newskadaba

ಬಜ್ಪೆ: ಮನೆಯ ಬೀಗ ಮುರಿದು ಕಳವಿಗೆ ಯತ್ನ

(ನ್ಯೂಸ್‌ ಕಡಬ) newskadaba.com,  ಅ.25 ಬಜ್ಪೆ: ಪೆರ್ಮುದೆ ಬಂಡಸಾಲೆಯ ಬಳಿಯ ಮನೆಯೊಂದರ ಬೀಗ ಮುರಿದು ಒಳನುಗ್ಗಿದ ಕಳ್ಳರು, ಮನೆಯೆಲ್ಲ ಜಾಲಾಡಿ ಬರಿಗೈಯಲ್ಲಿ ಮರಳಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಶಿಕ್ಷಕಿ ಶೋಭಾ ಬ್ರಿಟೋ ಅವರು ಅ.22ರಂದು ತಾಯಿಯ ಮನೆಗೆ ತೆರಳಿದ್ದಾಗ ಅವರ ಮನೆಗೆ ಕಳ್ಳರು ನುಗ್ಗಿದ್ದಾರೆ. ಕಳ್ಳರು ರಾತ್ರಿ 10ರಿಂದ 11ರ ವರೆಗೆ ಮನೆಯಲ್ಲಿದ್ದುದು ಸಿಸಿ ಕೆಮರಾದಲ್ಲಿ ದಾಖಲಾಗಿದೆ ಎಂದು ತಿಳಿದುಬಂದಿದೆ. ಅ.23ರಂದು ರಾತ್ರಿ ಅಲ್ಲಿಯೇ ಸಮೀಪದ ಗುಜರಿ ಅಂಗಡಿಯ ಶಟರ್‌ ಮುರಿಯಲು ಕೂಡ ಯತ್ನಿಸಲಾಗಿದೆ. […]

ಬಜ್ಪೆ: ಮನೆಯ ಬೀಗ ಮುರಿದು ಕಳವಿಗೆ ಯತ್ನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟಕ್ಕೆ ಆಯ್ಕೆ

(ನ್ಯೂಸ್‌ ಕಡಬ) newskadaba.com ಅ.16. ದ.ಕ.ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟ ಹಾಗೂ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ವಾರ್ಷಿಕ ಮಹಾಸಭೆ ಬಿಜೈ ಕಚೇರಿಯಲ್ಲಿ ನಡೆಯಿತು. ಗೌರವಾಧ್ಯಕ್ಷರಾಗಿ ಎಮ್.ಜೆ.ಸಾಲ್ಯಾನ್ ನೇಮಕಗೊಂಡರು. ಅಧ್ಯಕ್ಷರಾಗಿ ಸುನಂದ ಕುಂಬ್ಳೆ, ಕಾರ್ಯದರ್ಶಿಯಾಗಿ ಡಿ.ಆರ್.ಸುನಂದ ದಂಬೆಕೋಡಿ, ಖಜಾಂಚಿಯಾಗಿ ಜಯಪ್ರಕಾಶ್, ಜತೆ ಕಾರ್ಯದರ್ಶಿಯಾಗಿ ರಾಯಿ ರಾಜ್ ಕುಮಾರ್ ಹಾಗೂ ಇಂದ್ರಾವತಿ ಆಯ್ಕೆಯಾದರು. ರಫೀಕ್ ಕುಕ್ಕಾಡಿ ಸ್ವಾಗತಿಸಿದರು.

ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟಕ್ಕೆ ಆಯ್ಕೆ Read More »

ಕರಾವಳಿ

ಸಾರ್ವಕಾಲಿಕ ದಾಖಲೆ ಬರೆದ ಚಿನ್ನ, ಬೆಳ್ಳಿ..!

(ನ್ಯೂಸ್‌ ಕಡಬ) newskadaba.com ಅ. 15. ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಒಂದೇ ದಿನದಲ್ಲಿ 2,850 ರೂ. ಏರಿಕೆಯಾಗುವುದರ ಮೂಲಕ 10 ಗ್ರಾಂಗೆ 1,30,800 ರೂ. ತಲುಪಿದೆ. ಅಖಿಲ ಭಾರತ ಸರಾಫಾ ಸಂಘದ ಪ್ರಕಾರ, 99.9 ಪ್ರತಿಶತ ಶುದ್ಧತೆಯ ಅಮೂಲ್ಯ ಲೋಹ ಸೋಮವಾರ 10 ಗ್ರಾಂಗೆ 1,27,950 ರೂ.ಗೆ ಮುಕ್ತಾಯಗೊಂಡಿತ್ತು. 99.5 ಪ್ರತಿಶತ ಶುದ್ಧ ಚಿನ್ನವು ಮಂಗಳವಾರ 2,850 ರೂ. ಏರಿಕೆಯಾಗಿ 10 ಗ್ರಾಂಗೆ (ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ) ದಾಖಲೆಯ 1,30,200 ರೂ. ತಲುಪಿದೆ. ಬಂಗಾರದ ಬೆಲೆ

