕೊರೋನಾ ಜತೆ ಡೆಂಗ್ಯೂ ಹಾವಳಿ ➤ ಉಪ್ಪಿನಂಗಡಿ, ಪುತ್ತೂರು ವ್ಯಾಪ್ತಿಯಲ್ಲಿ ಹೆಚ್ಚಿದ ಆತಂಕ

(ನ್ಯೂಸ್ ಕಡಬ) newskadaba.com ಪುತ್ತೂರು,ಜೂ.18:  ಕೊರೋನಾ ಸೋಂಕು ಈಗಾಗಲೇ, ಕರಾವಳಿಯ ಜರನ ನಿದ್ದೆಗೆಡಿಸಿದೆ. ಇದರ ಜೊತೆಗೆ ಕರಾಔಳಿಯಲ್ಲಿ ಡೆಂಗ್ಯೂ ಹಾವಳಿ ಹೆಚ್ಚಾಗುತ್ತಿದೆ. ಪುತ್ತೂರು ತಾಲೂಕಿನಲ್ಲಿ ಡೆಂಗ್ಯೂ ಜ್ವರ ಬಾಧಿತರ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿದ್ದು, ಜನತೆ ಆತಂಕಗೊಂಡಿದ್ದಾರೆ. ಗ್ರಾ. ಪಂ, ಸದಸ್ಯರೋರ್ವರ ಸಹಿತ ಶಂಕಿತ ಡೆಂಗ್ಯೂ ಬಾಧಿತರು  143 ಆಸ್ಪತ್ರೆಗಳಲ್ಲಿ ಒಳರೋಗಿಗಳಾಗಿ ದಾಖಲಾಗಿದ್ದಾರೆ.   ಡೆಂಗ್ಯೂ ಜ್ವರ ಕೊರೋನಾದಿಂದಲೂ ಅಪಾಯಕಾರಿಯಾಗಿದ್ದು, ತಾಲೂಕಿನಲ್ಲಿ ಇಲಾಖೆ ವರದಿಯ ಪ್ರಕಾರ ಮೂರು ಕೇಸ್ ಮಾತ್ರ ಡೆಂಗ್ಯೂ ಆ ಗಿದ್ದು. ಉಳಿದಂತೆ ಎಲ್ಲವೂ

ಕೊರೋನಾ ಜತೆ ಡೆಂಗ್ಯೂ ಹಾವಳಿ ➤ ಉಪ್ಪಿನಂಗಡಿ, ಪುತ್ತೂರು ವ್ಯಾಪ್ತಿಯಲ್ಲಿ ಹೆಚ್ಚಿದ ಆತಂಕ Read More »

ಕರಾವಳಿ, ಕರ್ನಾಟಕ

ಕುವೈತ್‌ನಿಂದ ಮಂಗಳೂರಿಗೆ ಮೊಟ್ಟಮೊದಲ ಚಾರ್ಟರ್ಡ್ ವಿಮಾನ ಆಗಮನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್ 18: ಬುಧವಾರ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಅಕ್ಬರ್ ಟ್ರಾವೆಲ್ಸ್ ಕುವೈತ್ ಸಹಯೋಗದೊಂದಿಗೆ ಕುವೈತ್‌ನ ಕರ್ನಾಟಕ ಸಂಘಗಳು ಒಂದುಗೂಡಿ , ಕೋವಿಡ್-19 ಮಹಾಮಾರಿಗೆ ಸಿಲುಕಿ ಸಂಕಷ್ಟಕ್ಕೆ ಒಳಗೊಂಡ ಕುವೈಟ್ ಕನ್ನಡಿಗರನ್ನು ತಮ್ಮೂರಿಗೆ ತಲುಪಿಸುವಲ್ಲಿ ಯಶಸ್ವಿಯಾಯಿತು. ಹಿರಿಯ ನಾಗರಿಕರು ,ಗರ್ಭಿಣಿ ಸ್ತ್ರೀಯರು , ಅವಧಿ ಮುಗಿದ ಭೇಟಿ ವೀಸಾ ಹೊಂದಿದವರು, ಕೆಲಸ ಕಳೆದುಕೊಂಡವರು ಹೀಗೆ ತಾಯಿ ನಾಡಿಗೆ ಬರಲಾಗದೆ ಕೋವಿಡ್ 19 ನಿಂದ ಸಮಸ್ಯೆ ಅನುಭವಿಸುತ್ತಿದ್ದ ಒಟ್ಟಾರೆ 165 ಪ್ರಯಾಣಿಕರನ್ನು

