newskadaba

ವಿಚ್ಛೇದನಕ್ಕೆಂದು ಬಂದಿದ್ದ ಜೋಡಿಗಳು ಮತ್ತೆ ಒಂದಾದರು

(ನ್ಯೂಸ್ ಕಡಬ) newskadaba.com ಕೊಪ್ಪಳ, ಫೆ.11.   ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿ ಮತ್ತೇ ಒಂದಾಗಿರುವ ದಂಪತಿಗಳು. ನಾಲ್ಕು ಜೋಡಿಯ ವಿವಾಹ ವಿಚ್ಚೇದನ ಅರ್ಜಿ ಏಕಕಾಲಕ್ಕೆ ಸುಖಾಂತ್ಯ ಕಂಡಿರೋ ಅಪರೂಪದ ಪ್ರಕರಣ ಗಂಗಾವತಿಯ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಡೆದಿದೆ.‌ ಸಣ್ಣ–ಪುಟ್ಟ ಜಗಳ ಮತ್ತು ಮನಸ್ತಾಪದ ಕಾರಣ ನೀಡಿ, ಗಂಗಾವತಿ ತಾಲೂಕಿನ ವಿವಿಧ ಗ್ರಾಮದ ದಂಪತಿಗಳಾದ ದ್ಯಾವಣ್ಣ ‌ನಾಯಕ–ಅನಸೂಯ, ವಿರೇಶ– ಜಾನಕಮ್ಮ, ಶ್ರೀನಿವಾಸ – ತುಳಸಿದೇವಿ, ನಿಂಗಪ್ಪ– ಮಮತಾ ಗಂಗಾವತಿ ಕೋರ್ಟ್​ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಸುಮಾರು ‌ಎರಡು ವರ್ಷಗಳ ವಿಚಾರಣೆ ನಂತರ, ಇಂದು ನಡೆದ ರಾಷ್ಟ್ರೀಯ ಲೋಕ್ ಅದಾಲತ್​ನಲ್ಲಿ ನಾಲ್ಕು ಜೋಡಿಗಳು ಮತ್ತೇ ಒಂದಾಗಿದ್ದಾರೆ […]

ವಿಚ್ಛೇದನಕ್ಕೆಂದು ಬಂದಿದ್ದ ಜೋಡಿಗಳು ಮತ್ತೆ ಒಂದಾದರು Read More »

ಕರ್ನಾಟಕ

DCFವೆಂಕಟೇಶ್ ಮನೆ ಮೇಲೆ‌ ಲೋಕಾಯುಕ್ತ ದಾಳಿ ..  ➤ಕೆಜಿಗಟ್ಟಲೆ ಚಿನ್ನ-ಬೆಳ್ಳಿ ಪತ್ತೆ

(ನ್ಯೂಸ್ ಕಡಬ) newskadaba.com ಕೋಲಾರ, ಫೆ.11.  ಕೋಲಾರದ DCF ವೆಂಕಟೇಶ್​ ಬಳಿ ಕೆಜಿಗಟ್ಟಲೆ ಚಿನ್ನ-ಬೆಳ್ಳಿ ಪತ್ತೆಯಾಗಿದ್ದು, ಲೋಕಾಯುಕ್ತ ಅಧಿಕಾರಿಗಳು ನಿನ್ನೆ ಇಡೀ ದಿನ ದಾಳಿ ಮಾಡಿದ್ದರು. 8 ಕೆ.ಜಿ.ಬೆಳ್ಳಿ ,1 KG 300 ಗ್ರಾಂ ಚಿನ್ನಾಭರಣಗಳು ವಶಕ್ಕೆ ಪಡೆಯಲಾಗಿದೆ ವರದಿ ತಿಳಿಸಿದೆ. ಲೋಕಾಯುಕ್ತ ಕೃಷಿ ಜಮೀನು, ಸೈಟ್​ಗಳ ದಾಖಲೆ ವಶಕ್ಕೆ ಪಡೆದಿದ್ದಾರೆ. ವೆಂಕಟೇಶ್ ಸಾತನೂರು‌, ಮಾಗಡಿ‌, ಮಧುಗಿರಿಯಲ್ಲಿ ಕೃಷಿ ಭೂಮಿ ಹೊಂದಿದ್ದರು. DCF ಬೆಂಗಳೂರಿನ ವಿಜಯನಗರದಲ್ಲಿ ವಸತಿ ಕಟ್ಟಡ, ‌ ನೆಲಮಂಗ ಮತ್ತು ಮಾಲೂರುನಲ್ಲಿ ಸೈಟ್ ಹೊಂದಿದ್ದರು.

