newskadaba

ಇಂದಿನಿಂದ ನೆಲಮಂಗಲ- ಹಾಸನ ರಾಷ್ಟ್ರೀಯ ಹೆದ್ದಾರಿ ಟೋಲ್ ದರ ಏರಿಕೆ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 01. ವಾಹನ ಸವಾರರಿಗೆ ಬಿಗ್ ಶಾಕ್ ಎನ್ನುವಂತೆ ನಿನ್ನೆ ಮಧ್ಯರಾತ್ರಿಯಿಂದ ನೆಲಮಂಗಲ- ಹಾಸನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಟೋಲ್ ದರ ಏರಿಕೆಯಾಗಿದೆ. ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಈ ಮಾಹಿತಿ ನೀಡಲಾಗಿದ್ದು, ಸೆಪ್ಟೆಂಬರ್ 1ರಿಂದ ಜಾರಿಗೆ ಬರುವಂತೆ ಟೋಲ್ ದರವನ್ನು ಏರಿಕೆ ಮಾಡಲಾಗುತ್ತಿದೆ ಎಂಬುದಾಗಿ ತಿಳಿಸಿತ್ತು. ಅದರಂತೆ ಇಂದು ಮಧ್ಯರಾತ್ರಿಯಂದಲೇ ನೆಲಮಂಗಲ-ಹಾಸನ ರಾಷ್ಟ್ರೀಯ ಹೆದ್ದಾರಿ ಎನ್.ಹೆಚ್-75ರಲ್ಲಿ ಶೇ.3 ರಿಂದ 5ರಷ್ಟು ಟೋಲ್ ದರ ಏರಿಕೆಯಾಗಿದೆ. ಹೀಗಾಗಿ ಲಘು ವಾಹನಗಳಿಗೆ ರೂ.10 […]

ಇಂದಿನಿಂದ ನೆಲಮಂಗಲ- ಹಾಸನ ರಾಷ್ಟ್ರೀಯ ಹೆದ್ದಾರಿ ಟೋಲ್ ದರ ಏರಿಕೆ..! Read More »

ಕರ್ನಾಟಕ

ಈ 8 ಮಾತ್ರೆಗಳನ್ನು ಉಪಯೋಗಿಸದಂತೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಸೂಚನೆ

(ನ್ಯೂಸ್ ಕಡಬ) newskadaba.com ಸೆ. 01. ಉತ್ತಮ ಗುಣಮಟ್ಟವಲ್ಲವೆಂದು 8 ಮಾತ್ರೆಗಳನ್ನು ಉಪಯೋಗಿಸಬಾರದು ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಪ್ರಕಟನೆ ಹೊರಡಿಸಿದೆ. ವರದಿಯ ಪ್ರಕಾರ, ಹೆಲ್ತಿ ಲೈಫ್ ಫಾರ್ಮಾ ಪ್ರೈ. ಲಿಮಿಟೆಡ್‍ ನ ಕ್ಯಾಲ್ಸಿಯಂ ಅಂಡ್ ವಿಟಮಿನ್ ಡಿ3 ಟ್ಯಾಬ್ಲೆಟ್ಸ್ ಐಪಿ, ಭವ್ಯ ಇಂಡಸ್ಟ್ರೀಸ್‍ ನ ಆಕ್ಟಿವ್ ಅಲೂವೆರಾ ಮತ್ತು ನಿಮ್ ಸೋಪ್, ರಾಜ್‍ದೀಪ್ ಫಾರ್ಮಸ್ಯೂಟಿಕಲ್ಸ್‌ ಲೈಫೋಜೆಸಿಕ್, ಮೈಕ್ರೋ ಫಾರ್‌ ಮುಲೇಷನ್ಸ್‌ ನ ಅಮೋಕ್ಸಿಲಿನ್ ಮತ್ತು ಪೋಟ್ಯಾಷಿಯಂ ಕ್ಲಾವುಲನೇಟ್ ಟ್ಯಾಬ್ಲೆಟ್ಸ್ ಐಪಿ, ಫಾರ್ಮಾಕೇರ್‌