ಕುವೈತ್‌ನಿಂದ ಮಂಗಳೂರಿಗೆ ಮೊಟ್ಟಮೊದಲ ಚಾರ್ಟರ್ಡ್ ವಿಮಾನ ಆಗಮನ Read More »

ಕರಾವಳಿ, ಕರ್ನಾಟಕ

ಉಡುಪಿ: ಕೊರೊನಾ ಸೋಂಕಿತೆಗೆ ಸಿಜೇರಿಯನ್ ಮೂಲಕ ಹೆರಿಗೆ

(ನ್ಯೂಸ್ ಕಡಬ) newskadaba.com ಉಡುಪಿ, ಜೂ.18,. ಕೊರೊನಾ ಸೋಂಕಿತೆಗೆ ಸಿಜೇರಿಯನ್ ಮೂಲಕ ಯಶಸ್ವಿ ಹೆರಿಗೆಯಾದ ಘಟನೆ ಉಡುಪಿಯಲ್ಲಿ ನಡೆದಿದೆ. ಕಾರ್ಕಳ ಮೂಲದ ಈ ಮಹಿಳೆಯನ್ನು ಜೂನ್ 16 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಹಾರಾಷ್ಟ್ರದಿಂದ ಬಂದವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 22 ವರ್ಷದ ಗರ್ಭಿಣಿಗೆ ಉಡುಪಿಯ ಟಿಎಂಎಪೈ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ  ಯಶಸ್ವಿ ಹೆರಿಗೆ ಮಾಡಿಸಿದ್ದಾರೆ. ಇದು ರಾಜ್ಯದ ಇತಿಹಾಸದಲ್ಲಿ ಪ್ರಥಮ ಸಿಜೇರಿಯನ್ ಹೆರಿಗೆಯಾಗಿದ್ದು, ಬಾಣಂತಿ ಹಾಗೂ ಮಗು ಆರೋಗ್ಯವಾಗಿದ್ದಾರೆ. ಇದೀಗ ಬಾಣಂತಿ ಕೊರೋನಾದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕೋವಿಡ್

ಉಡುಪಿ: ಕೊರೊನಾ ಸೋಂಕಿತೆಗೆ ಸಿಜೇರಿಯನ್ ಮೂಲಕ ಹೆರಿಗೆ Read More »