ಸಾರ್ವಕಾಲಿಕ ದಾಖಲೆ ಬರೆದ ಚಿನ್ನ, ಬೆಳ್ಳಿ..! Read More »

ರಾಷ್ಟ್ರೀಯ ನ್ಯೂಸ್
crime, arrest, suspected

35 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಅರೆಸ್ಟ್..!

(ನ್ಯೂಸ್‌ ಕಡಬ) newskadaba.com ಅ. 15. 35 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಕುರಿತು ವರದಿಯಾಗಿದೆ.   ಬಂಧಿತ ಆರೋಪಿಯನ್ನು ಕೇರಳದ ತ್ರಿಶೂರ್‌ ಜಿಲ್ಲೆಯ ನಾಟಿ ಮನೆಯ ಬಾಲನ್(73) ಎಂದು ಗುರುತಿಸಲಾಗಿದೆ. 1990 ನೇ ವರ್ಷದಲ್ಲಿ ಸುಳ್ಯ ತಾಲ್ಲೂಕಿನ ಅಲೆಟ್ಟಿ ಗ್ರಾಮದ ನಾಗಪಟ್ಟಣ ಎಂಬಲ್ಲಿ ಅಕ್ರಮ ಕೂಟ ಸೇರಿ ಶಾಂತಪ್ಪ ಮತ್ತು ಸುಬ್ಬಯ್ಯ ರವರಿಗೆ ತಲ್ವಾರ್ ನಿಂದ ಕಡಿದು ತೀವ್ರ ಸ್ವರೂಪದ ರಕ್ತ ಗಾಯ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್‌ ರಾಣೆಯಲ್ಲಿ ಪ್ರಕರಣ

35 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಅರೆಸ್ಟ್..! Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ: ಎಂಡೋಸಲ್ಫಾನ್ ಸಂತ್ರಸ್ತರಿಗೆ ವಿಶೇಷ ಶಿಬಿರ

(ನ್ಯೂಸ್‌ ಕಡಬ) newskadaba.com  ಅ. 15. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ನಡೆಯಲಿರುವ ವಿಶೇಷ ಆರೋಗ್ಯ ತಪಾಸಣಾ ಶಿಬಿರಗಳನ್ನು ಜಿಲ್ಲೆಯ ಖಾಸಗಿ ವೈದ್ಯಕೀಯ ಕಾಲೇಜುಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 15 ರಂದು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಹಾಗೂ ಅಕ್ಟೋಬರ್ 18 ರಂದು ಪುತ್ತೂರು ತಾಲೂಕಿನ ಪಾಣಾಜೆ ಹಾಗೂ ಅಕ್ಟೋಬರ್ 21 ರಂದು ಬೆಳ್ತಂಗಡಿ ತಾಲೂಕಿನ ಕಣಿಯೂರು, ಪುತ್ತೂರು ತಾಲೂಕಿನ ಕೊಯಿಲ, ಉಪ್ಪಿನಂಗಡಿ, ಸುಳ್ಯ ತಾಲೂಕಿನ ಬೆಳ್ಳಾರೆ ಆರೋಗ್ಯ ಕೇಂದ್ರಗಳಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು

ಕಡಬ: ಎಂಡೋಸಲ್ಫಾನ್ ಸಂತ್ರಸ್ತರಿಗೆ ವಿಶೇಷ ಶಿಬಿರ Read More »