ಈ 8 ಮಾತ್ರೆಗಳನ್ನು ಉಪಯೋಗಿಸದಂತೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಸೂಚನೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅಕ್ರಮ ಮದ್ಯ ತಯಾರಿಕಾ ಘಟಕಕ್ಕೆ ಪೊಲೀಸ್ ದಾಳಿ- ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 01. ಅಕ್ರಮ ಮದ್ಯ ತಯಾರಿ ನಡೆಸುತ್ತಿದ್ದ ಮನೆಗೆ ದಾಳಿ ನಡೆಸಿದ ಕೊಣಾಜೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ರವಿವಾರದಂದು ವರದಿಯಾಗಿದೆ. ಬಂಧಿತರನ್ನು ಕಾಸರಗೋಡು ನಿವಾಸಿ ಪ್ರಣವ್ ವಿ ಶೆಣೈ (24) ಮತ್ತು ತಾಳಿಪಡ್ಪು ನಿವಾಸಿ ಅನೂಷ್ ಆರ್ .(24)‌ ಎಂದು ಗುರುತಿಸಲಾಗಿದೆ. ಆರೋಪಿಗಳು ಕೊಣಾಜೆ ಠಾಣಾ ವ್ಯಾಪ್ತಿಯ ಪಜೀರು ಗ್ರಾಮ ದ ಕಂಬಳಪದವು ಶ್ರೀ ದುರ್ಗಾ ಕಾಳಿ ದೇವಸ್ಥಾನದ ರಸ್ತೆಯಲ್ಲಿರುವ ಮನೆಯೊಂದರಲ್ಲಿ ತೋಮಸ್ ಮತ್ತು ಮಣಿಕುಟ್ಟನ್ ಜೊತೆ ಸೇರಿಕೊಂಡು

ಅಕ್ರಮ ಮದ್ಯ ತಯಾರಿಕಾ ಘಟಕಕ್ಕೆ ಪೊಲೀಸ್ ದಾಳಿ- ಇಬ್ಬರ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಕಾರು ಢಿಕ್ಕಿ: ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 01. ಕಾರೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ಸವಾರ ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಗಾಯಗೊಂಡಿರುವ ಘಟನೆ ಮುಕ್ಕ ಜಂಕ್ಷನ್ ನಲ್ಲಿ ನಡೆದಿದೆ. ಮೃತಪಟ್ಟವರನ್ನು ಚೇಳಾಯರು ನಿವಾಸಿ ಕರುಣಾಕರ ಶೆಟ್ಟಿ ಎಂದು ಗುರುತಿಸಲಾಗಿದೆ. ಗಾಯಗೊಂಡ ವಿಶ್ವನಾಥ (16) ಎಂಬವರು ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತ ನಡೆಸಿದ್ದ ಕಾರು ಚಾಲಕ ಹಳೆಯಂಗಡಿ ನಿವಾಸಿ ಮುಹಮ್ಮದ್ ತೌಫೀಕ್ ಎಂಬಾತನನ್ನು ಸಂಚಾರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕಾರು ಢಿಕ್ಕಿ: ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಟ್ರಾಫಿಕ್ ದಂಡದ ಮೊತ್ತದಲ್ಲಿ ಶೇ 50ರಷ್ಟು ರಿಯಾಯಿತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 01. ಕರ್ನಾಟಕ ರಾಜ್ಯಪಾಲರ ಆದೇಶದನ್ವಯ ಸಾರಿಗೆ ಇಲಾಖೆಯಿಂದ ಹೊರಡಿಸಿರುವ ಆದೇಶದಂತೆ ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್‍ನಲ್ಲಿ ದಾಖಲಾದ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡಲಾಗಿದೆ. ಈ ರಿಯಾಯಿತಿಯು ಮುಂಬರುವ ರಾಷ್ಟ್ರೀಯ ಲೋಕ ಅದಾಲತ್ ಸೆಪ್ಟೆಂಬರ್ 13 ರ ಸಂಬಂಧ ಆದೇಶಿಸಲಾಗಿದ್ದು, ಆಗಸ್ಟ್ 23 ರಿಂದ ಸೆಪ್ಟೆಂಬರ್ 12ರ ವರೆಗೆ ಇತ್ಯರ್ಥಗೊಳ್ಳುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗುತ್ತದೆ. ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಶೇ.50 ರಿಯಾಯಿತಿಯಲ್ಲಿ ದಂಡ

ಟ್ರಾಫಿಕ್ ದಂಡದ ಮೊತ್ತದಲ್ಲಿ ಶೇ 50ರಷ್ಟು ರಿಯಾಯಿತಿ Read More »