DCFವೆಂಕಟೇಶ್ ಮನೆ ಮೇಲೆ‌ ಲೋಕಾಯುಕ್ತ ದಾಳಿ ..  ➤ಕೆಜಿಗಟ್ಟಲೆ ಚಿನ್ನ-ಬೆಳ್ಳಿ ಪತ್ತೆ Read More »

ಕರ್ನಾಟಕ

ಕೈಗಾರಿಕೆಗಳಲ್ಲಿ ಶೇ 80 ರಷ್ಟು ಕನ್ನಡಿಗರಿಗೆ ಉದ್ಯೋಗ ➤ಶ್ರೀರಾಮುಲು‌

(ನ್ಯೂಸ್ ಕಡಬ) newskadaba.com ಬಳ್ಳಾರಿ, ಫೆ.11.  ನಗರದ ರಾಘವ ಕಲಾ ಮಂದಿರದಲ್ಲಿ ಹಮ್ಮಿಕೊಂಡಿದ್ದ, ಬಳ್ಳಾರಿ ತಾಲೂಕಿನ ಆರನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟನೆ ಮಾಡಿ, ಮಾತನಾಡಿದವರು ಕನ್ನಡ ನಾಡು ನುಡಿಯನ್ನು ಮತ್ತಷ್ಟು ಶ್ರೀಮಂತಗೊಳಿಸ ಬೇಕಿದೆ ಅದು ಎಲ್ಲಾ ಕನ್ನಡಿಗರ ಕರ್ತವ್ಯ ಎಂದು  ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ರಾಜ್ಯದಲ್ಲಿನ ಉದ್ದಿಮೆಗಳಲ್ಲಿ ಶೇ 80 ರಷ್ಟು ಉದ್ಯೋಗವನ್ನು ಕನ್ನಡಿಗರಿಗೆ ನೀಡುವಲ್ಲಿ ಸರ್ಕಾರ ಬದ್ದವಾಗಿದೆಂದರು.‌ ಗಡಿ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಿದೆ. ಕನ್ನಡ ನಾಡಿನ ಗಡಿ ಭಾಗದ ಶಾಲೆಗಳ ಅಭಿವೃದ್ಧಿಗೆ

ಕೈಗಾರಿಕೆಗಳಲ್ಲಿ ಶೇ 80 ರಷ್ಟು ಕನ್ನಡಿಗರಿಗೆ ಉದ್ಯೋಗ ➤ಶ್ರೀರಾಮುಲು‌ Read More »

ಕರ್ನಾಟಕ

ಡಾ.ಬಿ.ಆರ್. ಅಂಬೇಡ್ಕರ್ ಜೀವನಾಧಾರಿತ ” ಕ್ರಾಂತಿ ಸೂರ್ಯ ಮಹಾನಾಟಕದ ” ಭಿತ್ತಿ ಪತ್ರ ಬಿಡುಗಡೆ

(ನ್ಯೂಸ್ ಕಡಬ) newskadaba.com ಬೀದರ್, ಫೆ.11.  ಡಾ.ಅಂಬೇಡ್ಕರ್ ವೃತ್ತದಲ್ಲಿ ಬುಧ್ದ ಬೆಳಕು ಟ್ರಸ್ಟ್ ಹಾಗೂ ಕ್ರಾಂತಿ ಸೂರ್ಯ ಮಹಾನಾಟಕ ಪ್ರದರ್ಶನ ಸ್ವಾಗತ ಸಮಿತಿ ವತಿಯಿಂದ ದಿನಾಂಕ 19-2-2023 ರಂದು ನೆಹರು ಸ್ಟೇಡಿಯಂ ನಲ್ಲಿ ನಡೆಯಲಿರುವ ಸಂವಿಧಾನ ಶಿಲ್ಪಿ, ವಿಶ್ವಜ್ಞಾನಿ, ವಿಶ್ವರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ ಜೀವನಾಧಾರಿತ ಐತಿಹಾಸಿಕ ಕ್ರಾಂತಿ ಸೂರ್ಯ ಮಹಾನಾಟಕ ಪ್ರಯುಕ್ತ ಭೀತಿ ಪತ್ರ ಬಿಡುಗಡೆ ಸಮಾರಂಭ ಜರುಗಿತು ಎಂದು ವರದಿಯಾಗಿದೆ. ಪೂಜ್ಯ ಭಂತೆ ಜ್ಞಾನ ಸಾಗರ ರವರು ಸಾನಿಧ್ಯ ವಹಿಸಿದರು ಸರ್ಕಾರಿ ನೌಕರರ ಸಂಘದ ರಾಜ್ಯ