ಕರಾವಳಿ

ಭಾರತದ ಕೆಮ್ಮಿನ ಸಿರಪ್‌ ನಲ್ಲಿ ವಿಷಕಾರಿ ಅಂಶ ಪತ್ತೆಯಾದರೆ ಮಾಹಿತಿ ನೀಡಿ- ವಿಶ್ವಸಂಸ್ಥೆ

(ನ್ಯೂಸ್‌ ಕಡಬ) newskadaba.com  ಅ. 14. ಭಾರತದಲ್ಲಿ ತಯಾರಿಸಲಾಗಿರುವ ಕೆಮ್ಮಿನ ಸಿರಪ್‌ ಗಳಾದ ಕೋಲ್ಡ್ರೀಫ್‌‍, ರೆಸ್ಪಿಫ್ರೆಶ್‌ ಟಿಆರ್‌ ಮತ್ತು ರೀಲೈಫ್‌ ಗಳ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ ಮತ್ತು ಇವುಗಳು ತಮ್ಮ ದೇಶದಲ್ಲಿ ಪತ್ತೆಯಾದರೆ ತಕ್ಷಣ ತಿಳಿಸುವಂತೆ ವಿಶ್ವದಾದ್ಯಂತ ರಾಷ್ಟ್ರೀಯ ನಿಯಂತ್ರಕ ಅಧಿಕಾರಿಗಳನ್ನು ಆಗ್ರಹಿಸಿದೆ ಈ ಕಳಪೆ ಗುಣಮಟ್ಟದ ಉತ್ಪನ್ನಗಳ ಪತ್ತೆ ಮತ್ತು ಪ್ರತಿಕೂಲ ಪರಿಣಾಮಗಳ ಯಾವುದೇ ಘಟನೆ ಅಥವಾ ನಿರೀಕ್ಷಿತ ಪರಿಣಾಮಗಳ ಕೊರತೆಯನ್ನು ತಮ್ಮ ರಾಷ್ಟ್ರೀಯ ನಿಯಂತ್ರಕ ಅಧಿಕಾರಿಗಳಿಗೆ ಅಥವಾ ರಾಷ್ಟ್ರೀಯ ಔಷಧ

ಭಾರತದ ಕೆಮ್ಮಿನ ಸಿರಪ್‌ ನಲ್ಲಿ ವಿಷಕಾರಿ ಅಂಶ ಪತ್ತೆಯಾದರೆ ಮಾಹಿತಿ ನೀಡಿ- ವಿಶ್ವಸಂಸ್ಥೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಹಾಯವಾಣಿ ಆರಂಭ

(ನ್ಯೂಸ್‌ ಕಡಬ) newskadaba.com  ಅ. 14. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸೆ.22 ರಂದು ಪ್ರಾರಂಭಿಸಿದ್ದು, ಸಮೀಕ್ಷೆ ಕಾರ್ಯ ಪೂರ್ಣಗೊಳ್ಳದ ಕಾರಣ ಸರಕಾರದ ಆದೇಶದಂತೆ ಅ.18ರ ವರೆಗೆ ಸಮೀಕ್ಷೆ ಕಾರ್ಯವನ್ನು ಮುಂದೂಡಲಾಗಿದೆ. ಈ ಸಮೀಕ್ಷೆ ಸಮಯದಲ್ಲಿ ಸಮೀಕ್ಷೆದಾರರು ತಮ್ಮ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡದೆ ಬಿಟ್ಟು ಹೋದಲ್ಲಿ ರಾಜ್ಯಮಟ್ಟದ ಸಹಾಯವಾಣಿ 8050770004, ಜಿಲ್ಲಾ ಮಟ್ಟದ ಸಹಾಯವಾಣಿ 0820-2574881, ಉಡುಪಿ/ಬ್ರಹ್ಮಾವರ/ ಕಾಪು ಮಟ್ಟದ ಸಹಾಯವಾಣಿ 0820-2520739, ಬೈಂದೂರು/ಕುಂದಾಪುರ:9972294198, ಕಾರ್ಕಳ-ಹೆಬ್ರಿ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಹಾಯವಾಣಿ ಆರಂಭ Read More »

ಕರಾವಳಿ
crime, arrest, suspected

ಮಂಗಳೂರು ವಿಮಾನ ನಿಲ್ದಾಣದಲ್ಲಿ ಗಾಂಜಾ ಸಾಗಿಸುತ್ತಿದ್ದ ಪ್ರಯಾಣಿಕನ ಬಂಧನ

(ನ್ಯೂಸ್‌ ಕಡಬ) newskadaba.com  ಅ. 14. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬನ ಚೆಕ್-ಇನ್ ಬ್ಯಾಗೇಜ್‌ ನಲ್ಲಿ ಹೈಡ್ರೋಪೋನಿಕ್ ಗಾಂಜಾ ಸಾಗಿಸುತ್ತಿರುವುದು ಕಂಡುಬಂದಿದ್ದು, ಸಿಐಎಸ್‌ಎಫ್ ಆತನನ್ನು ಬಂಧಿಸಿದ ಘಟನೆ ನಡೆದಿದೆ.   ಮೂಲಗಳ ಪ್ರಕಾರ, ಅಕ್ಟೋಬರ್ 13 ರಂದು ಸಂಜೆ 6.10ಕ್ಕೆ ಮುಂಬೈನಿಂದ ಇಂಡಿಗೋ ವಿಮಾನದಲ್ಲಿ ಬಂದ ಶಂಕರ್ ನಾರಾಯಣ್ ಪೊದ್ದಾರ್ ಎಂಬ ಪ್ರಯಾಣಿಕನ ಬಳಿ ಮಾದಕ ವಸ್ತುಗಳು ಇರಬಹುದು ಎಂಬ ಮಾಹಿತಿ ಬಂದ  ಮೇರೆಗೆ ಕಾರ್ಯಚರಣೆ ನಡೆಸಿದ ಸಿಐಎಸ್‌ಎಫ್‌ ನ ಸಿಐಡಬ್ಲ್ಯೂ ತಂಡ, ಆತನ ಲಗೇಜ್‌