ಕರ್ನಾಟಕ

ಭಾಗ್ಯಲಕ್ಷ್ಮಿ ಪರಿಪಕ್ವ ಮೊತ್ತ ಪಾವತಿ: ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 01. ಭಾಗ್ಯಲಕ್ಷ್ಮಿ ಯೋಜನೆಯಡಿ ನೋಂದಾಯಿಸಿರುವ 18 ವರ್ಷ ತುಂಬಿದ ಅರ್ಹ ಫಲಾನುಭವಿಗಳ ಪರಿಪಕ್ವ ಮೊತ್ತ  ಪಾವತಿಗೆ ಅರ್ಜಿ ಆಹ್ವಾನಿಸಲಾಗಿದೆ. ಭಾಗ್ಯಲಕ್ಷ್ಮಿ ಯೋಜನೆಯಡಿ ನೊಂದಾಯಿಸಲ್ಪಟ್ಟ 2006-7ನೇ ಸಾಲಿನ 701 ಫಲಾನುಭವಿಗಳಲ್ಲಿ ಅರ್ಹರಾದ (ಮರಣ ಹೊಂದಿದ ಫಲಾನುಭವಿಗಳನ್ನು ಹೊರತುಪಡಿಸಿ) ಫಲಾನುಭವಿಗಳಿಗೆ ಪರಿಪಕ್ವ ಮೊತ್ತ (Maturity Claim Amount) ರೂ. 32,351 ನ್ನು ಎಲ್.ಐ.ಸಿ ಸಂಸ್ಥೆಯಿಂದ ನೇರವಾಗಿ ಫಲಾನುಭವಿಗಳ ಖಾತೆಗೆ ಪಾವತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಇದರಲ್ಲಿ ಕೆಲವು ಫಲಾನುಭವಿಗಳು ವಲಸೆ ಹೋಗಿರುವುದು ಮತ್ತು ದಾಖಲಾತಿಗಳನ್ನು

ಭಾಗ್ಯಲಕ್ಷ್ಮಿ ಪರಿಪಕ್ವ ಮೊತ್ತ ಪಾವತಿ: ಅರ್ಜಿ ಆಹ್ವಾನ Read More »

ಕರಾವಳಿ

ಗುಪ್ತಚರ ಇಲಾಖೆಯಲ್ಲಿ 394 ಹುದ್ದೆ ಡಿಪ್ಲೊಮಾ ಹೊಂದಿದವರು ಅಪ್ಲೈ ಮಾಡಿ

(ನ್ಯೂಸ್ ಕಡಬ) newskadaba.com ಆ. 29. ಭಾರತ ಸರ್ಕಾರದ ಗುಪ್ತಚರ ಇಲಾಖೆ (Intelligence Bureau)ಯಲ್ಲಿ ಖಾಲಿ ಇರುವ 394 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಜೂನಿಯರ್‌ ಇಂಟೆಲಿಜೆನ್ಸ್‌ ಆಫೀಸರ್‌ ಗ್ರೇಡ್‌- II ಟೆಕ್‌ (Junior Intelligence Officer Grade-II (Tech) ಹುದ್ದೆ ಇದಾಗಿದ್ದು, ಪದವಿ, ಡಿಪ್ಲೊಮಾ ಪಡೆದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಬೇಕಿದ್ದು, ಸೆಪ್ಟೆಂಬರ್‌ 14 ಕೊನೆಯ ದಿನವಾಗಿದೆ. ವಿದ್ಯಾರ್ಹತೆ ಎಲೆಕ್ಟ್ರಾನಿಕ್ಸ್‌ ಅಥವಾ ಎಲೆಕ್ಟ್ರಾನಿಕ್ಸ್‌ & ಟೆಲಿಕಮ್ಯುನಿಕೇಷನ್‌ ಅಥವಾ ಎಲೆಕ್ಟ್ರಾನಿಕ್ಸ್‌ & ಕಮ್ಯುನಿಕೇಷನ್‌

ಗುಪ್ತಚರ ಇಲಾಖೆಯಲ್ಲಿ 394 ಹುದ್ದೆ ಡಿಪ್ಲೊಮಾ ಹೊಂದಿದವರು ಅಪ್ಲೈ ಮಾಡಿ Read More »

ಉದ್ಯೋಗ
crime, arrest, suspected

ಲಂಚ ಸ್ವೀಕಾರ ಆರೋಪ- ಓರ್ವ ಅರೆಸ್ಟ್..!

