(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 01. ಭಾಗ್ಯಲಕ್ಷ್ಮಿ ಯೋಜನೆಯಡಿ ನೋಂದಾಯಿಸಿರುವ 18 ವರ್ಷ ತುಂಬಿದ ಅರ್ಹ ಫಲಾನುಭವಿಗಳ ಪರಿಪಕ್ವ ಮೊತ್ತ ಪಾವತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಭಾಗ್ಯಲಕ್ಷ್ಮಿ ಯೋಜನೆಯಡಿ ನೊಂದಾಯಿಸಲ್ಪಟ್ಟ 2006-7ನೇ ಸಾಲಿನ 701 ಫಲಾನುಭವಿಗಳಲ್ಲಿ ಅರ್ಹರಾದ (ಮರಣ ಹೊಂದಿದ ಫಲಾನುಭವಿಗಳನ್ನು ಹೊರತುಪಡಿಸಿ) ಫಲಾನುಭವಿಗಳಿಗೆ ಪರಿಪಕ್ವ ಮೊತ್ತ (Maturity Claim Amount) ರೂ. 32,351 ನ್ನು ಎಲ್.ಐ.ಸಿ ಸಂಸ್ಥೆಯಿಂದ ನೇರವಾಗಿ ಫಲಾನುಭವಿಗಳ ಖಾತೆಗೆ ಪಾವತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಇದರಲ್ಲಿ ಕೆಲವು ಫಲಾನುಭವಿಗಳು ವಲಸೆ ಹೋಗಿರುವುದು ಮತ್ತು ದಾಖಲಾತಿಗಳನ್ನು ತಡವಾಗಿ ಸಲ್ಲಿಸುತ್ತಿರುವುದಾಗಿ ತಿಳಿದು ಬಂದಿದ್ದು, ಅರ್ಹ ಫಲಾನುಭವಿಗಳ ಮಾಹಿತಿಯನ್ನು ಪೋಷಕರಿಂದ ಪಡೆದು ಅಕ್ಟೋಬರ್ 31 ರೊಳಗಾಗಿ ಕಡ್ಡಾಯವಾಗಿ ಮೆಚ್ಯೂರಿಟಿ ಕ್ಲೈಮ್ ಲಾಗಿನ್ (Maturity Claim Login) ನಲ್ಲಿ ಅಳವಡಿಸುವ ಪ್ರಕ್ರಿಯೆಯಾಗಿದೆ. ಯೋಜನೆಯಡಿ ನೊಂದಾಯಿಸಿರುವ 18 ವರ್ಷ ತುಂಬಿದ ಅರ್ಹ ಫಲಾನುಭವಿಗಳು ಪರಿಪಕ್ವ ಮೊತ್ತಕ್ಕೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ಅಥವಾ ಅರ್ಜಿ ಸಲ್ಲಿಸಲು ನಗರದ ಉರ್ವ ಮಾರ್ಕೆಟ್ ಕಟ್ಟಡದ 3ನೇ ಮಹಡಿಯಲ್ಲಿರುವ ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನೆ ಕಛೇರಿಯನ್ನು (ದೂರವಾಣಿ ಸಂ.0824-2263199) ಸಂಪರ್ಕಿಸಬಹುದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾಗ್ಯಲಕ್ಷ್ಮಿ ಪರಿಪಕ್ವ ಮೊತ್ತ ಪಾವತಿ: ಅರ್ಜಿ ಆಹ್ವಾನ