ಡಾ.ಬಿ.ಆರ್. ಅಂಬೇಡ್ಕರ್ ಜೀವನಾಧಾರಿತ ” ಕ್ರಾಂತಿ ಸೂರ್ಯ ಮಹಾನಾಟಕದ ” ಭಿತ್ತಿ ಪತ್ರ ಬಿಡುಗಡೆ Read More »

ಕರ್ನಾಟಕ

ಭೂಕಂಪನಕ್ಕೆ ನಲುಗಿದ ಟರ್ಕಿ, ಸಿರಿಯಾ; ➤‌ಮೃತರ ಸಂಖ್ಯೆ 24,000ಕ್ಕೆ ಏರಿಕೆ

(ನ್ಯೂಸ್ ಕಡಬ) newskadaba.com ಇಸ್ತಾನ್‌ಬುಲ್‌, ಫೆ.11. ಶತಮಾನದ ಭೀಕರ ಭೂಕಂಪಕ್ಕೆ ನಡುಗಿಹೋದ ಟರ್ಕಿ ಮತ್ತು ಸಿರಿಯಾದಲ್ಲಿ ಮೃತರ ಸಂಖ್ಯೆ 24 ಸಾವಿರ ಗಡಿ ದಾಟಿದೆ. ಅವಶೇಷಗಳಡಿಯಿಂದ ಹೆಣಗಳ ಕೊಳೆತ ವಾಸನೆ ಬರುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಟರ್ಕಿ ಹಾಗೂ ಸಿರಿಯಾ ಸರಕಾರಗಳು ಹರಸಾಹಸಪಡುತ್ತಿವೆ ಎಂದು ವರದಿಯಾಗಿದೆ.  

ಭೂಕಂಪನಕ್ಕೆ ನಲುಗಿದ ಟರ್ಕಿ, ಸಿರಿಯಾ; ➤‌ಮೃತರ ಸಂಖ್ಯೆ 24,000ಕ್ಕೆ ಏರಿಕೆ Read More »

ಅಂತರ್ರಾಷ್ಟ್ರೀಯ ನ್ಯೂಸ್

ಮೊಬೈಲ್‌ ಟವರ್‌ ಏರಿ ಕುಳಿತ ಕಾರ್ಮಿಕ

(ನ್ಯೂಸ್ ಕಡಬ) newskadaba.com ಧಾರವಾಡ, ಫೆ.11. ಜಲ ಮಂಡಳಿ ಗುತ್ತಿಗೆ ಕಾರ್ಮಿಕರಿಗೆ ವೇತನ ಬಿಡುಗಡೆ ಮಾಡಬೇಕು ಹಾಗೂ ಗುತ್ತಿಗೆ ಕಾರ್ಮಿಕರನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಜಲ ಮಂಡಳಿ ಗುತ್ತಿಗೆ ಕಾರ್ಮಿಕ ಮೊಬೈಲ್‌ ಟವರ್‌ ಏರಿ ಕುಳಿತ ಘಟನೆ  ನಗರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಜ್ಯುಬಲಿ ವೃತ್ತದ ಬಳಿವಿರುವ  ಮೊಬೈಲ್‌ ಟವರ್‌ ಏರಿ ಕುಳಿತ ಕಾರ್ಮಿಕ ಒಂದೆಡೆಯಾದರೆ, ಇನ್ನೊಂದೆಡೆ ಗುತ್ತಿಗೆ ಕಾರ್ಮಿಕರು ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಗಂಭೀರವಾಗಿ ಪರಿಗಣಿಸಿ ನಮ್ಮನ್ನು ಕೆಲಸಕ್ಕೆ

ಮೊಬೈಲ್‌ ಟವರ್‌ ಏರಿ ಕುಳಿತ ಕಾರ್ಮಿಕ Read More »