ಮಂಗಳೂರು ವಿಮಾನ ನಿಲ್ದಾಣದಲ್ಲಿ ಗಾಂಜಾ ಸಾಗಿಸುತ್ತಿದ್ದ ಪ್ರಯಾಣಿಕನ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ದಕ್ಷಿಣ ಕನ್ನಡದಲ್ಲಿ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮ ಆರಂಭ

(ನ್ಯೂಸ್‌ ಕಡಬ) newskadaba.com  ಅ. 14. ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಮನೆ ಮನೆಗೆ ಪೊಲೀಸ್’ ಎಂಬ ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಆದರೆ ಸಾಕಷ್ಟು ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಸೀಮಿತ ಪ್ರಚಾರದ ಕೊರತೆಯಿಂದಾಗಿ, ಈ ಕಾರ್ಯಕ್ರಮದ ಬಗ್ಗೆ ದಕ್ಷಿಣ ಕನ್ನಡ ನಿವಾಸಿಗಳಲ್ಲಿ ಗೊಂದಲ ಮತ್ತು ಕಳವಳವನ್ನು ಉಂಟುಮಾಡಿದೆ. ಸಮಾಜದಲ್ಲಿ ಸುರಕ್ಷತೆ ಮತ್ತು ಭದ್ರತೆಯ ಭಾವನೆಯನ್ನು ಮೂಡಿಸುವುದರ ಜೊತೆಗೆ, ಪೊಲೀಸರು ಮತ್ತು ಸಾರ್ವಜನಿಕರ ನಡುವೆ ವಿಶ್ವಾಸವನ್ನು ಬೆಳೆಸುವುದು ಕಾರ್ಯಕ್ರಮದ ಪ್ರಾಥಮಿಕ ಉದ್ದೇಶವಾಗಿದೆ. ಆದರೂ, ಅನೇಕ

ದಕ್ಷಿಣ ಕನ್ನಡದಲ್ಲಿ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮ ಆರಂಭ Read More »

ಕರ್ನಾಟಕ

ಹುಡುಗಿ ನೋಡುವ ವಿಚಾರದಲ್ಲಿ ಫೋಟೋ, ವೀಡಿಯೋ ತೆಗೆದು ಬೆದರಿಕೆ- ಪ್ರಕರಣ ದಾಖಲು

(ನ್ಯೂಸ್‌ ಕಡಬ) newskadaba.com  ಅ. 14. ಹುಡುಗಿ ನೋಡುವ ವಿಚಾರದಲ್ಲಿ ಫೋಟೋ, ವೀಡಿಯೋ ತೆಗೆದು ಬೆದರಿಕೆ ಒಡ್ಡಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದ ಕೇರಳ ನಿವಾಸಿ ಮುಹಮ್ಮದ್ ಅಶ್ರಫ್ ತಾವರಕಡನ್ ಎಂಬವರು 2024ರ ಸೆಪ್ಟೆಂಬರ್ ನಲ್ಲಿ ಮದುವೆಯ ಸಲುವಾಗಿ ಮಂಗಳೂರಿಗೆ ಬಂದಿದ್ದು, ಅಲ್ಲಿಗೆ ಕರೆಸಿದ ಆರೋಪಿಗಳು ಅವರನ್ನು ಹೆಣ್ಣು ನೋಡುವ ನೆಪದಲ್ಲಿ ಫೋಟೋ, ವಿಡಿಯೋ ತೆಗೆದು, ನಂತರ ಅವುಗಳನ್ನು ಲೀಕ್ ಮಾಡುವುದಾಗಿ ಬೆದರಿಸಿ 44.80 ಲಕ್ಷ ರೂಪಾಯಿ ಹಣ

ಹುಡುಗಿ ನೋಡುವ ವಿಚಾರದಲ್ಲಿ ಫೋಟೋ, ವೀಡಿಯೋ ತೆಗೆದು ಬೆದರಿಕೆ- ಪ್ರಕರಣ ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top