ಕರಾವಳಿ

ಕೊರೊನಾ ಗೆಲ್ಲಲು ಮಾಸ್ಕ್ ಕಡ್ಡಾಯ➤ ಮಾಸ್ಕ್ ಡೇ ಗೆ ಬಿಎಸ್‍ವೈ ಚಾಲನೆ

(ನ್ಯೂಸ್ ಕಡಬ) newskadaba.com.ಬೆಂಗಳೂರು,ಜೂ.18: ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್ ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದು ಜಾಗೃತಿ ಮೂಡಿಸುವ ಸಲುವಾಗಿ ಗುರುವಾರ ರಾಜ್ಯಾದ್ಯಂತ ಮಾಸ್ಕ್ ಡೇ ಗೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದರು. ಮಾಸ್ಕ್ ಧರಿಸುವುದರಿಂದ ಕೊರೊನಾ ಗೆಲ್ಲಬಹುದು ಹಾಗಾಗಿ ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು ಎಂಬ ಉದ್ದೇಶದಿಂದ ಇಂದು ಬೆಳಗ್ಗೆ ಬೆಂಗಳೂರಿನ ಕಬ್ಬನ್ ಪಾರ್ಕ್‍ನಲ್ಲಿ ಸಿಎಂ ಯೆಡಿಯೂರಪ್ಪ ಸಹಿತ ಸಾರ್ವಜನಿಕರು ಪಾದಯಾತ್ರೆ ಮಾಡಿದರು. ಕಾರ್ಯಕ್ರಮದಲ್ಲಿ ಪ್ಲೆಕಾರ್ಡ್ ಹಿಡಿದು ಸಚಿವರು, ಆರೋಗ್ಯ ಅಧಿಕಾರಿಗಳು ಭಾಗಿಯಾದರು ಕೊರೊನಾ ಸೋಂಕು ನಿಯಂತ್ರಣ

ಕೊರೊನಾ ಗೆಲ್ಲಲು ಮಾಸ್ಕ್ ಕಡ್ಡಾಯ➤ ಮಾಸ್ಕ್ ಡೇ ಗೆ ಬಿಎಸ್‍ವೈ ಚಾಲನೆ Read More »

ಕರ್ನಾಟಕ

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ➤ ಚಾಲಕ ಗಂಭೀರ…!

(ನ್ಯೂಸ್ ಕಡಬ) newskadaba.com ಭಟ್ಕಳ, ಜೂ.18., ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಪಲ್ಟಿಯಾಗಿ 6 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೈಲೂರ ಪಂಚಾಯತ್ ವ್ಯಾಪ್ತಿಯ ಗುಡಿಗದ್ದೆ ಕ್ರಾಸ್ ನಲ್ಲಿ ಜರುಗಿದೆ. ಹೊನ್ನಾವರ ತಾಲೂಕಿನ ಮಂಕಿ ನವಾಯತ್ ಕಾಲನಿಯಿಂದ ಮುರ್ಡೇಶ್ವರಕ್ಕೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ವಾಹನ ಗುಡಿಗದ್ದೆ ಕ್ರಾಸ್ ಸಮೀಪದ ಕಿರುಬಚ್ಚಲು ಸೇತುವೆ ಸಮೀಪ ತಿರುವಿನಲ್ಲಿ ಪಲ್ಟಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನುಜ್ಜುಗೊಂಡಿದೆ. ಅಪಘಾತದಲ್ಲಿ ಕಾರು ಚಾಲಕ ಗಂಭೀರ

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ➤ ಚಾಲಕ ಗಂಭೀರ…! Read More »

ಕರಾವಳಿ

ಉಡುಪಿಯಲ್ಲಿ ಕೆಂಗೇರಿ ನಿವಾಸಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಉಡುಪಿ, ಜೂನ್ .17: ಉಡುಪಿಯ ಲಾಡ್ಜ್ ಒಂದರಲ್ಲಿ ಇಂದು ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಯುವಕನನ್ನು ಬೆಂಗಳೂರು ಕೆಂಗೇರಿ ನಿವಾಸಿ ವೀರಭದ್ರ(22) ಎಂದು ಗುರುತಿಸಲಾಗಿದೆ. ಈತ ಉಡುಪಿ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಸಮೀಪದ ಲಾಡ್ಜ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಮುನ್ನ ನನ್ನವರು ಯಾರೂ ಇಲ್ಲ ಎಂದು ಡೆತ್ ನೋಟ್ ಬರೆದಿಟ್ಟಿರುವ ಯುವಕ ತನ್ನ ಮೊಬೈಲ್,ದಾಖಲೆಗಳ ಸುಟ್ಟು ಹಾಕಿದ್ದಾನೆ. ಸಮಾಜ ಸೇವಕ ನಿತ್ಯಾನಂದ ವಳಕಾಡು ಶವವನ್ನು

ಉಡುಪಿಯಲ್ಲಿ ಕೆಂಗೇರಿ ನಿವಾಸಿ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top