(ನ್ಯೂಸ್ ಕಡಬ) newskadaba.com ಪುತ್ತೂರು, ಆ. 29. ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಲಂಚದ ಹಣದ ಸಮೇತ ಆರೋಪಿಯನ್ನು ಬಂಧಿಸಿದ ಘಟನೆ ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿರುವ ತಹಶೀಲ್ದಾರ್ ಕಚೇರಿಯ ಭೂ ಸುಧಾರಣಾ ಶಾಖೆಯಲ್ಲಿ ಗುರುವಾರ ಸಂಜೆ ನಡೆದಿದೆ.   ಪುತ್ತೂರು ತಾಲೂಕಿನ ಆಡಳಿತ ಸೌಧದಲ್ಲಿರುವ ತಹಶೀಲ್ದಾರ್ ಕಚೇರಿಯ ಭೂ ಸುಧಾರಣಾ ಶಾಖೆಯ ಎಫ್.ಡಿ.ಎ ಸುನೀಲ್ ಎಂಬಾತ ದೂರುದಾರರಿಂದ 12,000 ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಮಂಗಳೂರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಲಂಚ ಸ್ವೀಕಾರ ಆರೋಪ- ಓರ್ವ ಅರೆಸ್ಟ್..! Read More »

ಕರಾವಳಿ, ಕ್ರೈಮ್ ನ್ಯೂಸ್

ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ: ಯಾವುದೇ ಜಾತಿಗಳು ಬಿಟ್ಟು ಹೋಗಿದ್ದರೆ ಮಾಹಿತಿ ನೀಡಲು ಸೆ.1ರ ವರೆಗೆ ಅವಧಿ ವಿಸ್ತರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 29. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಕರ್ನಾಟಕ ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳು, ಇತರೆ ಜಾತಿಗಳು ಅನುಸೂಚಿತ ಜಾತಿ ಮತ್ತು ಪಂಗಡಗಳು ಸೇರಿದಂತೆ ಎಲ್ಲ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸರ್ಕಾರದ ಆದೇಶಾನುಸಾರ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ, ಹಿಂದುಳಿದ ವರ್ಗಗಳು ಮತ್ತು ಇತರೆ ಜಾತಿ/ಉಪಜಾತಿಗಳ ಬಗ್ಗೆ ಸಾರ್ವಜನಿಕರ ಮಾಹಿತಿಗಾಗಿ ಯಾವುದೇ ಜಾತಿ/ಉಪಜಾತಿಗಳು ಬಿಟ್ಟು ಹೋಗಿದ್ದಲ್ಲಿ, ಅಂತಹ ಅಂಶಗಳ ಬಗ್ಗೆ ಸಲಹೆ/ ಸೂಚನೆ, ಮನವಿಗಳನ್ನು ನೀಡಲು ಸೆಪ್ಟೆಂಬರ್ 1ರ ವರೆಗೆ

ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ: ಯಾವುದೇ ಜಾತಿಗಳು ಬಿಟ್ಟು ಹೋಗಿದ್ದರೆ ಮಾಹಿತಿ ನೀಡಲು ಸೆ.1ರ ವರೆಗೆ ಅವಧಿ ವಿಸ್ತರಣೆ Read More »

ಕರಾವಳಿ

“ಸುದ್ದಿ ಮಾಧ್ಯಮದಲ್ಲಿ ಅಂಬೇಡ್ಕರ್ ದೃಷ್ಟಿಕೋನ” ಕುರಿತು ಚಿತ್ರದುರ್ಗದಲ್ಲಿ ವಿಚಾರಸಂಕಿರಣ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 29. ಕರ್ನಾಟಕ ಮಾಧ್ಯಮ ಅಕಾಡೆಮಿಯು ಚಿತ್ರದುರ್ಗ ಪತ್ರಕರ್ತರ ಭವನದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಎಸ್.ಸಿ/ಎಸ್.ಟಿ. ಪತ್ರಿಕಾ ಸಂಪಾದಕರ ಸಂಘ ಹಾಗೂ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಆಗಸ್ಟ್ 30 ರಂದು “ಸುದ್ದಿ ಮಾಧ್ಯಮದಲ್ಲಿ ಅಂಬೇಡ್ಕರ್ ದೃಷ್ಟಿಕೋನ” ಎಂಬ ವಿಷಯದ ಕುರಿತು ಒಂದು ದಿನದ ವಿಚಾರ ಸಂಕಿರಣವನ್ನು ಆಯೋಜಿಸಿದೆ. ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಖಾತೆ ಹಾಗೂ

“ಸುದ್ದಿ ಮಾಧ್ಯಮದಲ್ಲಿ ಅಂಬೇಡ್ಕರ್ ದೃಷ್ಟಿಕೋನ” ಕುರಿತು ಚಿತ್ರದುರ್ಗದಲ್ಲಿ ವಿಚಾರಸಂಕಿರಣ Read More »

ಕರ್ನಾಟಕ
Scroll to Top