ಕರ್ನಾಟಕ

ಮಹಿಳೆ ಮೇಲೆ ಅತ್ಯಾಚಾರ‌ ಆರೋಪ:  ಅವಳಿ ಸಹೋದರರ ತಲೆ ಬೋಳಿಸಿ ಮೆರವಣಿಗೆ ಮಾಡಿದ ಪ್ರಕರಣ ➤‌ 7 ಜನ ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ವಿಜಯಪುರ, ಫೆ.11. ಮಹಾರಾಷ್ಟ್ರದಲ್ಲಿ ಮಹಿಳೆ ಮೇಲೆ ಅತ್ಯಾಚಾರ‌ಕ್ಕೆ ಯತ್ನಿಸಿದ ಕಾರಣಕ್ಕಾಗಿ, ತಾಲೂಕಿನ ಹೆಗಡಿಹಾಳ ತಾಂಡಾದಲ್ಲಿ ಅವಳಿ ಸಹೋದರಾರ ಪೀರು ಹಾಗೂ ರಾಜು ತಲೆ ಬೋಳಿಸಿ ತಲೆಗೆ ಸುಣ್ಣ ಬಳಿದು, ಕೊರಳಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ಆರೋಪಿಗಳಾದ ಗ್ರಾ.ಪಂ.ಅಧ್ಯಕ್ಷ ರಾಮಸಿಂಗ್ ಲಮಾಣಿ, ಅನಿಲ್​ ಲಮಾಣಿ, ಮಂಗೇಶ್, ಹೇಮು, ರಾಜು, ಚನ್ನು ಹಾಗೂ ರಮೇಶ್​ನನ್ನು ಇದೀಗ ನಗರದ ಪೊಲೀಸರು ಬಂಧಿಸಿದ್ದು, ಐಪಿಸಿ ಸೆಕ್ಷನ್ 504, 506

ಮಹಿಳೆ ಮೇಲೆ ಅತ್ಯಾಚಾರ‌ ಆರೋಪ:  ಅವಳಿ ಸಹೋದರರ ತಲೆ ಬೋಳಿಸಿ ಮೆರವಣಿಗೆ ಮಾಡಿದ ಪ್ರಕರಣ ➤‌ 7 ಜನ ಆರೋಪಿಗಳ ಬಂಧನ Read More »

ರಾಷ್ಟ್ರೀಯ ನ್ಯೂಸ್

ಭಾರೀ ಭೂಕಂಪದ ಅಪಾಯದಲ್ಲಿ ಭಾರತ! ➤ ಹಿಮಾಲಯ ಪ್ರದೇಶಕ್ಕೆ ಹೆಚ್ಚು ಭೀತಿ

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.11.  ಉತ್ತರಾಖಂಡದ ಜೋಶಿಮಠದಲ್ಲಿ ಭೂಮಿ ಕುಸಿದು ನೂರಾರು ಮನೆಗಳ ಗೋಡೆಗಳಲ್ಲಿ ಬಿರುಕುಬಿಟ್ಟಿದ್ದ  ನೆನಪು ಇನ್ನೂ ಮಾಸಿಲ್ಲ. ಅಷ್ಟರಲ್ಲೇ ಮತ್ತೊಂದು ಆತಂಕಕಾರಿ ಮಾಹಿತಿಯನ್ನು ಐಐಟಿ ಕಾನ್ಪುರದ ಭೂವಿಜ್ಞಾನಿ ಜಾವೇದ್ ಮಲಿಕ್  ಬಹಿರಂಗಪಡಿಸಿದ್ದಾರೆ. ಭಾರೀ  ಭೂಕಂಪದ ಅಪಾಯದಲ್ಲಿ ಭಾರತವಿದೆ. ಟರ್ಕಿ, ಸಿರಿಯಾದಂತೆಯೇ ಭಾರತದಲ್ಲಿಯೂ ಭೂಕಂಪಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಮಲಿಕ್ ತಿಳಿಸಿದ್ದಾರೆ ದೇಶದಲ್ಲಿ ಸಂಭವಿಸಿದ ಭೂಕಂಪಗಳ, ಭೂಮಿಯಲ್ಲಿನ ಬದಲಾವಣೆಗಳು ಮತ್ತು ಪರಿಣಾಮಗಳ ಬಗ್ಗೆ ದೀರ್ಘಾವಧಿಯಿಂದ ಮಲಿಕ್ ಅವರು ಸಂಶೋಧನೆ ನಡೆಸುತ್ತಿದ್ದಾರೆ. ದೇಶದ ಕೆಲವು ಪ್ರದೇಶಗಳಲ್ಲಿ 7.5ಕ್ಕಿಂತಲೂ

ಭಾರೀ ಭೂಕಂಪದ ಅಪಾಯದಲ್ಲಿ ಭಾರತ! ➤ ಹಿಮಾಲಯ ಪ್ರದೇಶಕ್ಕೆ ಹೆಚ್ಚು ಭೀತಿ Read More »

ಕರ್ನಾಟಕ

ಮಗನ ಹುಟ್ಟು ಹಬ್ಬದ ದಿನದಂದೇ ತಂದೆ ಮೃತ್ಯು

(ನ್ಯೂಸ್ ಕಡಬ)newskadaba.com.ಮಂಡ್ಯ, ಫೆ.11. ಮಗನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಮಾಡಲು ಕೇಕ್​ ತರಲು ಹೋದ ವ್ಯಕ್ತಿಯ ತಲೆ ಮೇಲೆ ಮರ ಬಿದ್ದು ದುರಂತ ಸಾವನ್ನಪ್ಪಿದ್ದಾರೆ. ಈ ಘಟನೆ ಮಂಡ್ಯ ನಗರದ ತಾವರಗೆರೆಯ ಚಲುವಯ್ಯ ಪಾರ್ಕ್ ಬಳಿ ನಡೆದಿದೆ. ಉದಯ್ ಕುಮಾರ್ ಮೃತ ದುರ್ವೈವಿ. ಪುತ್ರ ದಿಕ್ಷಿತ್ ನ 7ನೇ ವರ್ಷದ ಹುಟ್ಟು ಹಬ್ಬವಿತ್ತು. ಈ ಹಿನ್ನೆಲೆಯಲ್ಲಿ ಉದಯ್ ಕುಮಾರ್, ಬೈಕ್​ನಲ್ಲಿ ಪತ್ನಿ ಧನಲಕ್ಷ್ಮೀ ಜೊತೆ ಕೇಕ್​ ತರಲು ಹೋಗಿದ್ದಾರೆ. ಆದರೆ, ದಾರಿ  ಮಧ್ಯ ಚಲುವಯ್ಯ ಪಾರ್ಕ್ ಬಳಿ ಬರುತ್ತಿದ್ದಂತೆ

ಮಗನ ಹುಟ್ಟು ಹಬ್ಬದ ದಿನದಂದೇ ತಂದೆ ಮೃತ್ಯು Read More »

ಕರ್ನಾಟಕ

 ಸರಣಿ ಅಪಘಾತ ➤ ಅದೃಷ್ಟವಶಾತ್  ತಪ್ಪಿದ ಪ್ರಾಣಾಪಾಯ

(ನ್ಯೂಸ್ ಕಡಬ)newskadaba.com.ಬೆಂಗಳೂರು. ಫೆ.11. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್, ಗೂಡ್ಸ್ ವಾಹನ, ಲಾರಿ ಹಾಗೂ ಕಾರಿನ ನಡುವೆ ಸರಣಿ ಅಪಘಾತ  ಸಂಭವಿಸಿದ  ಘಟನೆ ಬೆಂಗಳೂರು ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ನಡೆದಿದೆ. ಸರಣಿ ಅಪಘಾತದಲ್ಲಿ ನಾಲ್ಕು ವಾಹನಗಳು ಜಖಂ ಆಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಸಾಗರ ಕಡೆಯಿಂದ ಬಂದ ಖಾಸಗಿ ಬಸ್, ಚೋರಡಿ ಗ್ರಾಮದಲ್ಲಿ ಪ್ರಯಾಣಿಕರು ಇಳಿಯಲು ನಿಲ್ಲಿಸಲಾಗಿತ್ತು. ಈ ವೇಳೆ ಹಿಂಬದಿಯಿಂದ ಗೂಡ್ಸ್ ಆಟೋ ಬಂದಿದೆ. ಅದರ ಹಿಂದೆ ಬಂದ ಲಾರಿಯೊಂದು, ಗೂಡ್ಸ್

 ಸರಣಿ ಅಪಘಾತ ➤ ಅದೃಷ್ಟವಶಾತ್  ತಪ್ಪಿದ ಪ್ರಾಣಾಪಾಯ Read More »

ಕರ್ನಾಟಕ
Scroll to Top